ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ

ಸುರಪುರ ತಾಲೂಕಿನ ಮಾಚಗುಂಡಾಳದಲ್ಲಿ ಮಂಗಳವಾರ ಶಾಸಕ ರಾಜಾ ವೇಣುಗೋಪಾಲ ನಾಯಕ ರಸ್ತೆ ಮತ್ತು ಸೇತುವೆ ಕಾಮಗಾರಿಗೆ ಚಾಲನೆ ನೀಡಿದರು. ನಿಂಗರಾಜ ಬಾಚಿಮಟ್ಟಿ, ದೊಡ್ಡ ದೇಸಾಯಿ, ಬೀಂರಾಯ ಮೂಲಿಮನಿ ಇತರರಿದ್ದರು.
ಸುರಪುರ ತಾಲೂಕಿನ ಮಾಚಗುಂಡಾಳದಲ್ಲಿ ಮಂಗಳವಾರ ಶಾಸಕ ರಾಜಾ ವೇಣುಗೋಪಾಲ ನಾಯಕ ರಸ್ತೆ ಮತ್ತು ಸೇತುವೆ ಕಾಮಗಾರಿಗೆ ಚಾಲನೆ ನೀಡಿದರು. ನಿಂಗರಾಜ ಬಾಚಿಮಟ್ಟಿ, ದೊಡ್ಡ ದೇಸಾಯಿ, ಬೀಂರಾಯ ಮೂಲಿಮನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ರಾಜಾ ವೇಣುಗೋಪಾಲ ನಾಯಕ ಭರವಸೆ
  • ಮಾಚಗುಂಡಾಳದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ
ಸುರಪುರ: ಗ್ರಾಮೀಣ ರಸ್ತೆಗಳು ಸೇರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸದಾ ನಾನು ಬದ್ಧನಾಗಿದ್ದೇನೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ತಾಲೂಕಿನ ಮಾಚಗುಂಡಾಳ ರಸ್ತೆ ಮತ್ತು ಹಾವಿನಾಳ ಗ್ರಾಮದ ಹತ್ತಿರ ಸೇತುವೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಮತೇತ್ರದ ಪ್ರತಿಯೊಂದು ಹಳ್ಳಿ ಹಾಗೂ ಗ್ರಾಮೀಣ ಭಾಗಕ್ಕೂ ಮೂಲಭೂತ ಸೌಕರ್ಯ ಕಲ್ಪಿಸುವ ಮೂಲಕ ಸುರಪುರ ೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
2025&26ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್​ಡಿಬಿ) ಯೋಜನೆಯಲ್ಲಿ ಈ ರಸ್ತೆ ಕಾಮಗಾರ್ನಿ 62 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮತ್ತು 2024&25ನೇ ಸಾಲಿನ ಮಳೆ ಪರಿಹಾರ ಕಾರ್ಯಕ್ರಮದಡಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಹಾವಿನಾಳ ಗ್ರಾಮದ ಹತ್ತಿರದ ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶಗಳ ರಸ್ತೆ ಸಂಪರ್ಕ ಸುಧಾರಣೆಗೆ ಈ ಕಾಮಗಾರಿ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು.
ಈ ರಸ್ತೆ ಮತ್ತು ಸೇತುವೆ ನಿರ್ಮಾಣದಿಂದ ಆ ಭಾಗದ ಸುತ್ತಮುತ್ತಲಿನ ಜನರಿಗೆ ಮತ್ತು ರೈತರ ಸುಗಮ ಪ್ರಯಾಣಕ್ಕೆ ಅನುಕೂಲವಾಗಲಿದೆ. ಅಲ್ಲದೆ ಕಾಮಗಾರಿಯನ್ನು ಗುಣಮಟ್ಟ ಮತ್ತು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ನಿಂಗರಾಜ್​ ಬಾಚಿಮಟ್ಟಿ, ಮುಖಂಡರಾದ ದೊಡ್ಡ ದೇಸಾಯಿ ದೇವರಗೋನಾಲ, ಮಲ್ಲಣ್ಣ ಸಾಹು ಮುಧೋಳ, ನಾಗಪ್ಪ ದೇವರಗೋನಾಲ, ಬೀರಲಿಂಗ ಬಾದ್ಯಾಪೂರ, ಭೀಮರಾಯ ಮೂಲಿಮನಿ, ರಾವೇಂದ್ರ ಮಂಚಗುಂಡಾಳ, ಧರ್ಮರಾಜ್​ ಬಡಿಗೇರ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net