ಹಿರಿಯರ ಆರೋಗ್ಯ ತಪಾಸಣೆಗೆ ಬದ್ಧ

ಆರ್​ಡಿಪಿಆರ್​, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೇದ ಆಸ್ಪತ್ರೆ ಯಾದಗಿರಿ ಮತ್ತು ಕಲಿಕೆ ಟಾಟಾ ಟ್ರಸ್ಟ್​ನಿಂದ ಶುಕ್ರವಾರ ದೋರನಹಳ್ಳಿಯಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ಜಂಭಯ್ಯ ಸ್ವಾಮಿ ಗಣಾಚಾರಿ, ಅಲ್ಲವುದ್ದೀನ್​, ಡಾ.ಉಮೇಶ ಇತರರಿದ್ದರು.
ಆರ್​ಡಿಪಿಆರ್​, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೇದ ಆಸ್ಪತ್ರೆ ಯಾದಗಿರಿ ಮತ್ತು ಕಲಿಕೆ ಟಾಟಾ ಟ್ರಸ್ಟ್​ನಿಂದ ಶುಕ್ರವಾರ ದೋರನಹಳ್ಳಿಯಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ಜಂಭಯ್ಯ ಸ್ವಾಮಿ ಗಣಾಚಾರಿ, ಅಲ್ಲವುದ್ದೀನ್​, ಡಾ.ಉಮೇಶ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಲಯ ಅಧಿಕಾರಿ ಗಣಾಚಾರಿ ಹೇಳಿಕೆ
  • ವಿವಿಧ ಇಲಾಖೆ ಹಾಗೂ ಕಲಿಕಾ ಟ್ರಸ್ಟ್​ನಿಂದ ಆಯೋಜನೆ
ದೋರನಹಳ್ಳಿ: ಕೂಲಿ ಕಾರ್ಮಿಕರು, ಆರ್ಥಿಕವಾಗಿ ದುರ್ಬಲರಿರುವ ಹಿರಿಯ ನಾಗರಿಕರ ಆರೋಗ್ಯ ತಪಾಸಣೆಗೆ ನಮ್ಮ ಸೇವೆ ಸದಾ ಸಿದ್ಧ ಎಂದು ವಲಯ ಆರೋಗ್ಯ ತಪಾಸಣಾಧಿಕಾರಿ ಜಂಭಯ್ಯ ಸ್ವಾಮಿ ಗಣಾಚಾರಿ ಹೇಳಿದರು.
ಆರ್​ಡಿಪಿಆರ್​, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೇದ ಆಸ್ಪತ್ರೆ ಯಾದಗಿರಿ ಮತ್ತು ಕಲಿಕೆ ಟಾಟಾ ಟ್ರಸ್ಟ್​$ಪಪಂ ಗ್ರಂಥಾಲಯದ ಸಹಯೋಗದಿಂದ ಹಮ್ಮಿಕೊಂಡ ಹಿರಿಯ ನಾಗರಿಕರ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯ ನಾಗರಿಕರ ಆರೋಗ್ಯ ಸೇವೆಗೆ ನಾವು ಸಿದ್ದ ಎಂದರು.
ಹಿರಿಯರ ಜೀವನ ಸಂತೋಷದಾಯಕವಾಗಿರಿಸಲು ಗ್ರಾಮ ಹಿರಿಯರ ಕೇಂದ್ರ ಕಾರ್ಯಕ್ರಮವ ಅನುಷ್ಠಾನಗೊಳಿಸಿದ್ದು, ಎಲ್ಲ ಅರ್ಹ ಹಿರಿಯ ನಾಗರಿಕರು ಇದರ ಲಾಭ ಪಡೆದುಕೊಳ್ಳಬೇಕು. ಪ್ರತಿ ಕುಟುಂಬವು ಆರ್ಥಿಕವಾಗಿ ಸಶಕ್ತರಿರಲು ಸಾಧ್ಯವಿಲ್ಲ ಕುಟುಂಬದಲ್ಲಿ ಹಿರಿಯ ನಾಗರಿಕರಿಗೆ ಆಸ್ಪತ್ರೆ ಅಗತ್ಯ ಬಂದಾಗ ಒಂದಿಷ್ಟು ಸಹಾಯವಾಗಲಿ ಎಂಬ ಉದ್ದೇಶದಿಂದ ಈ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದರು.
ವಯಸ್ಸಾದ ಮೇಲೆ ಸಹಜವಾಗಿ ದೇಹವು ತನ್ನ ಶಕ್ತಿ ಕ್ರಮೇಣವಾಗಿ ಕಳೆದುಕೊಳ್ಳುತ್ತಾ ಬರುತ್ತದೆ ಆಗ ಅದರಿಂದ ಹಿರಿಯ ನಾಗರಿಕರಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತವೆ ಅವುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಸಮಸ್ಯೆ ಪರಿಹರಿಸಿದರೆ ಮುಪ್ಪಿನವಸ್ಥೆಯಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.
ಕಲಿಕಾ ಟಾಟಾ ಟ್ರಸ್ಟ್​ನ ಕಾರ್ಯಕ್ರಮ ಸಂಯೋಜಕ ಅಲ್ಲವುದ್ದೀನ್​, ಪೌಷ್ಠಿಕ ಆಹಾರ ಮತ್ತು ನಮ್ಮ ಆರೋಗ್ಯ ಕುರಿತು ಹಿರಿಯರ ಜತೆಗೆ ಚರ್ಚೆ ನಡೆಸಿದರು. ನೇತ್ರ ತ ಉಮೇಶ ಕಣ್ಣುಗಳ ಮಹತ್ವ ಕುರಿತು ಮಾಹಿತಿ ನೀಡಿದರು. ನಂತರ ಬಿಪಿ, ಶುಗರ್​ ಮತ್ತು ಕಣ್ಣಿನ ತಪಾಸಣೆ ಮಾಡಿ, ಕನ್ನಡ ಮತ್ತು ಔಷಧವನ್ನು ಉಚಿತವಾಗಿ ವಿತರಿಸಲಾಯಿತು.
ಈ ವೇಳೆ ಪಪಂ ಅಧಿಕಾರಿ ಅರುಣಕುಮಾರ, ಆರೋಗ್ಯ ಇಲಾಖೆ ಸಿಬ್ಬಂದಿ ನಿಕಿತಾ, ವೇದ ಆಸ್ಪತ್ರೆ ವೈದ್ಯ ಡಾ.ಮಹ್ಮದ್​ ರಹಿಮಾನ್​, ಗ್ರಂಥಪಾಲಕ ಹಯ್ಯಾಳಪ್ಪ ಗುಂಟನೂರ್​, ಲ್ಮ ಸೇರಿ ಅನೇಕರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net