ವರದಕ್ಷಿಣೆ ಸಂಪೂರ್ಣ ನಿರ್ಮೂಲನೆಗೆ ಪಣ

ಆಳಂದನಲ್ಲಿ ಹಮ್ಮಿಕೊಂಡಿದ್ದ ಜಂಜಾರ ಸಮಾಜದ ಸಭೆಯನ್ನು ಶ್ರೀ ಮುರಾಹರಿ ಮಹಾರಾಜರು ಉದ್ಘಾಟಿಸಿದರು. ಶ್ರೀ ಸುನೀಲ್​ ಮಹಾರಾಜ, ಶ್ರೀ ಲತಾದೇವಿ, ರಾಜು ಚವ್ಹಾಣ್​, ಕೆ.ಟಿ.ರಾಠೋಡ್​ ಇತರರಿದ್ದರು.
ಆಳಂದನಲ್ಲಿ ಹಮ್ಮಿಕೊಂಡಿದ್ದ ಜಂಜಾರ ಸಮಾಜದ ಸಭೆಯನ್ನು ಶ್ರೀ ಮುರಾಹರಿ ಮಹಾರಾಜರು ಉದ್ಘಾಟಿಸಿದರು. ಶ್ರೀ ಸುನೀಲ್​ ಮಹಾರಾಜ, ಶ್ರೀ ಲತಾದೇವಿ, ರಾಜು ಚವ್ಹಾಣ್​, ಕೆ.ಟಿ.ರಾಠೋಡ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಮುರಾಹರಿ ಮಹಾರಾಜ ನುಡಿ
  • ಆಳಂದನಲ್ಲಿ ಬಂಜಾರ ಸಮಾಜದ ಬೃಹತ್​ ಸಮಾವೇಶ
ಆಳಂದ: ಸಮಾಜಕ್ಕೆ ಅಂಟಿಕೊಂಡಿರುವ ವರದಕ್ಷಿಣೆ ಪಿಡುಗನ್ನು ಸಂಪೂರ್ಣ ನಿಷೇಧಿಸಬೇಕು ಹಾಗೂ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿರಂತರ ಸಮ್ಮೇಳನ ನಡೆಸಲಾಗುತ್ತಿದೆ ಎಂದು ಶ್ರೀ ಮುರಾಹರಿ ಮಹಾರಾಜ ಹೇಳಿದರು.
ರಾಯಲ್​ ಫಂನ್​ ಹಾಲ್​ನಲ್ಲಿ ಬಂಜಾರ ಸಮಾಜದಿಂದ ಸೋಮವಾರ ಹಮ್ಮಿಕೊಂಡಿದ್ದ "ವರದಕ್ಷಿಣೆಮುಕ್ತ ಬಂಜಾರ ಸಮಾಜ' ಮಹಾ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿ, ವರದಕ್ಷಿಣೆ ಎಂಬುದು ಇಂದಿಗೂ ಸಮಾಜವನ್ನು ಕಾಡುತ್ತಿರುವ ದೊಡ್ಡ ಪಿಡುಗಾಗಿದೆ. ಇದನ್ನು ಬೇರುಸಹಿತ ಕಿತ್ತೊಗೆಯುವುದು ಸಮಾಜದ ಜವಾಬ್ದಾರಿಯಾಗಿದೆ. ಇದು ಕೇವಲ ಆರ್ಥಿಕ ವ್ಯವಹಾರವಲ್ಲ, ಹೆಣ್ಣುಮಕ್ಕಳ ನತೆಗೆ ಎಸಗುವ ಅವಮಾನವಾಗಿದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ಪೂರ್ವಜರು ಸರಳತೆ ಮತ್ತು ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಆದರೆ ಇಂದು ಆಧುನಿಕತೆ ಹೆಸರಿನಲ್ಲಿ ಆಡಂಬರ, ಪ್ರತಿಷ್ಠೆಗಾಗಿ ವರದಕ್ಷಿಣೆ ಪಡೆಯುವ ಪ್ರವೃತ್ತಿ ಬೆಳೆಯುತ್ತಿರುವುದು ಆತಂಕಕಾರಿ. ಪ್ರತಿಯೊಂದು ಕುಟುಂಬವೂ ವರದಕ್ಷಿಣೆ ಪಡೆಯುವುದಿಲ್ಲ ಎಂದು ಪ್ರತಿೆ ಸ್ವೀಕರಿಸಬೇಕು ಎಂದು ಕರೆ ನೀಡಿದರು.
ಮುಖಂಡರಾದ ಕೆ.ಟಿ.ರಾಠೋಡ್​, ರಾಜು ಚವ್ಹಾಣ್​ ಮಾತನಾಡಿ, ವರದಕ್ಷಿಣೆ ನಿಮೂರ್ಲನೆ ಹಾಗೂ ಸರಳ ವಿವಾಹಗಳ ಮೂಲಕ ಮಹಿಳೆಯರಿಗೆ ಗೌರವ ಮತ್ತು ಸ್ಥಾನಮಾನ ನೀಡುವ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ದಾರಿದೀಪವಾಗಿವೆ. ಮಹಿಳೆಯರ ಶೋಷಣೆ, ಬಾಲ್ಯವಿವಾಹದಂತಹ ಅನಿಷ್ಠ ಪದ್ಧತಿಗಳ ನಿಮೂರ್ಲನೆಗಾಗಿ ಮಹಿಳೆಯರಿಗೆ ಶಿಣ, ಉದ್ಯೋಗ ನೀಡಿ ಆರ್ಥಿಕ ಸ್ವಾವಲಂಬಿಯಾಗಿಸಲು ಸಮಾಜ ರ್ನಿಣಯ ಕೈಗೊಂಡಿದೆ ಎಂದು ಹೇಳಿದರು.
ವರದಕ್ಷಿಣೆ ಕೊಡುವುದು, ತೆಗೆದುಕೊಳ್ಳುವುದು ಕಾನೂನುಬಾಹಿರವಾಗಿದ್ದು, ಇದರಿಂದ ಕುಟುಂಬಗಳಿಗೆ ಭಾರಿ ಆರ್ಥಿಕ ನಷ್ಟವಾಗುತ್ತದೆ. ಸಾಲದ ಸುಳಿಗೆ ಸಿಲುಕಿ ಬಡತನ ಆವರಿಸುವ ಅಪಾಯವಿದ್ದು, ಇದಕ್ಕಾಗಿ ದೇಶದ ಕಾನೂನಿನಂತೆ ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಶ್ರೀ ಸುನೀಲ್​ ಮಹಾರಾಜ, ಶ್ರೀ ಲತಾದೇವಿ ಆಶೀರ್ವಚನ ನೀಡಿದರು.
ಪ್ರಮುಖರಾದ ಶ್ಯಾಮರಾವ ಪವಾರ್​, ಕಮಲ ರಾಠೋಡ್​, ಸೀತಾರಾಮ ರಾಠೋಡ್​, ಸುಭಾಷ ರಾಠೋಡ್​ ಕೊರಳ್ಳಿ, ಗಂಗಾರಾಮ ಪವಾರ್​, ಮಾಣಿಕ ಜಾಧವ್​, ಸತೀಶ ಚವ್ಹಾಣ್​ ಇತರರಿದ್ದರು. ಶಿವಾಜಿ ರಾಠೋಡ್​ ನಿರೂಪಣೆ ಮಾಡಿದರು.
"

ಮದುವೆ ಎಂಬುದು ಎರಡು ಮನಸ್ಸು ಹಾಗೂ ಕುಟುಂಬಗಳ ಮಧ್ಯದ ಪವಿತ್ರ ಬಂಧನವಾಗಿದೆ. ಆದರೆ ವರದಕ್ಷಿಣೆ ಆಚರಣೆ ಈ ಪವಿತ್ರ ಬಂಧನವನ್ನು ವ್ಯಾಪಾರೀಕರಣಗೊಳಿಸಿ, ಹೆಣ್ಣುಮಕ್ಕಳ ಆತ್ಮಗೌರವಕ್ಕೆ ಧಕ್ಕೆ ತರುತ್ತಿದೆ. ಇದನ್ನು ಬೇರು ಸಮೇತ ಕಿತ್ತೊಗೆಯುವ ಕೆಲಸ ಆಗಬೇಕಿದೆ.

— > ಶ್ರೀ ಮುರಾಹರಿ ಮಹಾರಾಜ, ಬಂಜಾರ ಸಮಾಜ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net