ಕಾಮೆಡ್-ಕೆ ಅಕ್ರಮ: 36 ಅಭ್ಯರ್ಥಿಗಳ ಅಮಾನತು

ಕಾಮೆಡ್- ಕೆ ಪರೀಕ್ಷೆ
ಕಾಮೆಡ್- ಕೆ ಪರೀಕ್ಷೆ
Published on

ಪ್ರಮುಖ ಮುಖ್ಯಾಂಶಗಳು

  • ಕಾಮೆಡ್- ಕೆ ಪರೀಕ್ಷೆ ಮುಗಿದ ನಂತರ ನಡೆಸಿದ ಶೈಕ್ಷಣಿಕ, ಆಡಳಿತಾತ್ಮಕ ಮತ್ತು ವಿಧಿ ವಿಜ್ಞಾನ ಆಡಿಟ್‌ನಲ್ಲಿ ಜಮ್‌ಶೆಡ್‌ಪುರ ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದು ಪತ್ತೆ
  • ತಾಂತ್ರಿಕ ಪಾಲುದಾರರ ಸಹಾಯದಿಂದ ನಡೆಸಿದ ತನಿಖೆಯಲ್ಲಿ ಅಭ್ಯರ್ಥಿಗಳು ಮತ್ತು ಸಿಬ್ಬಂದಿ ಅವ್ಯವಹಾರದಲ್ಲಿ ಭಾಗಿಯಾಗಿರುವ ಬಗ್ಗೆ ಮಹತ್ವದ ಸಾಕ್ಷ್ಯಗಳು ಲಭ್ಯ
  • ತನಿಖೆ ಪೂರ್ಣಗೊಳ್ಳುವವರೆಗೆ ಈ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ಮತ್ತು ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ
  • ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ನೋಟಿಸ್ ನೀಡಲಾಗಿದ್ದು, ಜು.10ರೊಳಗೆ ಬೆಂಗಳೂರಿನಲ್ಲಿರುವ ಕಾಮೆಡ್ ಕೆ ಕಚೇರಿಗೆ ಹಾಜರಾಗಿ, ತಮ್ಮ ಮೇಲಿರುವ ಆರೋಪಗಳ ಕುರಿತು ವಿವರಣೆ ನೀಡಲು ಅವಕಾಶ
ಬೆಂಗಳೂರು: ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ನಡೆಯುವ ಕಾಮೆಡ್- ಕೆ ಪರೀಕ್ಷೆಯಲ್ಲಿ ಅವ್ಯವಹಾರ ಪತ್ತೆಯಾದ ಹಿನ್ನೆಲೆಯಲ್ಲಿ ಜಮ್‌ಶೆಡ್‌ಪುರದ ಮೂರು ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದ 36 ಅಭ್ಯರ್ಥಿಗಳ ಉಮೇದುವಾರಿಕೆಯನ್ನು ಅಮಾನತುಗೊಳಿಸಲಾಗಿದೆ ಎಂದು ಕಾಮೆಡ್- ಕೆ ಕಾರ್ಯದರ್ಶಿ ಡಾ. ಎಸ್. ಕುಮಾರ್ ತಿಳಿಸಿದ್ದಾರೆ.
ಕಾಮೆಡ್- ಕೆ ಪರೀಕ್ಷೆ ಮುಗಿದ ನಂತರ ನಡೆಸಿದ ಶೈಕ್ಷಣಿಕ, ಆಡಳಿತಾತ್ಮಕ ಮತ್ತು ವಿಧಿ ವಿಜ್ಞಾನ ಆಡಿಟ್‌ನಲ್ಲಿ ಜಮ್‌ಶೆಡ್‌ಪುರ ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ತಾಂತ್ರಿಕ ಪಾಲುದಾರರ ಸಹಾಯದಿಂದ ನಡೆಸಿದ ತನಿಖೆಯಲ್ಲಿ ಅಭ್ಯರ್ಥಿಗಳು ಮತ್ತು ಸಿಬ್ಬಂದಿ ಅವ್ಯವಹಾರದಲ್ಲಿ ಭಾಗಿಯಾಗಿರುವ ಬಗ್ಗೆ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಅವರು ತಿಳಿಸಿದ್ದಾರೆ.
ಪರೀಕ್ಷಾ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ, ಶೂನ್ಯ ಸಹಿಷ್ಣುತೆ ನೀತಿಯನ್ನು ಕಾಮೆಡ್- ಕೆ ಅನುಸರಿಸುತ್ತಿದ್ದು, ಅಕ್ರಮ ಎಸಗಿದ್ದಾರೆ ಎಂದು ಸಂಶಯಿಸಲಾಗಿರುವ 36 ಅಭ್ಯರ್ಥಿಗಳ ಉಮೇದುವಾರಿಕೆಯನ್ನು ಅಮಾನತುಗೊಳಿಸಲಾಗಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಈ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ಮತ್ತು ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.
ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ನೋಟಿಸ್ ನೀಡಲಾಗಿದ್ದು, ಜು.10ರೊಳಗೆ ಬೆಂಗಳೂರಿನಲ್ಲಿರುವ ಕಾಮೆಡ್ ಕೆ ಕಚೇರಿಗೆ ಹಾಜರಾಗಿ, ತಮ್ಮ ಮೇಲಿರುವ ಆರೋಪಗಳ ಕುರಿತು ವಿವರಣೆ ನೀಡಲು ಅವಕಾಶ ಕಲ್ಪಿಸಲಾಗಿದೆ.
ಈ ಕುರಿತು ಅಡ್ಮಿಷನ್ ಓವರ್‌ಸೀಯಿಂಗ್ ಸಮಿತಿಗೆ ಮಾಹಿತಿ ನೀಡಲಾಗಿದ್ದು, ತನಿಖೆಯ ಪ್ರಗತಿ ಬಗ್ಗೆ ನಿರಂತರವಾಗಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಈ ಕ್ರಮವು ಅರ್ಹ ಮತ್ತು ಪ್ರಾಮಾಣಿಕ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶ ಹೊಂದಿದೆ. ಅಣಕು ಸೀಟು ಹಂಚಿಕೆ ಪ್ರಕ್ರಿಯೆಯು ಜು.11ರಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.

ನಿಖರ ಮಾಹಿತಿ ನೀಡಿಲ್ಲ

ಅಮಾನತುಗೊಳಿಸಿರುವ ಅಭ್ಯರ್ಥಿಗಳು ನಿಖರವಾಗಿ ಯಾವ ರೀತಿಯ ಅವ್ಯವಹಾರ ನಡೆಸಿದ್ದಾರೆಂದಿ ಕಾಮೆಡ್ ಕೆ ತಿಳಿಸಿಲ್ಲ. ಮೇ9ರಂದು ದೇಶಾದ್ಯಂತ ನಡೆದಿದ್ದ ಪರೀಕ್ಷೆಯಲ್ಲಿ 1,10,787 ಅಭ್ಯರ್ಥಿಗಳು ಹಾಜರಾಗಿದ್ದರು. ಮೇ 29ರಂದು ಪ್ರಕಟವಾಗಿದ್ದ ಲಿತಾಂಶದಲ್ಲಿ ಟಾಪ್ 6 ಸ್ಥಾನಗಳು ಜಾರ್ಖಾಂಡ್ ವಿದ್ಯಾರ್ಥಿಗಳ ಪಾಲಾಗಿದೆ. ಟಾಪ್ 10ರಲ್ಲಿ ಕರ್ನಾಟಕದ ಯಾವುದೇ ಅಭ್ಯರ್ಥಿಗಳು ಸ್ಥಾನ ಪಡೆದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net