ಪಟ್ಟಿ ಪರಿಷ್ಕರಣೆಯಲ್ಲಿ ಸರಿಯಾದ ಮಾಹಿತಿ ಸಂಗ್ರಹಿಸಿ

ಭಾಲ್ಕಿ ಪಟ್ಟಣದ ಕಾರಂಜಾ ರೈತ ಸಮುದಾಯ ಭವನದಲ್ಲಿ  ಸೋಮವಾರ ಹಮ್ಮಿಕೊಂಡಿದ್ದ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್​) ತರಬೇತಿ ಕಾರ್ಯಾಗಾರದಲ್ಲಿ ತಹಸೀಲ್ದಾರ್​ ಮಲ್ಲಿಕಾರ್ಜುನ ವಡ್ಡನಕೇರೆ ಮಾತನಾಡಿದರು. ಗೋಪಾಲ ಹಿಪ್ಪರಗಿ, ಬಿಇಒ ಸಿ.ಜಿ.ಹಳ್ಳದ್​, ಸತೀಶಕುಮಾರ ಮುದ್ದಾ, ಜ್ಞಾನೇಶ್ವರ ಮಂಡೆ ಇತರರಿದ್ದರು.
ಭಾಲ್ಕಿ ಪಟ್ಟಣದ ಕಾರಂಜಾ ರೈತ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್​) ತರಬೇತಿ ಕಾರ್ಯಾಗಾರದಲ್ಲಿ ತಹಸೀಲ್ದಾರ್​ ಮಲ್ಲಿಕಾರ್ಜುನ ವಡ್ಡನಕೇರೆ ಮಾತನಾಡಿದರು. ಗೋಪಾಲ ಹಿಪ್ಪರಗಿ, ಬಿಇಒ ಸಿ.ಜಿ.ಹಳ್ಳದ್​, ಸತೀಶಕುಮಾರ ಮುದ್ದಾ, ಜ್ಞಾನೇಶ್ವರ ಮಂಡೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್​ ಮಲ್ಲಿಕಾರ್ಜುನ ವಡ್ಡನಕೇರೆ ಸಲಹೆ
  • ಭಾಲ್ಕಿಯಲ್ಲಿ ಎಸ್​ಐಆರ್​ ತರಬೇತಿ ಕಾರ್ಯಾಗಾರ
ಭಾಲ್ಕಿ: ಭಾರತೀಯ ಪೌರತ್ವ ಹೊಂದಿದ ಪ್ರತಿಯೊಬ್ಬ ಪ್ರಜೆಯೂ ಮತದಾರರ ಪಟ್ಟಿಯಲ್ಲಿರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಹಸೀಲ್ದಾರ್​ ಮಲ್ಲಿಕಾರ್ಜುನ ವಡ್ಡನಕೇರೆ ಹೇಳಿದರು.
ಪಟ್ಟಣದ ಕಾರಂಜಾ ರೈತ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್​) ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಎಲ್ಲ ಬಿಎಲ್​ಒಗಳು ಮನೆಮನೆಗೆ ಭೇಟಿ ನೀಡಿ, ಸರಿಯಾದ ಮಾಹಿತಿ ಭರ್ತಿ ಮಾಡಿ ಯಾವ ಮತದಾರರು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. 2002ರ ಮತದಾರರ ಪಟ್ಟಿಯಲ್ಲಿ ಮಾಹಿತಿ ಸಿಗದಿದ್ದರೂ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ನಿಜವಾದ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಸೇರುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ನೋಡಲ್​ ಅಧಿಕಾರಿಗಳು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳುವ ಭಾರತ ಚುನಾವಣಾ ಆಯೋಗದ ಗಣತಿ ನಮೂನೆಯನ್ನು ಹೇಗೆ ಭರ್ತಿ ಮಾಡಬೇಕು ಎನ್ನುವ ಮಾಹಿತಿಯನ್ನು, ಬಿಎಲ್​ಒಗಳು ಮತ್ತು ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​ ಸೇರಿ ವಿವಿಧ ಪಕ್ಷಗಳ ಮತಗಟ್ಟೆ ಏಜೆಂಟರುಗಳಿಗೆ ತಿಳಿಸಿಕೊಟ್ಟರು.
ಹಿಂದಿನ ವಿಶೇಷ ಸಮಗ್ರ ಪರಿಷ್ಕರಣೆಯ ಮತದಾರರ ಪಟ್ಟಿಯಲ್ಲಿನ ಮತದಾರರ ವಿವರ, ಮತದಾರರ ಸಂಬಂಧಿಗಳ ವಿವರ, ವಿಧಾನಸಭಾ ಕ್ಷೇತ್ರದ, ಭಾಗದ ಹಾಗೂ ಮತದಾರರ ಕ್ರಮ ಸಂಖೆಗಳನ್ನು ತಿಳಿಸುವ ಮೂಲಕ ನಿಜವಾದ ಮತದಾರರನ್ನು ಗುರುತಿಸುವ ಕಾರ್ಯವಾಗಬೇಕು ಎಂದು ಮಾಹಿತಿ ನೀಡಿದರು. ಎರಡೆರಡು ಕ್ಷೇತ್ರಗಳಲ್ಲಿ ಹೆಸರು ನೊಂದಣಿಸಿಕೊಂಡವರು ಒಂದೇ ಕ್ಷೇತ್ರದಲ್ಲಿ ಮತದಾನದ ಹಕ್ಕು ನೊಂದಾಯಿಸಿಕೊಳ್ಳಬೇಕು. ಅರ್ಜಿ ನಮೂನೆಯಲ್ಲಿ ಯಾವುದೇ ತಪ್ಪು ಮಾಹಿತಿ ನೀಡಬಾರದು, ತಪ್ಪು ಮಾಹಿತಿ ಕಂಡು ಬಂದಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ 1950ರ ಕಲಂ 31 ರ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದರು.
ತಹಸಿಲ್​ ಕಚೇರಿಯ ಗೋಪಾಲ ಹಿಪ್ಪರಗಿ, ಎಸ್​ಐಆರ್​ ನೋಡಲ್​ ಅಧಿಕಾರಿಗಳಾದ ಬಿಇಒ ಸಿ.ಜಿ.ಹಳ್ಳದ್​, ಕೃಷಿ ಸಹಾಯಕ ನಿರ್ದೇಶಕ ಸತೀಶಕುಮಾರ ಮುದ್ದಾ, ಕಾರಂಜಾ ಎಇಇ ಜ್ಞಾನೇಶ್ವರ ಮಂಡೆ, ಸಮಾಜ ಕಲ್ಯಾಣಾಧಿಕಾರಿ ಶಿವಾನಂದ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪತ್ರಾಂಕಿತ ವ್ಯವಸ್ಥಾಪಕ ಶಿವಕುಮಾರ ಫುಲಾರಿ, ಇಸಿಒ ಮಲ್ಲಿಕಾರ್ಜುನ ಕನ್ನಾಳೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿದೇರ್ಶಕ ಸೂರ್ಯಕಾಂತ ಸುಂಟೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net