ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ರೂಪಿಸಿರುವ ಯೋಜನೆ ಇದಾಗಿದೆ. ಇದರಲ್ಲಿ ಆದಿಮಾನವರ ನೆಲೆಗಳು, ಗುಹೆಗಳು, ಚಿತ್ತಾರಗಳು, ಕಲ್ಲಿನ ಕೆತ್ತನೆಗಳು, ಸಮಾಧಿಗಳು, ಬಳಸುತ್ತಿದ್ದ ವಸ್ತುಗಳು ಸೇರಿ ಪ್ರಾಚೀನ ಶಿಲಾಯುಗ (Palaeolithic), ನವಶಿಲಾಯುಗ (Neolithic) ಮತ್ತು ಬೃಹತ್ ಶಿಲಾಯುಗ (Megalithic )ಪರಿಚಯಿಸುವ 200ಕ್ಕೂ ಹೆಚ್ಚಿನ ತಾಣಗಳ ಚಿತ್ರಸಹಿತ ಮಾಹಿತಿಯನ್ನು ಈ ಪುಸ್ತಕ ನೀಡಲಿದೆ.