ಇದರೊಂದಿಗೆ ರಾಜ್ಯಾದ್ಯಂತ 5 ವರ್ಷದೊಳಗಿನ 64.84 ಲಕ್ಷ ಮಕ್ಕಳನ್ನು ತಲುಪುವ ಗುರಿ ಹೊಂದಲಾಗಿದ್ದು, ಪೋಲಿಯೊ ಹನಿ ವಿತರಣೆಗೆ 36,076 ಬೂತ್‌ಗಳನ್ನು ಗುರುತಿಸಲಾಗಿದೆ. ಗುಡ್ಡಗಾಡು ಪ್ರದೇಶಗಳನ್ನು ತಲುಪಲು 988 ಮೊಬೈಲ್ ತಂಡ ರಚಿಸಲಾಗಿದೆ. 2,125 ಟ್ರಾನ್ಸಿಟ್ ತಂಡವು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಲಸಿಕೆ ವಿತರಿಸಲಿವೆ.