ಸಮಯ ಫಿಕ್ಸ್ ಆಗದೆ ನಾನ್ಹೇಗೆ ಹೇಳಲಿ ಎಂದು ನಗರದಲ್ಲಿ ಶುಕ್ರವಾರ ಪತ್ರಕರ್ತರನ್ನು ಪ್ರಶ್ನಿಸಿದ ಅವರು, ಈ ವಿಷಯದಲ್ಲಿ ತಪ್ಪು ಮಾಹಿತಿ ಹೋಗುವುದು ಬೇಡ. ಹೈಕಮಾಂಡ್ ಅಂದ್ರೆ ನಾವೆಲ್ಲರೂ ಸೇರಿ ವಿಚಾರ ಮಾಡುತ್ತೇವೆ ಎಂದರ್ಥ. ಸಿಎಂ ಬದಲಾವಣೆ ಆಗುತ್ತದೆಯೋ, ಆಗುವುದಿಲ್ಲವೋ ಎಂಬುದನ್ನು ಹೇಗೆ ಹೇಳಲಿ? ಸಮಯ ನಿಗದಿಯಾದ ಬಳಿಕ ಏನು ನಿರ್ಧಾರ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತೇವೆ. ಅಲ್ಲಿವರೆಗೆ ಸುಮ್ಮನೆ ತಪ್ಪು ಸಂದೇಶ ಕೊಡಬೇಡಿ ಎಂದರು.