ಸಭೆಯಲ್ಲಿ ಖರ್ಚು&ವೆಚ್ಚಗಳಿಗೆ ಅನುಮೋದನೆ, 2026&27ನೇ ಸಾಲಿನ 16ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆ, ಎಸ್ಎಫ್ಸಿ ಅನುದಾನದ ಕ್ರಿಯಾ ಯೋಜನೆ, ಹೊರಗುತ್ತಿಗೆಯ ಲೋಡರ್ಸ್ ಮತ್ತು ಇನ್ನಿತರ ಸಿಬ್ಬಂದಿ ಅವಧಿ ಮುಕ್ತಾಯವಾದ ಕುರಿತು, ಪುರಸಭೆ ಕಚೇರಿಯ ನೂತನ ಕಟ್ಟಡ ನಿರ್ಮಾಣ ಕುರಿತಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ, ಪುರಸಭೆ ವ್ಯಾಪ್ತಿಯಲ್ಲಿ ಮುಖ್ಯರಸ್ತೆ ಮತ್ತು ಒಳರಸ್ತೆಗಳನ್ನು ಅಗಲೀಕರಣ ಮಾಡಲು ಪ್ರಸ್ತಾವನೆ, ಬಸವೇಶ್ವರ ವೃತ್ತಕ್ಕೆ 50&50ಜಾಗ ಒದಗಿಸುವ ಕುರಿತು, ಪುರಸಭೆಗೆ ಕಾನೂನು ಸಲಹೆಗಾರರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ, ಸೋಮನಾಥ ಕೆರೆ ಮತ್ತು ಯಲ್ಲಮ್ಮನ ಕೆರೆ ಸರ್ವೇ, ಪುರಸಭೆ ವ್ಯಾಪ್ತಿಯ ಸರ್ಕಾರಿ ಗ್ರಾಮಠಾಣಾ ಮತ್ತು ಗೈರಾಣು ಭೂಮಿ ಜಮೀನು ಸರ್ವೇ, ಅಮೃತ್ 2.0 ಯೋಜನೆಯಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿ ಪ್ರಗತಿ ಹಾಗೂ 22 ಮತ್ತು 23 ವಾರ್ಡ್ಗಳನ್ನು ಸದರಿ ಯೋಜನೆಗೆ ಸೇರಿಸುವ ಕುರಿತು ಗಂಭೀರವಾಗಿ ಚರ್ಚೆ ನಡೆಸಲಾಯಿತು.