ಸತ್ತಿಗೇರಿಯಲ್ಲಿ ಸ್ವಚ್ಛ ಶನಿವಾರ ಅಭಿಯಾನಕ್ಕೆ ಚಾಲನೆ

ಸತ್ತಿಗೇರಿ ಗ್ರಾಪಂ ಆವರಣದಲ್ಲಿ ಸ್ವಚ್ಛ ಶನಿವಾರ ಕಾರ್ಯಕ್ರಮ ನಿಮಿತ್ತ ಕಸ ಗೂಡಿಸಲಾಯಿತು.
ಸತ್ತಿಗೇರಿ ಗ್ರಾಪಂ ಆವರಣದಲ್ಲಿ ಸ್ವಚ್ಛ ಶನಿವಾರ ಕಾರ್ಯಕ್ರಮ ನಿಮಿತ್ತ ಕಸ ಗೂಡಿಸಲಾಯಿತು.
Published on
ಸತ್ತಿಗೇರಿ: ಸರ್ಕಾರಿ ಕಚೇರಿ, ಸುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬುದು ಸ್ವಚ್ಛ ಶನಿವಾರ ಕಾರ್ಯಕ್ರಮದ ಉದ್ದೇಶ. ತಾಪಂನ ಅಧೀನದ ಎಲ್ಲ ಸರ್ಕಾರಿ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಲಯದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪರಿಸರಸ್ನೇಹಿ ವಾತಾವರಣ ನಿರ್ಮಿಸಬೇಕೆಂದು ತಾಪಂ ಇಒ ಆನಂದ ಬಡಕುಂದ್ರಿ ಹೇಳಿದರು.
ಗ್ರಾಮದ ಗ್ರಾಪಂ ಆವರಣದಲ್ಲಿ ಸ್ವಚ್ಛ ಶನಿವಾರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಪಂ ಸಿಇಒ ರಾಹುಲ ಶಿಂಧೆ ನಿರ್ದೇಶನದಂತೆ ಸವದತ್ತಿ ತಾಲೂಕಿನ 32 ಹಾಗೂ ಯರಗಟ್ಟಿ ತಾಲೂಕಿನ 12 ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಶನಿವಾರ ಅಭಿಯಾನ ನಿಮಿತ್ತ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ತಾಪಂ ಸಹಾಯಕ ನಿರ್ದೇಶಕ ಆರ್​.ಎ.ಪಾಟೀಲ, ಅರ ದಾಸೋಹ ಅಧಿಕಾರಿ ಮೆತ್ರಾದೇವಿ ವಸದ, ತಾಪಂ ವ್ಯವಸ್ಥಾಪಕ ಮಲ್ಲಿಕಾರ್ಜುನ ಕಂಬಿ, ಸತ್ತಿಗೇರಿ ಪಿಡಿಒ ಎ.ಬಿ.ಬಂಗಾರಿ, ಸಿದ್ದಪ್ಪ ಬೆಕ್ಕನ್ನವರ, ಚಂದ್ರಗೌಡ ಪಾಟೀಲ, ರಮೇಶ ಕೊಟ್ರಶೆಟ್ಟಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net