20 ವರ್ಷ ಬಳಿಕ ಭೇಟಿಯಾದ ಸಹಪಾಠಿಗಳು

ಬೀದರ್​ ತಾಲೂಕಿನ ಕಾಡವಾದ ಸಮೀಪದ ವಿಂಟೇಜ್​ ರಿಟ್ರೀಟ್​ ಸಭಾಂಗಣದಲ್ಲಿ ಅಲಿಯಂಬರ್​ ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಸಾಗರ್​ ಪಡಸಲೆ, ದಿಲೀಪ್​ ರಾಯಗೊಂಡೆ, ಮನ್ಮಥ್​ ಮಡಿವಾಳ ಇತರರಿದ್ದರು.
ಬೀದರ್​ ತಾಲೂಕಿನ ಕಾಡವಾದ ಸಮೀಪದ ವಿಂಟೇಜ್​ ರಿಟ್ರೀಟ್​ ಸಭಾಂಗಣದಲ್ಲಿ ಅಲಿಯಂಬರ್​ ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಸಾಗರ್​ ಪಡಸಲೆ, ದಿಲೀಪ್​ ರಾಯಗೊಂಡೆ, ಮನ್ಮಥ್​ ಮಡಿವಾಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಲಿಯಂಬರ್​ ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ
ಬೀದರ್​: ತಾಲೂಕಿನ ಅಲಿಯಂಬರ್​ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 2006ರ ಎಸ್​ಎಸ್​ಎಲ್​ಸಿ ಬ್ಯಾಚ್​ನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾಡವಾದ ಸಮೀಪದ ವಿಂಟೇಜ್​ ರಿಟ್ರೀಟ್​ ಸಭಾಂಗಣದಲ್ಲಿ ಬುಧವಾರ ಜರುಗಿತು.
20 ವರ್ಷಗಳ ಬಳಿಕ ಹಳೆಯ ವಿದ್ಯಾರ್ಥಿಗಳು ಸಮ್ಮಿಲಗೊಂಡರು. ಶಾಲಾ ದಿನಗಳು ಹಾಗೂ ಸ್ನೇಹದ ಮಧುರ ಣಗಳನ್ನು ಪರಸ್ಪರ ಹಂಚಿಕೊಂಡರು. ಆಟಗಳು, ಮನೋರಂಜನಾ ಚಟುವಟಿಕೆಗಳು ಹಾಗೂ ಫೋಟೋ ಸೆಷನ್​ ಸಂಭ್ರಮ ಇಮ್ಮಡಿಗೊಳಿಸಿದವು.
ಸ್ನೇಹ ಅಮೂಲ್ಯ ಸಂಪತ್ತು. ಕಾಲ, ಪರಿಸ್ಥಿತಿಗಳು ಬದಲಾಗಬಹುದು. ಆದರೆ, ನಿಜವಾದ ಸ್ನೇಹ ಎಂದೂ ಬದಲಾಗುವುದಿಲ್ಲ. ಎರಡು ದಶಕಗಳ ನಂತರವೂ ಹಳೆಯ ವಿದ್ಯಾರ್ಥಿಗಳು ಗಾಢ ಗೆಳೆತನ, ಪರಸ್ಪರ ಪ್ರೀತಿ, ವಿಶ್ವಾಸ ಉಳಿಸಿಕೊಂಡಿರುವುದು ಇದಕ್ಕೆ ನಿದರ್ಶನ ಎಂದು ಹಳೆಯ ವಿದ್ಯಾರ್ಥಿ ಸಾಗರ್​ ಪಡಸಲೆ ಹೇಳಿದರು.
ಹಳೆಯ ವಿದ್ಯಾರ್ಥಿಗಳಾದ ಮನ್ಮಥ್​ ಮಡಿವಾಳ, ದೇವಿದಾಸ ಢೋಣೆ, ದಿಲೀಪ್​ ರಾಜಕುಮಾರ ರಾಯಗೊಂಡೆ, ಪ್ರಕಾಶ್​ ಮಾಳೆ, ಅನೀಲ ಜ್ಯಾಂತೆ, ಗಣೇಶ, ಶಿವಕುಮಾರ ಕಪಲಾಪುರೆ, ಭಗವಾನ್​, ರಾಜಕುಮಾರ ಜಮಗೆ, ಭಗವಂತ ಸಾಗೆ, ಸತೀಶ್​, ಬಸಪ್ಪ ಬಸ್ತೆ, ನರಸಪ್ಪ ಹೊನ್ನಿಕೇರೆ, ನೋಹನ್​ ಮುಗನೂರೆ, ಓಂಕಾರ, ುಡುಸಾಬ್​, ಆನಂದ ಮಡಿವಾಳ, ವಿಜಯಕುಮಾರ, ತುಕಾರಾಮ, ಭಗವಂತ ರಾಯಗೊಂಡ, ಸೋಮನಾಥ ಸಾಗೆ, ದತ್ತಾತ್ರಿ, ಪೇತ್ರಪ್ಪ, ಮೀನಾ ಉಪ್ಪೆ, ಸುಧಾರಾಣಿ ಔರಾದೆ, ನಾಗಮ್ಮ, ಜಯಶ್ರೀ ಖಂಡ್ರೆ, ಜಯಶ್ರೀ ಶಿವಶೆಟ್ಟೆ, ಲ$್ಮ, ಬಬಿತಾ, ಅಂಬಿಕಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net