ಚಿಂಚೋಳಿ ತಾಲೂಕು ಗೊಟ್ಟಂಗೊಟ್ಟ, ನಾಗಾಈದಲಾಯಿ, ಮೊಂಬಾಪುರ, ಬೋನಸಪುರ, ಮೊರ್ನಾಳ್ ಪ್ರಾಗೈತಿಹಾಸಿಕ ಕಾಲದ ಜನವಸತಿ ಪ್ರದೇಶವಾಗಿದ್ದರೆ, ನಿಡಗುಂದಾದ ಸೂರ್ಯನಾರಾಯಣ ದೇವಾಲಯ ಐತಿಹಾಸಿಕವಾಗಿ ಬಹಳ ಪ್ರಾಮುಖ್ಯ ಪಡೆದಿದೆ. ದೇವಾಲಯದ ನವರಂಗದಲ್ಲಿ ತೆರೆದ ಬಾವಿ ಛತ್ತಿನಲ್ಲಿ ಸೂರ್ಯದೇವನ ವಿಗ್ರಹ ನೋಡಲು ಈಗಲೂ ಕಾಣಸಿಗುತ್ತದೆ. ಇಲ್ಲಿನ ಕಾಳಿಕಾ ದೇವಿ ಮಂದಿರ ಅಪರೂಪದಿಂದ ಕೂಡಿದೆ. ಜತೆಗೆ ಜೈನ ಶೈವ ಧಾರ್ಮಿಕ ಕೇಂದ್ರವಾದ ಮಿರಿಯಾಣ, ಸುಲೇಪೇಟ್, ದೇಗಲಮಡಿ, ಚಿಂಚೋಳಿ ಸ್ಮಾರಕಗಳು, ಸೋಮಲಿಂಗದಳ್ಳಿಯಲ್ಲಿ ಅನಾಥವಾಗಿ ಒಂದೇ ಕಡೆ ಹತ್ತಾರು ಸಂಖ್ಯೆಯಲ್ಲಿ ಬಿದ್ದಿರುವ ವೀರಗಲ್ಲು ಹಾಗೂ ಮಾಸ್ತಿಗಲ್ಲುಗಳು ಬಗ್ಗೆ ಸಂಶೋಧನೆ ನಡೆಯಬೇಕಿದೆ ಎಂದರು.