ಮಕ್ಕಳ ನೈತಿಕ ಮೌಲ್ಯ ಉಳಿವಿಗೆ ಸಂಸ್ಕಾರ ಅಗತ್ಯ

ರಾಮದುರ್ಗದ ಶಂಕರ ಮಠದಲ್ಲಿ ಹಮ್ಮಿಕೊಂಡಿದ್ದ ಸಂಸ್ಕಾರ ಸುಧಾ ಬೇಸಿಗೆ ತರಬೇತಿ ಶಿಬಿರದಲ್ಲಿ ಮಕ್ಕಳಿಗೆ ಕಿಟ್​ ವಿತರಿಸಲಾಯಿತು. ಗಿರೀಶ ಕುಲಕರ್ಣಿ, ಎ.ಎ.ಮುದಕವಿ, ಡಾ.ನರೇಂದ್ರ ವಾಳ್ವೇಕರ, ರಾಮಭಟ್ಟ ದೊಡವಾಡ ಇತರರಿದ್ದರು.
ರಾಮದುರ್ಗದ ಶಂಕರ ಮಠದಲ್ಲಿ ಹಮ್ಮಿಕೊಂಡಿದ್ದ ಸಂಸ್ಕಾರ ಸುಧಾ ಬೇಸಿಗೆ ತರಬೇತಿ ಶಿಬಿರದಲ್ಲಿ ಮಕ್ಕಳಿಗೆ ಕಿಟ್​ ವಿತರಿಸಲಾಯಿತು. ಗಿರೀಶ ಕುಲಕರ್ಣಿ, ಎ.ಎ.ಮುದಕವಿ, ಡಾ.ನರೇಂದ್ರ ವಾಳ್ವೇಕರ, ರಾಮಭಟ್ಟ ದೊಡವಾಡ ಇತರರಿದ್ದರು.
Published on
ರಾಮದುರ್ಗ: ಮಕ್ಕಳಲ್ಲಿ ನೈತಿಕ ಮೌಲ್ಯ ಹೆಚ್ಚಿಸಿ, ಧಾರ್ಮಿಕ ಆಸಕ್ತಿ ಹಾಗೂ ಸಾಂಸತಿಕ ಅರಿವು ಮೂಡಿಸಲು ಹಾಗೂ ಸನಾತನ ಧರ್ಮದ ಉಳಿವಿಗೆ ಸಂಸ್ಕಾರ ಸುಧಾ ಬೇಸಿಗೆ ತರಬೇತಿ ಶಿಬಿರ ಹಮ್ಮಿಕೊಂಡಿರುವುದು ಶ್ಲಾನೀಯ ಎಂದು ನಿವೃತ್ತ ಶಿಕ ಗಿರೀಶ ಕುಲಕರ್ಣಿ ಹೇಳಿದರು.
ನಗರದ ಶಂಕರ ಮಠದಲ್ಲಿ ಮೇ 15ರಿಂದ ಮೇ 21 ರವರೆಗೆ ಹಮ್ಮಿಕೊಂಡಿದ್ದ ಸಂಸ್ಕಾರ ಸುಧಾ ಬೇಸಿಗೆ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಬೇಸಿಗೆ ಶಿಬಿರ ಉಚಿತವಾಗಿದ್ದು, 10ರಿಂದ 16 ವರ್ಷದ ಮಕ್ಕಳು ಭಾಗವಹಿಸಿ, ಉತ್ತಮ ಸಂಸ್ಕಾರ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ವಕೀಲ ಸಂದ ಅಧ್ಯ ಎ.ಎ.ಮುದಕವಿ ಮಾತನಾಡಿ, ಶೃಂಗೇರಿ ಮಠದ ಜಗದ್ಗುರುಗಳ ಮಾರ್ಗದರ್ಶನದಂತೆ ಶಿಬಿರ ಆಯೋಜಿಸಲಾಗಿದ್ದು, ಶಿಬಿರದಲ್ಲಿ ಜ್ಞಾನ&ವಿಜ್ಞಾನ, ಸಂಸತಿ, ಧರ್ಮ, ನೆತಿಕತೆ, ಆಟ&ಪಾಠ, ಗುರು ಪರಂಪರೆ, ಪೂಜಾ ವಿಧಾನ ಸೇರಿದಂತೆ ನಾನಾ ವಿಷಯ ಕುರಿತು ತರಬೇತಿ ನೀಡಲಾಗುವುದು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದ ಲಾಭ ಪಡೆಯುವಂತೆ ಮನವಿ ಮಾಡಿದರು.
ಡಾ.ನರೇಂದ್ರ ವಾಳ್ವೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ರಾಮಭಟ್ಟ ದೊಡವಾಡ, ಪ್ರಲ್ಲಾದಾಚಾರ್ಯ ಜೋಶಿ, ಅತಾ ಗುರವ, ಶಿಲ್ಪಾ ದಿವಾಕರ, ವಿಜಯ ಜೋಶಿ, ವೈಭವ ಜೋಶಿ, ನಯನಾ ವಾಳ್ವೇಕರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net