ಕಲಬುರಗಿ: ಶಿವಾಜಿ ಮಹಾರಾಜರು ಸಮಗ್ರತೆ, ಶೌರ್ಯ ಮತ್ತು ದೂರದೃಷ್ಟಿಯ ನಾಯಕತ್ವಕ್ಕೆ ಹೆಸರುವಾಸಿಯಾಗಿದ್ದಾರೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ವಿಶ್ವವಿದ್ಯಾಲಯದ ಮರಾಠಿ ಮಂಡಲ ಸೋಮವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಂದರ್ಭದಲ್ಲಿ ಮಾತನಾಡಿದ ಅವರು, ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ಜೀವನದಲ್ಲಿ ಯಶಸ್ವಿಯಾಗಲು ನೀವು ಶಿವಾಜಿ ಮಹಾರಾಜರ ಕಾಲಾತೀತ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್ ಮಾತನಾಡಿದರು. ಡಾ.ರವಿ ಖಂಗೈ ಪ್ರಾಸ್ತಾವಿಕ ಮಾತನಾಡಿ, ಕಾರ್ಯತಂತ್ರದ ಪ್ರತಿಭೆ ಶಿವಾಜಿ ಮಹಾರಾಜರ ವಿಶಿಷ್ಠತೆಯಾಗಿದೆ. ಅವರ ನವೀನ ಮಿಲಿಟರಿ ತಂತ್ರಗಳು ಮತ್ತು ಆಡಳಿತಾತ್ಮಕ ಕುಶಾಗ್ರಮತಿ ಅವರನ್ನು ಜನರ ರಾಜ ಎಂದು ವ್ಯಾಖ್ಯಾನಿಸಿತು ಎಂದು ಹೇಳಿದರು.
ಕಾರ್ಯಕ್ರಮ ಸಂಯೋಜಕ ಡಾ.ಮುದನಾರ್ ದತ್ತ ಸರ್ಜೇರಾವ್ ಸ್ವಾಗತಿಸಿದರು, ಸತ್ಯಂ ಜಾಧಾವೊ ಕಾರ್ಯಕ್ರಮ ನಿರೂಪಿಸಿದರು. ಸಾಂಸತಿಕ ಪ್ರದರ್ಶನ ಪ್ರಾರಂಭವಾಗುತ್ತಿದ್ದಂತೆ ಕಾರ್ಯಕ್ರಮದಲ್ಲಿ ಹಷೋರ್ದ್ಘಾರ ಮುಗಿಲು ಮುಟ್ಟಿತು. ಲಾವಣಿ ಪ್ರದರ್ಶನ, ಲೆಜಿಮ್ ನೃತ್ಯ ಮತ್ತು ಧೋಲ್ ತಾಶಾದಿಂದ ಪ್ರೇಕ್ಷಕರು ಮೋಡಿಗೊಂಡರು. ಕ್ಯಾಂಪಸ್ನಾದ್ಯಂತ ಶಿವಾಜಿ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಜಯಂತಿ ಸ್ಮರಣೀಯವಾಗಿ ಆಚರಿಸಲಾಯಿತು. ಡಾ.ಅನಿಲ್ ಕಾಂಬ್ಳೆ ವಂದಿಸಿದರು.