ಅಂಗಡಿಗಳಲ್ಲಿ ರಸಗೊಬ್ಬರ ದಾಸ್ತಾನು ಪರಿಶೀಲನೆ

ಸುರಪುರದ ವಿವಿಧ ರಸಗೊಬ್ಬರ ಅಂಗಡಿಗಳಿಗೆ ಕೃಷಿ ಜೆಡಿ ರತೇಂದ್ರನಾಥ ಸುಗೂರು, ಎಡಿ ರಾಮನಗೌಡ ಮಾಲಿಪಾಟೀಲ್​ ಭೇಟಿ ನೀಡಿ ದಾಸ್ತಾನು ಪರಿಶೀಲಿಸಿದರು.
ಸುರಪುರದ ವಿವಿಧ ರಸಗೊಬ್ಬರ ಅಂಗಡಿಗಳಿಗೆ ಕೃಷಿ ಜೆಡಿ ರತೇಂದ್ರನಾಥ ಸುಗೂರು, ಎಡಿ ರಾಮನಗೌಡ ಮಾಲಿಪಾಟೀಲ್​ ಭೇಟಿ ನೀಡಿ ದಾಸ್ತಾನು ಪರಿಶೀಲಿಸಿದರು.
Published on
ಸುರಪುರ: ತಾಲೂಕಿನ ವಿವಿಧ ರಸಗೊಬ್ಬರ ಅಂಗಡಿಗಳಿಗೆ ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರು ಭೇಟಿ ನೀಡಿ ಯುರಿಯಾ, ಡಿಎಪಿ ಇತರ ಗೊಬ್ಬರಗಳ ದಾಸ್ತಾನು ಜತೆ ಗುಣಮಟ್ಟ ಮತ್ತು ನಿಗದಿತ ದರದಲ್ಲಿ ಮಾರಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿದರು. ಬಹುತೇಕ ಬೆಳೆಗಳು ಕೊಯ್ಲು ಹಂತಕ್ಕೆ ಬಂದಿದ್ದರಿಂದ ಯುರಿಯಾ ಮತ್ತು ಡಿಎಪಿ ರಸಗೊಬ್ಬರಗಳನ್ನು ಮುಂಗಾರು ಹಂಗಾಮಿನವರೆಗೆ ಸೂಕ್ತವಾಗಿ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು. ಮುಂಗಾರಿನಲ್ಲಿ ಕೆ&ಕಿಸಾನ್​ ತಂತ್ರಾಂಶದಲ್ಲಿ ದಾಖಲಿಸಿದ ಜಮೀನಿನ ೇತ್ರಕ್ಕೆ ಅನುಗುಣ ರಸಗೊಬ್ಬರವನ್ನು ನೀಡಬೇಕು. ರೈತರು ರಸಗೊಬ್ಬರ ಖರೀದಿಸಲು ಎಫ್​ಐಡಿ ಮತ್ತು ಆಧಾರ್​ ನಂಬರ್​ ಕಡ್ಡಾಯ ಎಂದು ತಿಳಿಸಿದರು. ಸಹಾಯಕ ಕೃಷಿ ನಿರ್ದೇಶಕ ರಾಮನಗೌಡ ಮಾಲಿಪಾಟೀಲ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net