

ಚರಮೂರ್ತೀಶ್ವರ ಮಹಾಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಸೆ.5ರಿಂದ 11ರವರೆಗೆ ಶಿವನಾಮ ಸಪ್ತಾಹ ಹಾಗೂ ಸೆ.12ರಂದು ಚರಮೂರ್ತೀಶ್ವರ ದೇವರ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಹರಳಿಕಟ್ಟಿ ನಿಜಗುಣ ಸ್ವಾಮೀಜಿ ತಿಳಿಸಿದರು. ಗ್ರಾಮದ ಚರಮೂರ್ತೀಶ್ವರ ಮಹಾಮಠದಲ್ಲಿ ಭಾನುವಾರ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಗ್ರಾಮದ ವಿವಿಧ ಭಜನಾ ಮಂಡಳಿಯಿಂದ ಶಿವನಾಮ ಸಪ್ತಾಹ ಹಾಗೂ ಚರಮೂರ್ರ್ತೀಶ್ವರ ಜಾತ್ರಾ ಮಹೋತ್ಸವ ನೆರವೇರಲಿದೆ. ಮಹಾಮಠದ ಡಾ.ಸಿದ್ಧಲಿಂಗ ದೇವರು, ಶಿವಯ್ಯ ಸ್ವಾಮೀಜಿ, ಈರಯ್ಯ ಹಿರೇಮಠ, ಮುಖಂಡರಾದ ಈರಣ್ಣ ಜನ್ಮಟ್ಟಿ, ಮಹಾದೇವಪ್ಪ ಕಮತ, ಅಜ್ಜಪ್ಪ ಗಾಣಗಿ, ಕೆಂಚಪ್ಪ ಭಜಂತ್ರಿ, ಅಶೋಕ ಹಟ್ಟಿ,
ಮುದುಕಪ್ಪ ಪಡಿಮನಿ, ಶ್ರೀಶೈಲ ಬನ್ನೂರ, ವೀರಭದ್ರ ಮೈಲನ್ನವರ, ಮಹಾಂತೇಶ ಕಮತ, ಸದಾಶಿವಪ್ಪ ಸೊಂಡೂರ ಇತರರಿದ್ದರು.