ಮಾಹಿತಿಸೌಧದಲ್ಲಿ ನೂರಕ್ಕಿಂತ ಹೆಚ್ಚು ಮಹಿಳಾ ನೌಕರರು ಇದ್ದು, ಕಟ್ಟಡದ 3ನೇ ಮಹಡಿಯಲ್ಲಿ ಒಂದು ಶೌಚಗೃಹ ಇದೆ. 2 ವರ್ಷದಿಂದ ದುರಸ್ತಿಗೆ ಒಳಗಾಗಿದ್ದು, ಲೋಕೋಪಯೋಗಿ ಇಲಾಖೆಗೆ 2 ಲಕ್ಷ ರೂ. ಜಮಾ ಮಾಡಿದ್ದರೂ ದುರಸ್ತಿಯಾಗಿಲ್ಲ. ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ ಇದ್ದರೂ ಅಧಿಕಾರಿ, ನೌಕರರು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಪ್ರಿಂಟರ್ಸ್, ಹೈಬ್ರಿಡ್ ಮಾದರಿ ವಿಸಿ ಸಿಸ್ಟಂಗಳನ್ನು ಅಳವಡಿಸಲು 50 ಲಕ್ಷ ರೂ. ಪಾವತಿಸಿ ವರ್ಷ ಕಳೆದರೂ ಕಿಯೋನಿಕ್ಸ್ ಸಂಸ್ಥೆ ಅಳವಡಿಸಿಲ್ಲ. ಸಂಬಳ, ಇತರ ಭತ್ಯೆ, ವಾಹನ ನಿರ್ವಹಣೆಗೆ 10ನೇ ತಾರೀಖು ಕೈಚಾಚುವ ಪರಿಸ್ಥಿತಿ ಬಂದಿದೆ. ಹೊರಗುತ್ತಿಗೆ ನೌಕರರ ನೇಮಕಾತಿ ಗುತ್ತಿಗೆ ಪಡೆದಿರುವ ಏಜೆನ್ಸಿ ಅವಧಿ ಮುಗಿದರೂ ನವೀಕರಣಗೊಂಡಿಲ್ಲ.