ನಾನು ಮೈಸೂರಿನಲ್ಲಿ ತಹಸೀಲ್ದಾರ್ ಆಗಿದ್ದಾಗ ಫೇಸ್ಬುಕ್ ಮೂಲಕ ಅನುಷ್ ಅಲಿಯಾಸ್ ಅನುಷ್ ಶಿವಪ್ಪ ಪರಿಚಯವಾಗಿದ್ದರು. ಜೂ.28ರ ರಾತ್ರಿ 11ರಲ್ಲಿ ಫೇಸ್ಬುಕ್ನಲ್ಲಿ ಕಾಲ್ ಮೀ ಸಂದೇಶ ಕಳಿಸಿದ್ದ. ಕರೆ ಮಾಡಿದಾಗ ಬೆಂಗಳೂರಿಗೆ ಹೋಗುತ್ತಿದ್ದು, ನಿಮ್ಮ ನಿವಾಸದ ಬಳಿ ಬರುತ್ತೇವೆ ಎಂದರು. ಮಧ್ಯರಾತ್ರಿ 2ಕ್ಕೆ ಅನುಷ್ ತನ್ನಿಬ್ಬರು ಸ್ನೇಹಿತರಾದ ಶೋಭರಾಜ್, ನವೀನ್ ಜತೆ ಬಂದಿದ್ದರು. ಮದ್ಯದ ಬಾಟಲಿ ತಂದಿದ್ದ ಅವರು, ಮನೆಯಲ್ಲೇ ಕುಡಿಯಲು ಆರಂಭಿಸಿದರು. ನನಗೆ ಹಣ್ಣಿನ ಜ್ಯೂಸ್ ಕೊಟ್ಟರು. ಅದನ್ನು ಕುಡಿದ ಕೆಲ ಹೊತ್ತಿನಲ್ಲೇ ತಲೆ ಸುತ್ತಿದಂತಾಯಿತು.