ಮುಂದುವರೆದ ಸಂಘರ್ಷ: ಹಾರ್ಮುಜ್ ಜಲಸಂಧಿಯಲ್ಲಿ 3 ವಾಣಿಜ್ಯ ಹಡಗುಗಳ ಮೇಲೆ ದಾಳಿಗೆ ಇರಾನ್ ಮೇಲೆ ಪ್ರತಿದಾಳಿ ನಡೆಸಿದ ಅಮೆರಿಕ | US Retaliates

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಟೆಹ್ರಾನ್​: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರೆದಿದ್ದು, ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಮೂರು ವಾಣಿಜ್ಯ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದೆ ಎಂದು ಆರೋಪಿಸಿರುವ ಅಮೆರಿಕ, ಬುಧವಾರ(ಜು. 08) ಮುಂಜಾನೆ ಸರಣಿ ಪ್ರತಿದಾಳಿಗಳನ್ನು ದಾಳಿ(US Retaliates) ನಡೆಸಿದೆ ಎಂದು ವರದಿಯಾಗಿದೆ.
ಈ ಕುರಿತು ಎಕ್ಸ್​ನಲ್ಲಿ ಮಾಹಿತಿ ನೀಡಿರುವ US ಸೆಂಟ್ರಲ್ ಕಮಾಂಡ್, ಪ್ರಮುಖ ಜಲಮಾರ್ಗ ಮೂಲಕ ಸಾಗುತ್ತಿದ್ದ ವಾಣಿಜ್ಯ ಹಡಗುಗಳ ಮೇಲೆ ಇರಾನ್​ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ನಮ್ಮ ಪಡೆಗಳು ಭಾರಿ ಪ್ರತಿದಾಳಗಳನ್ನು ನಡೆಸಿದೆ. ಇರಾನ್ ನಡೆಸಿದ ಆಕ್ರಮಣವು ಅನಗತ್ಯ, ಅಪಾಯಕಾರಿ ಮತ್ತು ಕದನ ವಿರಾಮದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಿಳಿಸಿದೆ.
ಇರಾನಿನ ವಾಯು ರಕ್ಷಣಾ ವ್ಯವಸ್ಥೆಗಳು, ಕರಾವಳಿ ಕಣ್ಗಾವಲು ವ್ಯವಸ್ಥೆಗಳು, ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳು, ಹಡಗು ವಿರೋಧಿ ಕ್ರೂಸ್ ಕ್ಷಿಪಣಿಗಳು ಮತ್ತು ಡ್ರೋನ್ ಉಡಾವಣಾ ತಾಣಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಪಡೆಗಳು ದಾಳಿ ನಡೆಸಿವೆ ಎನ್ನಲಾಗಿದೆ.
ಇನ್ನೂ ದಕ್ಷಿಣ ಇರಾನ್‌ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ದಕ್ಷಿಣದ ಸಿರಿಕ್ ನಗರದಲ್ಲಿ ಏಳು ಸ್ಫೋಟಗಳ ಶಬ್ದ ಕೇಳಿಬಂದಿದೆ. ಸಿರಿಕ್‌ನ ತಹೆರೋಯಿ ಪಿಯರ್ ಪ್ರದೇಶವನ್ನು ಆರು ಸ್ಪೋಟಗಳ ಸಂಭವಿಸಿವೆ. ಜೊತೆಗೆ ದಕ್ಷಿಣ ಇರಾನ್‌ನ ಕ್ವೆಶ್ಮ್ ದ್ವೀಪ ಮತ್ತು ಬಂದರ್ ಅಬ್ಬಾಸ್‌ನಲ್ಲಿಯೂ ಸ್ಫೋಟಗಳ ಸದ್ದು ಕೇಳಿಬಂದಿದೆ ಎಂದು ವರದಿಗಳು ಉಲ್ಲೇಖಿಸಿವೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net