2025-26ನೇ ಸಾಲಿನಲ್ಲಿ 72,506 ಸರ್ಕಾರಿ ಕೋಟಾದ ಸೀಟುಗಳಿದ್ದವು, ಆದರೆ ಈ ಬಾರಿ ಆ ಸಂಖ್ಯೆ 81,044ಕ್ಕೆ ಏರಿಕೆ
ಕರಡು ಪಟ್ಟಿ ಬಿಡುಗಡೆಯಾದಾಗ 5,000 ಸೀಟುಗಳ ಹೆಚ್ಚಳವನ್ನು ನಿರೀಕ್ಷಿಸಲಾಗಿತ್ತು, ಆದರೆ ಅಂತಿಮ ಪಟ್ಟಿಯಲ್ಲಿ ಹೆಚ್ಚುವರಿ ಸೀಟು
ಜು.6ರಂದು ಮೊದಲ ಸುತ್ತಿನ ಸೀಟು ಹಂಚಿಕೆಯ ಅಣಕು ಫಲಿತಾಂಶವನ್ನು ಬಿಡುಗಡೆ ಮಾಡಲಾಗುತ್ತದೆ. ಅಂತಿಮವಾಗಿ ಜು.15ರಂದು ಸೀಟು ಹಂಚಿಕೆಯ ಅಂತಿಮ ಫಲಿತಾಂಶ
ಬೆಂಗಳೂರು: ರಾಜ್ಯ ಸರ್ಕಾರವು ಇಂಜಿನಿಯರಿಂಗ್, ಪಶು ವೈದ್ಯಕೀಯ, ಕೃಷಿ ವಿಜ್ಞಾನ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಅಂತಿಮ ಸೀಟ್ ಮ್ಯಾಟ್ರಿಕ್ಸ್ ಅನ್ನು ಸೋಮವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಗೆ ಅಧಿಕೃತವಾಗಿ ಸಲ್ಲಿಸಿದೆ. ಆದರೆ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಸೀಟ್ ಮ್ಯಾಟ್ರಿಕ್ಸ್ ಅನ್ನು ನೀಡಿಲ್ಲ.
ಕರಡು ಸೀಟ್ ಮ್ಯಾಟ್ರಿಕ್ಸ್‌ಗೆ ಹೋಲಿಸಿದರೆ, ಅಂತಿಮ ಸೀಟ್ ಮ್ಯಾಟ್ರಿಕ್ಸ್‌ನಲ್ಲಿ 6,003 ಇಂಜಿನಿಯರಿಂಗ್ ಸೀಟುಗಳ ಹೆಚ್ಚಳವಾಗಿದೆ. 2025-26ನೇ ಸಾಲಿನಲ್ಲಿ 72,506 ಸರ್ಕಾರಿ ಕೋಟಾದ ಸೀಟುಗಳಿದ್ದವು, ಆದರೆ ಈ ಬಾರಿ ಆ ಸಂಖ್ಯೆ 81,044ಕ್ಕೆ ಏರಿಕೆಯಾಗಿದೆ.
ಕರಡು ಪಟ್ಟಿ ಬಿಡುಗಡೆಯಾದಾಗ 5,000 ಸೀಟುಗಳ ಹೆಚ್ಚಳವನ್ನು ನಿರೀಕ್ಷಿಸಲಾಗಿತ್ತು, ಆದರೆ ಅಂತಿಮ ಪಟ್ಟಿಯಲ್ಲಿ ಹೆಚ್ಚುವರಿ ಸೀಟುಗಳು ದೊರೆತಿವೆ.
ಜೂ. 3ರಂದು ಕರಡು ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆಯಾಗಿತ್ತು. ಆದರೆ ಉನ್ನತ ಶಿಕ್ಷಣ ಇಲಾಖೆ ಅಂತಿಮ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸುವಾಗ ಮಾಡಿದ ವಿಳಂಬದಿಂದಾಗಿ ಕೌನ್ಸೆಲಿಂಗ್ ಪ್ರಕ್ರಿಯೆಗೆ ಅಡ್ಡಿಯಾಗದಂತೆ, ಲಭ್ಯವಿದ್ದ ಸೀಟುಗಳ ಆಧಾರದ ಮೇಲೆ ಕೆಇಎ ಅಪ್ಷನ್ ಎಂಟ್ರಿಗೆ ಅವಕಾಶ ನೀಡಿತ್ತು. ಇದೀಗ ಅಂತಿಮ ಸೀಟ್ ಮ್ಯಾಟ್ರಿಕ್ಸ್ ಲಭ್ಯವಿರುವುದರಿಂದ, ಈ ಹೆಚ್ಚುವರಿ ಸೀಟುಗಳನ್ನು ಸಹ ಸೀಟು ಹಂಚಿಕೆ ಪ್ರಕ್ರಿಯೆಗೆ ಸೇರಿಸಲಾಗುವುದು ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಆದ್ಯತೆಯ ಆಯ್ಕೆಗಳನ್ನು ಮಾರ್ಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಕೆಇಎ ತಿಳಿಸಿದೆ.
ಆಪ್ಷನ್ ಎಂಟ್ರಿ ಇಂದು ಅಂತ್ಯ
ಸಿಇಟಿ ರ‌್ಯಾಂಕ್ ವಿದ್ಯಾರ್ಥಿಗಳು ವಿವಿಧ ವೃತ್ತಿಪರ ಕೋರ್ಸ್‌ಗಳ ಸೀಟುಗಳನ್ನು ಪಡೆಯಲು ಮೊದಲ ಸುತ್ತಿನ ಹಂಚಿಕೆಗಾಗಿ ಆಪ್ಷನ್ ಎಂಟ್ರಿ ದಾಖಲಿಸಲು ಮಂಗಳವಾರ (ಜೂ.30) ಕೊನೆಯ ದಿನವಾಗಿದೆ.
ಈ ಹಿಂದೆ ಹೊರಡಿಸಿರುವ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಾರ ಜೂ.30ರವರೆಗೆ ಆಯ್ಕೆಗಳನ್ನು ದಾಖಲಿಸಲು ಸಮಯ ನೀಡಲಾಗಿದೆ. ಜು.6ರಂದು ಮೊದಲ ಸುತ್ತಿನ ಸೀಟು ಹಂಚಿಕೆಯ ಅಣಕು ಫಲಿತಾಂಶವನ್ನು ಬಿಡುಗಡೆ ಮಾಡಲಾಗುತ್ತದೆ. ಅಂತಿಮವಾಗಿ ಜು.15ರಂದು ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟಿಸಲಿದೆ.