ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಆಪ್ಷನ್ಸ್ ದಾಖಲಿಸುವ ಮುನ್ನ ಪರಿಶೀಲನಾ ಚೀಟಿ ಹೊಂದುವುದು ಕಡ್ಡಾಯ. ಕೆಲವರಿಗೆ ಪಿಯುಸಿ ಅಂಕ ನಮೂದಿಸದೆ ಇರುವುದು, ಇನ್ನೂ ಕೆಲವರು ವ್ಯಾಸಂಗದ ದಾಖಲೆಗಳನ್ನು ಪರಿಶೀಲನೆ ಮಾಡಿಸಿಕೊಳ್ಳದವರಿಗೆ ಪರಿಶೀಲನಾ ಸ್ಲಿಪ್ ಡೌನ್‌ಲೋಡ್ ಆಗುತ್ತಿಲ್ಲ. ಇದರ ಜತೆಗೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಒಳಮೀಸಲಾತಿ ಪ್ರಕಾರ (ಎಸ್ಸಿ ಎ, ಬಿ, ಸಿ) ಹೊಸ ಪ್ರಮಾಣ ಪತ್ರಗಳ ಅರ್ ಡಿ ಸಂಖ್ಯೆ ದಾಖಲಿಸದೇ ಇರುವುದು ಕೂಡ ಡೌನ್‌ಲೋಡ್ ಆಗದಿರುವುದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.