ಮಂಗಳವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಶರಣಪ್ರಕಾಶ್, ನೀಟ್ ಮರುಪರೀಕ್ಷೆ, ಆ ನಂತರ ಫಲಿತಾಂಶ, ಕೌನ್ಸೆಲಿಂಗ್ ಹೀಗೆ ಎಲ್ಲ ಪ್ರಕ್ರಿಯೆ ವಿಳಂಬವಾಗಲಿದೆ. ಹೀಗಾಗಿ ನೀಟ್ಗಾಗಿ ಕಾಯದೇ ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸುಂತೆ ಸಿಇಟಿ ಸೆಲ್ಗೆ ಸೂಚಿಸಲಾಗಿದೆ ಎಂದರು.