ತೊಗರಿ ಬೇಳೆ ರಫ್ತಿಗೆ ಕೇಂದ್ರ ಉತ್ತೇಜನ

ಗುಲ್ಬರ್ಗ ದಾಲ್​ ಮಿಲ್ಲರ್ಸ್​ ಅಸೋಸಿಯೇಷನ್​ ಕಲಬುರಗಿ ನೆಹರು ಗಂಜ್​ನ ಎಸ್​.ಬಿ.ಪಾಟೀಲ್​ ಆಡಿಟೋರಿಯಂನಲ್ಲಿ ದಾಲ್​ ಮಿಲ್ಲರ್​ಗಳಿಗಾಗಿ ಭಾನುವಾರ ಆಯೋಜಿಸಿದ್ದ ವಿಶೇಷ ಆಮದು ಮತ್ತು ರಫ್ತು ಜಾಗೃತಿ ತರಬೇತಿ ಕಾರ್ಯಕ್ರಮವನ್ನು ಶಾಸಕಿ ಕನೀಜ್​ ಫಾತಿಮಾ ಉದ್ಘಾಟಿಸಿದರು. ವಿಧಾನ ಪರಿಷತ್​ ಸದಸ್ಯ ಡಾ.ಬಿ.ಜಿ.ಪಾಟೀಲ್​, ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ, ಫರಾಜುಲ್​ ಇಸ್ಲಾಂ, ಸಂತೋಷ್​ ಲಂಗರ್​, ಚಂದ್ರಶೇಖರ ಕೋಬಾಳ, ಹಣಮಂತರಾಯ ತೋಟನಳ್ಳಿ, ರಮೇಶ ಕಡಗಂಚಿ, ಧರ್ಮರಾವ್​ ಇತರರಿದ್ದರು
ಗುಲ್ಬರ್ಗ ದಾಲ್​ ಮಿಲ್ಲರ್ಸ್​ ಅಸೋಸಿಯೇಷನ್​ ಕಲಬುರಗಿ ನೆಹರು ಗಂಜ್​ನ ಎಸ್​.ಬಿ.ಪಾಟೀಲ್​ ಆಡಿಟೋರಿಯಂನಲ್ಲಿ ದಾಲ್​ ಮಿಲ್ಲರ್​ಗಳಿಗಾಗಿ ಭಾನುವಾರ ಆಯೋಜಿಸಿದ್ದ ವಿಶೇಷ ಆಮದು ಮತ್ತು ರಫ್ತು ಜಾಗೃತಿ ತರಬೇತಿ ಕಾರ್ಯಕ್ರಮವನ್ನು ಶಾಸಕಿ ಕನೀಜ್​ ಫಾತಿಮಾ ಉದ್ಘಾಟಿಸಿದರು. ವಿಧಾನ ಪರಿಷತ್​ ಸದಸ್ಯ ಡಾ.ಬಿ.ಜಿ.ಪಾಟೀಲ್​, ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ, ಫರಾಜುಲ್​ ಇಸ್ಲಾಂ, ಸಂತೋಷ್​ ಲಂಗರ್​, ಚಂದ್ರಶೇಖರ ಕೋಬಾಳ, ಹಣಮಂತರಾಯ ತೋಟನಳ್ಳಿ, ರಮೇಶ ಕಡಗಂಚಿ, ಧರ್ಮರಾವ್​ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಎಂಎಲ್​ಸಿ ಡಾ.ಬಿ.ಜಿ.ಪಾಟೀಲ್​ ಹೇಳಿಕೆ
  • ಕಲಬುರಗಿ ದಾಲ್​ ಮಿಲ್ಲರ್​ಗಳಿಗೆ ಆಮದು-ರಫು ತರಬೇತಿ
ಕಲಬುರಗಿ: ತೊಗರಿ ಕಣಜ ಎಂದು ಕರೆಸಿಕೊಳ್ಳುವ ಕಲಬುರಗಿಯಲ್ಲಿ ಜಿಐ ಟ್ಯಾಗ್​ ಮಾನ್ಯತೆ ಹೊಂದಿರುವ ತೊಗರಿ ಬೆಳೆಯುತ್ತಿರುವುದರಿಂದ ಈ ವಿಶಿಷ್ಟವಾಗಿರುವ ಬೇಳೆಗೆ ಬೇರೆ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಬೇಡಿಕೆ ಹೆಚ್ಚಿರುವುದರಿಂದ, ಕೇಂದ್ರ ಸರ್ಕಾರ ರಫ್ತು ಮಾಡಲು ಮತ್ತು ದಾಲ್​ ಉದ್ಯಮಕ್ಕೆ ಸಾಕಷ್ಟು ಉತ್ತೇಜನ ನೀಡುತ್ತಿದೆ ಎಂದು ವಿಧಾನ ಪರಿಷತ್​ ಹಿರಿಯ ಸದಸ್ಯರಾದ ಉದ್ಯಮಿ ಡಾ.ಬಿ.ಜಿ.ಪಾಟೀಲ್​ ಹೇಳಿದರು.
ಗುಲ್ಬರ್ಗ ದಾಲ್​ ಮಿಲ್ಲರ್ಸ್​ ಅಸೋಸಿಯೇಷನ್​ ವತಿಯಿಂದ ನಗರದ ನೆಹರು ಗಂಜ್​ನಲ್ಲಿರುವ ಎಸ್​.ಬಿ.ಪಾಟೀಲ್​ ಆಡಿಟೋರಿಯಂನಲ್ಲಿ ಎಪಿಇಡಿಎ ಬೆಂಬಲ ಹಾಗೂ ಪುಣೆಯ ಅಷ್ಟಂ ಟ್ರೇಡಿಂಗ್​ ಸಹಯೋಗದಲ್ಲಿ ದಾಲ್​ ಮಿಲ್ಲರ್​ಗಳಿಗಾಗಿ ಭಾನುವಾರ ಆಯೋಜಿಸಿದ್ದ "ಆಮದು ಮತ್ತು ರಫ್ತು" ಜಾಗೃತಿ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ತೊಗರಿ ಬೇಳೆ ರಫ್ತು ಮಾಡಲು ಸಾಕಷ್ಟು ಅವಕಾಶಗಳಿವೆ. ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಬೇಳೆ ಕಾಳು ಬೆಳೆಗಾರರ ಅದರಲ್ಲೂ ವಿಶೇಷವಾಗಿ ತೊಗರಿ ಬೆಳೆಯುವ ರೈತರ ಹಿತಕಾಪಾಡಲು ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದೆ. ಅದನ್ನು ಇನ್ನಷ್ಟು ಹೆಚ್ಚಳ ಮಾಡುವ ಮೂಲಕ ನೆರವಿಗೆ ಆಗಮಿಸಲು ಕೋರಿದರು.
ಕಾರ್ಯಗಾರವನ್ನು ಉದ್ಘಾಟಿಸಿ ಶಾಸಕಿ ಕನೀಜ್​ ಫಾತಿಮಾ ಇಸ್ಲಾಂ ಮಾತನಾಡಿದರು. ಅಷ್ಟಂ ಟ್ರೇಡಿಂಗ್​ ಸಂಸ್ಥಾಪಕ ರಮೇಶ್​ ಕಡಗಂಚಿ, ನಿರ್ದೇಶಕ ಯು. ಧರ್ಮರಾವ್​ ಹಾಗೂ ಡಿಟಿಸಿ ತರಬೇತುದಾರ ಸುರೇಶ್​ ಪೂಜಾರ್​ (ಬೆಂಗಳೂರು) ತರಬೇತಿ ನಡೆಸಿಕೊಟ್ಟರು. ರಫ್ತು-ಆಮದು ಪ್ರಕ್ರಿಯೆಗಳು, ಅಂತಾರಾಷ್ಟ್ರೀಯ ಮಾರುಕಟ್ಟೆಯ ಅವಕಾಶಗಳು, ಗುಣಮಟ್ಟದ ಮಾನದಂಡಗಳು, ಅಗತ್ಯ ದಾಖಲೆಗಳು, ಸರ್ಕಾರಿ ಯೋಜನೆಗಳು ಹಾಗೂ ರಫ್ತು ವಿಸ್ತರಣೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಜತೆಗೆ ರಫ್ತು ವ್ಯವಹಾರದಲ್ಲಿ ಎದುರಾಗುವ ಸವಾಲು ಮತ್ತು ಅವುಗಳನ್ನು ಯಶಸ್ವಿಯಾಗಿ ಎದುರಿಸುವ ಮಾರ್ಗಗಳನ್ನೂ ವಿವರಿಸಿದರು.
ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪ, ಕಾಂಗ್ರೆಸ್​ ಮುಖಂಡ ಫರಾಜುಲ್​ ಇಸ್ಲಾಂ, ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿ ಸಂದ ಅಧ್ಯಕ್ಷ ಸಂತೋಷ್​ ಲಂಗರ್​, ಗುಲ್ಬರ್ಗ ದಾಲ್​ ಮಿಲ್ಲರ್ಸ್​ ಅಸೋಸಿಯೇಷನ್​ ಅಧ್ಯಕ್ಷ ಚಂದ್ರಶೇಖರ್​ ಕೋಬಾಳ, ಜಿಡಿಎಂಎ ಕಾರ್ಯದರ್ಶಿ ಹಣಮಂತರಾಯ ತೋಟನಳ್ಳಿ ಸೇರಿ ಅನೇಕರು ಪಾಲ್ಗೊಂಡಿದ್ದರು.
ದಾಲ್​ ಮಿಲ್ಲರ್​ಗಳಿಗಾಗಿಯೇ ವಿಶೇಷವಾಗಿ ಆಯೋಜಿಸಿದ್ದ ಈ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಅನೇಕ ದಾಲ್​ ಮಿಲ್ಲರ್​ಗಳು ಭಾಗವಹಿಸಿ, ರಫ್ತು&ಆಮದು ೇತ್ರದ ಉಪಯುಕ್ತ ಮಾಹಿತಿ ಪಡೆದರು.
ದಾಲ್​ ಉದ್ಯಮಕ್ಕೆ ಉತ್ತಮ ಮಾರುಕಟ್ಟೆ
ಜಿಲ್ಲೆಯ ದಾಲ್​ ಉದ್ಯಮಕ್ಕೆ ದೇಶ, ವಿದೇಶಗಳಲ್ಲಿ ಉತ್ತಮ ಮಾರುಕಟ್ಟೆ ಅವಕಾಶಗಳಿವೆ ಎಂದು ಕಾರ್ಯಾಗಾರ ಉದ್ಘಾಟಿಸಿ ಚಾಲನೆ ನೀಡಿದ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್​ ಫಾತಿಮಾ ಹೇಳಿದರು. ಇಂತಹ ತರಬೇತಿ ಕಾರ್ಯಕ್ರಮಗಳು ಉದ್ಯಮಿಗಳಿಗೆ ಹೊಸ ದಿಕ್ಕು ತೋರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ. ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದು ರಫ್ತು ಚಟುವಟಿಕೆಗಳನ್ನು ಮತ್ತಷ್ಟೂ ವಿಸ್ತರಿಸಬೇಕು ಎಂದು ಸಲಹೆ ನೀಡಿದರು.
"

ದಾಲ್​ ಉದ್ಯಮವು ಕಲ್ಯಾಣ ಕರ್ನಾಟಕದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಗುಣಮಟ್ಟದ ಉತ್ಪನ್ನಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸಲು ಅಗತ್ಯ ಜ್ಞಾನ ಮತ್ತು ತರಬೇತಿ ಅತ್ಯವಶ್ಯ. ಅದಕ್ಕೆ ಈ ಕಾರ್ಯಾಗಾರ ಪೂರಕವಾಗಿದೆ. ಇಂತಹ ಕಾರ್ಯ ಇನ್ನಷ್ಟು ಹೆಚ್ಚಲಿ.

— > ಡಾ.ಬಿ.ಜಿ.ಪಾಟೀಲ್​ ವಿಧಾನ ಪರಿಷತ್​ ಸದಸ್ಯ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net