ಜುಲೈ ಮುಗಿಯುತ್ತ ಬಂದಿದ್ದರೂ ಕಾವೇರಿ ಜಲಾನಯದ ಯಾವ ಜಲಾಶಯವೂ ತುಂಬಿಲ್ಲ. ಇದರಿಂದಾಗಿ ಕಾವೇರಿ ನೀರನ್ನೇ ನೆಚ್ಚಿಕೊಂಡಿರುವ ಬೆಂಗಳೂರು, ಮಂಡ್ಯ, ಮೈಸೂರು, ತುಮಕೂರು ಮುಂತಾದ ನಗರಗಳ ನಾಗರಿಕರು ಮಳೆಗಾದಲ್ಲೇ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಇನ್ನು ರೈತರ ಕಬ್ಬು- ಭತ್ತದ ಬೆಳೆಗಳು ಒಣಗುತ್ತಿರುವ ಭೀಕರ ಪರಿಸ್ಥಿತಿಯ ಅರಿವಿದ್ದರೂ ಮಂಡಳಿಯು ಹೀಗೆ ಶಿಾರಸು ಮಾಡಿರುವುದು ರಾಜ್ಯದ ಪಾಲಿಗೆ ಮಾರಕವಾಗಿದೆ. ವಾಸ್ತವ ಸ್ಥಿತಿಯ ಪೂರ್ವಾಪರ ಅಧ್ಯಯನ ಮಾಡದೆ ಹೀಗೆ ಆದೇಶ ನೀಡುವುದು ಏಕಪಕ್ಷೀಯ ನಡೆಯಾಗಿದೆ ಎಂದು ಕನ್ನಡ ನಾಡು ನುಡಿ ಜಾಗೃತಿ ಸಮಿತಿಯ ಪ್ರಮುಖರಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.