ರೈಲು ಪ್ಲಾಟ್​ ಫಾಮ್​ರ್ನಲ್ಲಿ ದನಗಳು!

ಶಹಾಬಾದ್​ ರೈಲು ನಿಲ್ದಾಣದಲ್ಲಿ ದನಗಳು ತಿರುಗಾಡುತ್ತಿರುವು
ಶಹಾಬಾದ್​ ರೈಲು ನಿಲ್ದಾಣದಲ್ಲಿ ದನಗಳು ತಿರುಗಾಡುತ್ತಿರುವು
Published on

ಶಹಾಬಾದ್​: ದನ-ಕರುಗಳು ರೈಲ್ವೆ ನಿಲ್ದಾಣದ ಪ್ಲಾಟ್​ಫಾಮ್​ರ್ ಮೇಲೆ ತಿರುಗಾಡಿ ಕೆಲಕಾಲ ಪ್ರಯಾಣಿಕರನ್ನು ಪರದಾಡುವಂತೆ ಮಾಡಿದ ಪ್ರಸಂಗ ನಗರದ ರೈಲು ನಿಲ್ದಾಣದಲ್ಲಿ ಶನಿವಾರ ನಡೆಯಿತು. ಮಧ್ಯಾಹ್ನ ಕೋನಾರ್ಕ್​ ಹೊರತುಪಡಿಸಿ ಯಾವುದೇ ಪ್ರಯಾಣಿಕ ರೈಲು ಸಂಚರಿಸುವುದಿಲ್ಲ. ಇದರಿಂದ ಜನರ ಓಡಾಟವೂ ಕಡಿಮೆ. ಈ ವೇಳೆ 8&10 ದನಗಳು ನಿಲ್ದಾಣ ಹೊಕ್ಕಿ ರಾಜಾರೋಷವಾಗಿ ಪ್ಲಾಟ್​ಫಾಮ್​ರ್ ಮೇಲೆ ತಿರುಗಾಡುತ್ತಿದ್ದವು. ಗೂಡ್ಸ್​ ಗಾಡಿಗಳು ನಿರಂತರ ಓಡಾಡುತ್ತಿರುತ್ತವೆ. ಈ ರೀತಿ ಪ್ಲಾಟ್​ಫಾಮ್​ರ್ ಮೇಲೆ ಬಂದ ದನಗಳು ರೈಲಿನ ಶಬ್ದಕ್ಕೆ ಹೆದರಿ ಹಳಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡರೆ ಯಾರು ಜವಾಬ್ದಾರರು? ಈಗಾಗಲೇ ರೈಲ್ವೆ ಇಲಾಖೆ ಹಳಿ ಉದ್ದಕ್ಕೂ ಎರಡು ಬದಿಯಲ್ಲಿ ದನಗಳು ಬಾರದಂತೆ ಕಬ್ಬಿಣದ ಪಟ್ಟಿ ಬ್ಯಾರಿಕೇಡ್​ ನಿರ್ಮಿಸಿದ್ದರಿಂದ ಹಳಿಯಲ್ಲಿ ಸಿಲುಕಿ ಸಾಯುವುದು ಕಡಿಮೆಯಾಗಿದೆ. ಆದರೀಗ ನಿಲ್ದಾಣದ ಸಿಬ್ಬಂದಿ, ಅಧಿಕಾರಿಗಳ ರ್ನಿಲಕ್ಷದಿಂದಾಗಿ ನೇರವಾಗಿ ಸ್ಟೇಷನ್​ನಲ್ಲಿ ತಿರುಗಾಡುತ್ತಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net