ಭಯ ಹುಟ್ಟಿಸಿದ ಹುಚ್ಚ ಮಂಗನ ಸೆರೆ

ಹುಲಸೂರಿನಲ್ಲಿ ಹುಚ್ಚು ಮಂಗವನ್ನು ಭಾನುವಾರ ಅರಣ್ಯ ಇಲಾಖೆ ಸೆರೆ ಹಿಡಿದಿದೆ. ತಹಸೀಲ್ದಾರ್​ ಶಿವಾನಂದ ಮೇತ್ರೆ, ವಲಯ ಅರಣ್ಯ ಅಧಿಕಾರಿ ಶಿವಕುಮಾರ ರಾಠೋಡ್​, ಯಾಸಮೀನ್​ ಪಟೇಲ್​ ಇತರರಿದ್ದರು.
ಹುಲಸೂರಿನಲ್ಲಿ ಹುಚ್ಚು ಮಂಗವನ್ನು ಭಾನುವಾರ ಅರಣ್ಯ ಇಲಾಖೆ ಸೆರೆ ಹಿಡಿದಿದೆ. ತಹಸೀಲ್ದಾರ್​ ಶಿವಾನಂದ ಮೇತ್ರೆ, ವಲಯ ಅರಣ್ಯ ಅಧಿಕಾರಿ ಶಿವಕುಮಾರ ರಾಠೋಡ್​, ಯಾಸಮೀನ್​ ಪಟೇಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹುಲಸೂರಿನಲ್ಲಿ ನಿಟ್ಟಿಸಿರು ಬಿಟ್ಟ ಜನರು
ಹುಲಸೂರು: ಪಟ್ಟಣದಲ್ಲಿ ಶನಿವಾರ ಸುಮಾರು ಎಂಟು ಜನರಿಗೆ ಕಡಿದು ಗಾಯಗೊಳಿಸಿದ ಹುಚ್ಚ ಮಂಗನ್ನು ಭಾನುವಾರ ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಪಟ್ಟಣದಲ್ಲಿ ಜನರ ನೆಮ್ಮದಿ ಹಾಳು ಮಾಡಿದ್ದ ಹುಚ್ಚು ಮಂಗ 13 ವರ್ಷದ ಬಾಲಕ ಅಸಾದ್​ ಸರ್ದಾರ್​ಮಿಯಾ ಮುಗಳೆ ಹೊಟ್ಟೆಗೆ ಕಡಿದು ತೀವ್ರ ಗಾಯಗೊಳಿಸಿತ್ತು. 65 ವರ್ಷದ ಮಹಿಳೆ ಚಂದ್ರಕಲಾ ಕಾಡಾದಿ ಮನೆಯ ಆವರಣದಲ್ಲಿ ಕೆಲಸ ಮಾಡುವಾಗ ಕಾಲಿಗೆ ಕಚ್ಚಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಸಾಯಿ ಬಡಾವಣೆಯಲ್ಲಿ ಕಟ್ಟಡ ಕಾರ್ಮಿಕರು ಮಂಗ ಬಂದಿರುವ ಸುದ್ದಿ ತಿಳಿದು ಓಡಲು ಹೋಗಿ ನಾಲ್ಕು ಜನರು ಬಿದ್ದು ಗಾಯ ಮಾಡಿಕೊಂಡಿದ್ದಾರೆ.
ಭಾನುವಾರ ಬೆಳಗ್ಗೆ ಹಿಮ್ಮತ್​ ನಗರ್​ ಬಡಾವಣೆಯ ಇಸಾಕ್​ ಅಲಿಸಾಬ್​, ಮುಸ್ತಫಾ, ಕನ್ನಾಡೆ ಬಡಾವಣೆಯ ವೀರಯ್ಯ ಸ್ವಾಮಿ ಪತ್ರಿ, ಗಡಿಗೌಂಡಗಾವ ಗ್ರಾಮದ ಸಿದ್ದು ಸ್ವಾಮಿ ಸೇರಿ ಒಟ್ಟು 12 ಜನರಿಗೆ ಕಡಿದು ಗಾಯಗೊಳಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ನೀಲಂಗಾ ಹಾಗೂ ಉಮರ್ಗಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಎರಡು ದಿನದಿಂದ ಪಟ್ಟಣದ ಜನರ ನೆಮ್ಮದಿ ಹಾಳು ಮಾಡಿರುವ ಮಂಗನ ಸೆರೆ ಹಿಡಿದಿದ್ದು, ಸಾರ್ವಜನಿಕರು ಆತಂಕ ಪಡದೆ ನೆಮ್ಮದಿಯಾಗಿರಬೇಕು ಎಂದು ತಹಸೀಲ್ದಾರ್​ ಶಿವಾನಂದ ಮೇತ್ರೆ ತಿಳಿಸಿದ್ದಾರೆ.
ವಲಯ ಅರಣ್ಯ ಅಧಿಕಾರಿ ಶಿವಕುಮಾರ ರಾಠೋಡ್​ ಮಾತನಾಡಿ, ಈ ಮಂಗ ಗುಂಪಿನಿಂದ ಹೊರಗೆ ಬಂದಿದ್ದರಿಂದ ವಿಚಲಿತವಾಗಿ ಸಿಕ್ಕ-ಸಿಕ್ಕವರನ್ನು ಕಡಿಯುತ್ತಿದೆ. ಬಸವಕಲ್ಯಾಣ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮೇಲಾಧಿಕಾರಿಗಳ ಆದೇಶದಂತೆ ಸುರಕ್ಷಿತ ಸ್ಥಳಕ್ಕೆ ಬಿಡಲಾಗುವುದು ಎಂದು ಹೇಳಿದರು.
ಪಿಎಸ್​ ಶಿವಪ್ಪ ಮೇಟಿ, ಗ್ರಾಪಂ ಅಧ್ಯಕ್ಷೆ ದೀಪಾರಾಣಿ ಭೋಸ್ಲೆ, ಉಪಾಧ್ಯಕ್ಷೆ ಮೀರಾಬಾಯಿ ಗಾಯಕವಾಡ, ಪಿಡಿಒ ವಿನಯಕುಮಾರ, ಗ್ರಾಪಂ ಸದಸ್ಯರಾದ ವಿವೇಕಾನಂದ ಚಳಕಾಪುರೆ, ಯಾಸಮೀನ್​ ಪಟೇಲ್​, ವಿದ್ಯಾಸಾಗರ್​ ಬನ್ಸೂಡೆ, ಮನ್ಸೂರ್​ ದಾವಲಜಿ ಪ್ರಮುಖರಾದ ರಣಜಿತ್​ ಗಾಯಕವಾಡ, ಡಾ. ಧಮೇಂರ್ದ್ರ ಭೋಸ್ಲೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net