ಉಪನ್ಯಾಸಕರ ನಿಯೋಜನೆ ರದ್ದುಪಡಿಸಿ

ರವೀಂದ್ರನಾಥ ಹೊಸಮನಿ
ರವೀಂದ್ರನಾಥ ಹೊಸಮನಿ
Published on

ಪ್ರಮುಖ ಮುಖ್ಯಾಂಶಗಳು

  • ಸಂಘದ ಜಿಲ್ಲಾಧ್ಯಕ್ಷ ಡಾ.ಹೊಸಮನಿ ಆಗ್ರಹ
  • 9,10 ಮಕ್ಕಳಿಗೆ ಪಾಠ ಬೋಧನೆ ಆದೇಶ
ಯಾದಗಿರಿ: ಒಂಬತ್ತು ಮತ್ತು ಹತ್ತನೇ ತರಗತಿಗಳಿಗೆ ಪಾಠ ಬೋಧಿಸಲು ಪಿಯು ಉಪನ್ಯಾಸಕರನ್ನು ನಿಯೋಜಿಸುವ ಉದ್ದೇಶದಿಂದ ಸರ್ಕಾರ ಹೊರಡಿಸಿರುವ ಕರಡು ನಿಯಮ ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯವಹಿಸಿದರೆ ಹಂತ, ಹಂತದ ಹೋರಾಟ ಮಾಡಲಾಗುವುದೆಂದು ಎಂದು ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂ ಜಿಲ್ಲಾ ಘಟಕ ಹಾಗೂ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಪ್ರಾಚಾರ್ಯರ ಸಂದ ಜಿಲ್ಲಾ ಘಟಕವು ಮಂಗಳವಾರ ಎಚ್ಚರಿಸಿದೆ.
ಈ ಕರಡು ತಿದ್ದುಪಡಿಯು ಶೈಕ್ಷಣಿಕ ಹಿತದೃಷ್ಟಿಯಿಂದಲೂ ಸಮರ್ಥನೀಯವಲ್ಲ, ಆಡಳಿತಾತ್ಮಕವಾಗಿಯೂ ಏಕಪಕ್ಷಿಯಾಗಿದೆ. ರಾಷ್ಟ್ರೀಯ ಶಾಲಾ ಶಿಕ್ಷಣ ಪಠ್ಯಕ್ರಮ ಚೌಕಟ್ಟು-2023ರ ಮೂಲ ಆಶಯಗಳಿಗೆ ವಿರುದ್ದವಾಗಿದೆ ಎಂದು ಅವರು ಹೇಳಿದರು.
ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಸಾವಿರಾರು ಉಪನ್ಯಾಸಕರ ಮೇಲೆ ನೇರ ಪರೀಣಾಮ ಬೀರುವ ಈ ಮಹತ್ವದ ನಿರ್ಧಾರವನ್ನು ಉಪನ್ಯಾಸಕರು, ಪ್ರಾಚಾರ್ಯರು, ವಿದ್ಯಾರ್ಥಿಗಳು, ಪಾಲಕರು, ವಿಶ್ವವಿದ್ಯಾಲಯಗಳು, ಶಿಕ್ಷಣ ತರು ಹಾಗೂ ಇತರ ಹಿತಾಸಕ್ತ ಪಗಳೊಂದಿಗೆ ಸರ್ಕಾರ ಯಾವುದೇ ಸಮಾಲೋಚನೆ ನಡೆಸದೆ, ಅಧ್ಯಯನ ಕೈಗೊಳ್ಳದೆ ಏಕಪಯವಾಗಿ ಪ್ರಕಟಿಸಿರುವುದು ಅಸಹನೀಯ ಎಂದು ಅವರು ದೂರಿದರು.
ಈ ಕರಡು ಪ್ರಸ್ತಾವನೆ ಯಾವುದೇ ಗಂಭೀರ ಶೈಣಿಕ ಸುಧಾರಣೆ ಒಳಗೊಂಡಿರುವುದಿಲ್ಲ, ಬದಲಿಗೆ ಕರ್ನಾಟಕದ ಪದವಿಪೂರ್ವ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹಾಗೂ ಲಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಅಪಾಯದ ಪ್ರಪಾತಕ್ಕೆ ತಳ್ಳುವ ಅಧಿಕಾರಿಶಾಹಿಗಳ ಆಡಳಿತಾತ್ಮಕ ಪ್ರಯೋಗದ ಹುನ್ನಾರವಾಗಿದೆ ಎಂದು ಹೊಸಮನಿ ಆರೋಪಿಸಿದರು. ಆರಂಭಿಕವಾಗಿ ಜುಲೈ ಮೊದಲ ವಾರದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಬೃಹತ್​ ರಾಜ್ಯಮಟ್ಟದ ಧರಣಿ ನಡೆಸಲು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸಂದ ನಿರ್ಮಲಾ ಸಿನ್ನೂರ, ಅಮರೇಶ ಭಂಗೂರ, ರವಿಂದ್ರ ಗುತ್ತೇದಾರ್​, ಮರೆಪ್ಪ ನಾಯ್ಕೋಡಿ, ಸೋಫಿಸಾಬ್​ ಗುತ್ತೇದಾರ್​, ಸಾಬಯ್ಯ, ಸುರೇಶಬಾಬು ಅರುಣಿ, ಭೀಮಣ್ಣ ಅಂಚೆಸೂಗುರು, ಸಿದ್ದರಾಮಪ್ಪ ಅನವಾರ, ಶಾಮವೆಲ್​ ಕನ್ನಡಿ ಇತರರಿದ್ದರು.
ಅಸ್ತಿತ್ವವನ್ನೆ ಹಾಳು ಮಾಡುವಂತಿದೆ
ಪ್ರಥಮ ಮತ್ತು ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ವಿಶೇಷವಾಗಿ ನೇಮಕಗೊಂಡಿರುವ ಪದವಿಪೂರ್ವ ಉಪನ್ಯಾಸಕರು ಗೆಜೆಟೆಡ್​ ಗ್ರೂಪ್-ಬಿ ಶೈಕ್ಷಣಿಕ ವೃಂದದವರಾಗಿದ್ದಾರೆ. ಅವರನ್ನು 9 ಮತ್ತು 10ನೇ ತರಗತಿಗಳ ಬೋಧನೆಗಳಿಗೆ ತೊಡಗಿಸುವುದು ಶೈಕ್ಷಣಿಕ ವಿಶೇಷತೆಯನ್ನು ಕುಗ್ಗಿಸುವುದಲ್ಲದೆ ವೃಂದದ ಸ್ವರೂಪ, ಸೇವಾ ಧನತೆ. ಸಾರ್ವಜನಿಕ ಮನ್ನಣೆ ಮತ್ತು ಪದವಿಪೂರ್ವ ಶಿಕ್ಷಣದ ಸ್ವತಂತ್ರ ಅಸ್ತಿತ್ವ ಹಾಳು ಮಾಡುವ ಕ್ರಮವಾಗಿದೆ ಎಂದರು.
ನೇರ ನೇಮಕ ಮಾಡಿಕೊಳ್ಳಿ
ಪ್ರೌಢಶಿಣದಲ್ಲಿ ಶಿಕ್ಷಕರ ಕೊರತೆ ಇದ್ದಲ್ಲಿ ಸರ್ಕಾರ ತಕ್ಷಣವೇ ಶಿಕ್ಷಕರ ನೇರ ನೇಮಕಾತಿ ಮಾಡಬೇಕು. ಬಡ್ತಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡಬೇಕು. ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಬೇಕು, ಸಂಬಂಧಿತ ವೃಂದದಲ್ಲೆ ಸಮರ್ಪಕ ಸಿಬ್ಬಂದಿ ನಿಯೋಜನೆ ಮಾಡಬೇಕು. ವೈಜ್ಞಾನಿಕ ಹಾಗೂ ಸಮಗ್ರ ಮಾನವ ಸಂಪನ್ಮೂಲ ಯೋಜನೆ ರೂಪಿಸಬೇಕು. ಒಂದು ವೃಂದದ ಕೊರತೆಯನ್ನು ಮತ್ತೊಂದು ವಿಶೇಷ ವೃಂದವನ್ನು ದುರ್ಬಲಗೊಳಿಸುವ ಮೂಲಕ ಪರಿಹರಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಂಘದ ಪ್ರಮುಖ ಬೇಡಿಕೆಗಳು
ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿಪೂರ್ವ ಶಿಣ) (ನೇಮಕಾತಿ) (ತಿದ್ದುಪಡಿ) ಕರಡು ನಿಯಮಗಳು-2026 ಅನ್ನು ತಕ್ಷಣ ಹಿಂಪಡೆಯಬೇಕು. ಪದವಿಪೂರ್ವ ಉಪನ್ಯಾಸಕರ ಸ್ವತಂತ್ರ ವೃಂದದ ಅಸ್ತಿತ್ವ ಮತ್ತು ಗೌರವವನ್ನು ರಸಬೇಕು. ಪದವಿಪೂರ್ವ ಶಿಕ್ಷಣದಲ್ಲಿನ ಶೈಕ್ಷಣಿಕ ಶ್ರೇಷ್ಠತೆ ಮತ್ತು ವಿಷಯ ಪರಿಣಿತಿಯನ್ನು ಕಾಪಾಡಬೇಕು. ವಿಷಯವನ್ನು ಸಮಗ್ರವಾಗಿ ಅಧ್ಯಯನ ಮಾಡಲು ಉನ್ನತ ಮಟ್ಟದ ತರ ಸಮಿತಿ ರಚಿಸಬೇಕು. ಸರ್ಕಾರ, ಉಪನ್ಯಾಸಕರು, ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಣ ತರನ್ನು ಒಳಗೊಂಡ ತ್ರಿಪಯ ಸಮಾಲೋಚನೆ ನಡೆಸಬೇಕು ಎಂದು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net