ಅಧ್ಯಯನಶೀಲರಾಗಿ ಭವಿಷ್ಯ ನಿರ್ಮಿಸಿಕೊಳ್ಳಿ

ಶಹಾಪುರದ ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಪದವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಸಿ.ಬಿ.ಪ್ರೌಢಶಾಲೆ ಮುಖ್ಯಗುರು ತಿಪ್ಪಣ್ಣ ಜಮಾದಾರ ಉದ್ಘಾಟಿಸಿದರು. ಪ್ರೊ.ಶಿವಲಿಂಗಣ್ಣ ಸಾಹು, ಸೈಯದ್​ ಚಾಂದಪಾಶಾ, ದೇವಿಂದ್ರಪ್ಪ ಆಲ್ದಾಳ, ಡಾ.ಭೀಮಪ್ಪ ಭಂಡಾರಿ, ಸಂಗಣ್ಣ ದಿಗ್ಗಿ ಇತರರಿದ್ದರು.
ಶಹಾಪುರದ ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಪದವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಸಿ.ಬಿ.ಪ್ರೌಢಶಾಲೆ ಮುಖ್ಯಗುರು ತಿಪ್ಪಣ್ಣ ಜಮಾದಾರ ಉದ್ಘಾಟಿಸಿದರು. ಪ್ರೊ.ಶಿವಲಿಂಗಣ್ಣ ಸಾಹು, ಸೈಯದ್​ ಚಾಂದಪಾಶಾ, ದೇವಿಂದ್ರಪ್ಪ ಆಲ್ದಾಳ, ಡಾ.ಭೀಮಪ್ಪ ಭಂಡಾರಿ, ಸಂಗಣ್ಣ ದಿಗ್ಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯಗುರು ತಿಪ್ಪಣ್ಣ ಜಮಾದಾರ ಸಲಹೆ
  • ಹಾಪುರದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ
ಶಹಾಪುರ: ವಿದ್ಯಾರ್ಥಿಗಳು ಹೆಚ್ಚು ಅಧ್ಯಯನಶೀಲರಾಗಬೇಕು. ಕಠಿಣ ಪರಿಶ್ರಮ, ನಿರಂತರ ಪ್ರಯತ್ನ, ಶ್ರದ್ಧೆಯಿಂದ ಅಭ್ಯಾಸ ಮಾಡಿ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಬೇಕು ಎಂದು ಸಿ.ಬಿ.ಪ್ರೌಢಶಾಲೆ ಮುಖ್ಯಗುರು ತಿಪ್ಪಣ್ಣ ಜಮಾದಾರ ಸಲಹೆ ನೀಡಿದರು.
ನಗರದ ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಪದವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯರಿಗೆ ಬೀಳ್ಕೊಡುವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿಯಾಗಬೇಕಾದರೆ ಜ್ಞಾನದೊಂದಿಗೆ ಕೌಶಲ, ಪ್ರತಿಭೆ, ಸಾಮರ್ಥ್ಯ ತುಂಬಾ ಅಗತ್ಯವಾಗಿದೆ. ಇದನ್ನು ಅರ್ಥಮಾಡಿಕೊಂಡು ಗಂಭೀರ ಅಧ್ಯಯನದಲ್ಲಿ ತೊಡಗಿಸಿಕೊಂಡು ವಿಶಿಷ್ಟವಾದುದ್ದನ್ನು ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಶಿವಲಿಂಗಣ್ಣ ಸಾಹು ಮಾತನಾಡಿ, ಸಾಧನೆಯ ಛಲ, ಗಂಭೀರ ಅಧ್ಯಯನದಿಂದ ಗುರಿ ಸಾಧಿಸಿ ಜನ್ಮ ನೀಡಿದ ತಂದೆ&ತಾಯಿಗೆ ಹಾಗೂ ಕಾಲೇಜಿಗೆ ಮತ್ತು ಸಮಾಜಕ್ಕೆ ಕೀರ್ತಿ ತರುವಂತಹ ಹೆಮ್ಮೆ ಸಾಧಕರಾಗಬೇಕು ಎಂದು ಕರೆ ನೀಡಿದರು.
ಈ ವೇಳೆ ಅಧ್ಯಾಪಕರಾದ ಸೈಯದ್​ ಚಾಂದಪಾಶಾ, ದೇವಿಂದ್ರಪ್ಪ ಆಲ್ದಾಳ, ಡಾ. ಭೀಮಪ್ಪ ಭಂಡಾರಿ, ಸಂಗಣ್ಣ ದಿಗ್ಗಿ, ಡಾ. ಗಂಗಪ್ಪ ಹೊಸಮನಿ, ಡಾ. ರಾವೇಂದ್ರ ಹಾರಣಗೇರಾ, ಡಾ. ಸತೀಶ ತುಳೇರ, ಡಾ. ಮಾನಯ್ಯ ಗೌಡಗೇರಾ, ಡಾ. ನರಸಣ್ಣ ಗುರಿಕಾರ ಸೇರಿದಂತೆಯೇ ಇತರರಿದ್ದರು. ವಿದ್ಯಾರ್ಥಿಗಳಾದ ಮಹಾಲ್ಮ, ಕನಿಷ್​ಫಾತಿಮಾ, ಪ್ರೇಮಾ, ಕಾಲೇಜಿನ ಅನುಭವಗಳನ್ನು ಹಂಚಿಕೊಂಡರು.ವಿಜಯಶ್ರೀ, ಭೀಮಬಾಯಿ ಪ್ರಾರ್ಥಿಸಿದರು, ಭಾಗ್ಯಶ್ರೀ ನಿರೂಪಿಸಿದರು,ಭವಾನಿ ಸ್ವಾಗತಿಸಿದರು,ಅಂಬಿಕಾ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net