ಉತ್ತಮ ಬದುಕು ರೂಪಿಸಿಕೊಳ್ಳಿ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಬುಧವಾರ ಏರ್ಪಡಿಸಿದ್ದ ಟಿಕ್ನಿಷಿಯನ್​ ತರಬೇತಿ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್​ ನ್ಯಾಯಾಧೀಶ ಶ್ರೀನಿವಾಸ ನವಲೆ ಚಾಲನೆ ನೀಡಿದರು. ರಾಕೇಶ ಕಾಂಬಳೆ, ಸುರೇಂದ್ರ ಪಾಟೀಲ್​, ಚನ್ನಪ್ಪ ಯಟಗಲ್​, ಭೀಮಾಶಂಕರ ಡಾಂಗೆ, ಶ್ರೀಮಂತಗೌಡ ಪಾಟೀಲ್​ ಇತರರಿದ್ದರು. ==========
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಬುಧವಾರ ಏರ್ಪಡಿಸಿದ್ದ ಟಿಕ್ನಿಷಿಯನ್​ ತರಬೇತಿ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್​ ನ್ಯಾಯಾಧೀಶ ಶ್ರೀನಿವಾಸ ನವಲೆ ಚಾಲನೆ ನೀಡಿದರು. ರಾಕೇಶ ಕಾಂಬಳೆ, ಸುರೇಂದ್ರ ಪಾಟೀಲ್​, ಚನ್ನಪ್ಪ ಯಟಗಲ್​, ಭೀಮಾಶಂಕರ ಡಾಂಗೆ, ಶ್ರೀಮಂತಗೌಡ ಪಾಟೀಲ್​ ಇತರರಿದ್ದರು. ==========
Published on

ಪ್ರಮುಖ ಮುಖ್ಯಾಂಶಗಳು

  • ಕೈದಿಗಳಿಗೆ ನ್ಯಾಯಾಧೀಶ ಶ್ರೀನಿವಾಸ ನವಲೆ ಸಲಹೆ
  • ಕೇಂದ್ರ ಕಾರಾಗೃಹದಲ್ಲಿ ಟಿಕ್ನಿಷಿಯನ್​ ತರಬೇತಿ
ಕಲಬುರಗಿ: ಅಗತ್ಯ ತರಬೇತಿ ಮೂಲಕ ಸ್ವಯಂ ಉದ್ಯೋಗದೊಂದಿಗೆ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್​ ನ್ಯಾಯಾಧೀಶ ಶ್ರೀನಿವಾಸ ನವಲೆ ಕೈದಿಗಳಿಗೆ ಸಲಹೆ ನೀಡಿದರು.
ಕೇಂದ್ರ ಕಾರಾಗೃಹದಲ್ಲಿ ಗುಲ್ಬರ್ಗ ಜನಶಿಕ್ಷಣ ಸಂಸ್ಥಾನ್​ ಸಹಯೋಗದಡಿ ಬಂದಿಗಳಲ್ಲಿ ಪತ್ರಿ ತಂಡಕ್ಕೆ 40 ಶಿಬಿರಾರ್ಥಿಗಳಿಗೆ ಬುಧವಾರ ಏರ್ಪಡಿಸಿದ್ದ ಸಹಾಯಕ ಎಲೆಕ್ಟ್ರಿಕಲ್​ ಟಿಕ್ನಿಷಿಯನ್​ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾವಲಂಬಿ ಬದುಕಿಗೆ ಇಂಥ ತರಬೇತಿಗಳು ಪೂರಕ. ಕಾರಾಗೃಹದಲ್ಲಿ ನೀಡುವ ವೃತ್ತಿಪರ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜನಶಿಕ್ಷಣ ಸಂಸ್ಥಾನ್​ ನಿರ್ದೇಶಕ ಸುರೇಂದ್ರ ಪಾಟೀಲ್​ ಮಾತನಾಡಿ, ತಮ್ಮ ಸಂಸ್ಥೆ ಸಾಮಾನ್ಯವಾಗಿ ಗ್ರಾಮೀಣ ಜನರಿಗೆ ಉಚಿತ ತರಬೇತಿ ನೀಡುತ್ತಿದೆ. ಈ ಬಾರಿ ಕಲಬುರಗಿ ಕೇಂದ್ರ ಕಾರಾಗೃಹ ಬಂದಿಗಳಿಗೆ ತರಬೇತಿ ನೀಡಲು ಮುಂದಾಗಿದ್ದು, ಪ್ರಾರಂಭದಲ್ಲಿ 40 ಶಿಬಿರಾರ್ಥಿಗಳಿಗೆ ಸಹಾಯಕ ಎಲೆಕ್ಟ್ರಿಕಲ್​ ಟಿಕ್ನಿಷಿಯನ್​ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾರಾಗೃಹದ ಮುಖ್ಯ ಅಧೀಕ್ಷಕ ರಾಕೇಶ ಕಾಂಬಳೆ, ಸಂಸ್ಥೆ ಸಹಾಯಕ ಅಧೀಕ್ಷಕ ಚನ್ನಪ್ಪ ಯಟಗಲ್​, ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ ಮಾತನಾಡಿದರು. ಸಂಸ್ಥೆಯ ಬಸವರಾಜ ಡಾಬಾ, ರಾಜಶೇಖರ ಬಿರಾದಾರ್​, ತರಬೇತುದಾರ ಸೈಯದ್​ ಬಿಲಾಲ್​, ಶ್ರೀಮಂತಗೌಡ ಪಾಟೀಲ್​ ಇತರರಿದ್ದರು. ಸಂಸ್ಥೆ ಸಹಾಯಕ ಅಧೀಕ್ಷಕ ಬಿ.ಸುರೇಶ್​ ಸ್ವಾಗತಿಸಿದರು. ಶಿಕ್ಷಕ ನಾಗರಾಜ ಮೂಲಗೆ ನಿರೂಪಣೆ ಮಾಡಿ ವಂದಿಸಿದರು. ಶಿವಶಂಕರ ಪ್ರಾರ್ಥನಾ ಗೀತೆ ಹಾಡಿದರು.
"

ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಅನೇಕ ರೀತಿಯ ತರಬೇತಿ ನೀಡುವ ಉದ್ದೇಶ ಹೊಂದಿದೆ. ಕಲಬುರಗಿಯ ಜನಶಿಕ್ಷಣ ಸಂಸ್ಥಾನ್​ ಮೂಲಕ ಆಯ್ದ 40 ಶಿಕ್ಷಾ ಬಂದಿಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು.

— > ರಾಕೇಶ ಕಾಂಬಳೆ ಮುಖ್ಯ ಅಧೀಕ್ಷಕ, ಕೇಂದ್ರ ಕಾರಾಗೃಹ ಕಲಬುರಗಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net