ಸ್ವಚ್ಛ ಸಿಟಿ ನಿರ್ಮಿಸಿ, ಟ್ರಾಫಿಕ್​ ಸಮಸ್ಯೆ ದೂರಮಾಡಿ

ಆಳಂದ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ನ್ಯಾಯಾಧೀಶ ವಿಜಯಕುಮಾರ ಎಸ್​.ಜೆಟ್ಲಾ ಮಾತನಾಡಿದರು. ಸುಮನಾ ಚಿತ್ತರಗಿ, ಪ್ರವಿಣಕುಮಾರ್​ ಇತರರಿದ್ದರು.
ಆಳಂದ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ನ್ಯಾಯಾಧೀಶ ವಿಜಯಕುಮಾರ ಎಸ್​.ಜೆಟ್ಲಾ ಮಾತನಾಡಿದರು. ಸುಮನಾ ಚಿತ್ತರಗಿ, ಪ್ರವಿಣಕುಮಾರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶ ವಿಜಯಕುಮಾರ ಜೆಟ್ಲಾ ತಾಕೀತು
  • ಆಳಂದನಲ್ಲಿ ಲೋಕ ಅದಾಲತ್​ ಪೂರ್ವಭಾವಿ ಸಭೆ
ಆಳಂದ: ಪಟ್ಟಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ, ಟ್ರಾಫಿಕ್​ ಸಮಸ್ಯೆ ಮಿತಿ ಮೀರಿದೆ. ನಾನೇ ಕೋರ್ಟ್​ಗೆ ಬರಬೇಕಾದರೆ ಒಂದು ಗಂಟೆ ಸಮಯ ತೆಗೆದುಕೊಂಡಿದೆ. ಸ್ಥಳಿಯ ಅಧಿಕಾರಿಗಳು ಏನು ಕೆಲಸ ಮಾಡುತ್ತಿದ್ದಾರೆ ಎಂದ?ು ಜೆಎಂಎಫ್​ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ವಿಜಯಕುಮಾರ ಎಸ್​. ಜೆಟ್ಲಾ ಕಿಡಿಕಾರಿದರು.
ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ಸೆ.12ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್​ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಸ್ತೆ ಅಗಲೀಕರಣ ನೆಪದಲ್ಲಿ ಸ್ವಚ್ಛತೆ ಕುಂಠಿತಗೊಂಡಿದೆ. ನ್ಯಾಯಾಲಯದ ಸುತ್ತಲೂ ಮಲೀನ ವಾತಾವರಣ ನಿರ್ಮಾಣವಾಗಿದೆ. ದಿನೇ-ದಿನೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಟ್ರಾಫಿಕ್​ ಕಿರಿಕಿರಿ ಉಂಟಾಗುತ್ತಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಅಧಿಕಾರಿಗಳು ಸುಮ್ಮನೆ ಕುಳಿತಿರುವುದು ಏಕೆ ? ಮುಂದಿನ ದಿನಗಳಲ್ಲಿ ಎಲ್ಲ ಸಮಸ್ಯೆಗಳು ದೂರವಾಗಬೇಕು ಎಂದು ತಾಕೀತು ಮಾಡಿದರು.
ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ ಬಾಕಿ ಇರುವ ಬ್ಯಾಂಕ್​ ವಸೂಲಾತಿ, ಮೋಟಾರ್​ ಅಪಘಾತ ಪರಿಹಾರ, ವಿದ್ಯುತ್​ ಹಾಗೂ ನೀರಿನ ಶುಲ್ಕ, ಭೂ ಸ್ವಾಧಿನ, ರಾಜಿ ಆಗಬಲ್ಲ ಸಿವಿಲ್​ ಮತ್ತು ಕ್ರಿಮಿನಲ್​ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಪ್ರಧಾನ ಸಿವಿಲ್​ ನ್ಯಾಯಾಧೀಶೆ ಸುಮನಾ ಚಿತ್ತರಗಿ, ಹೆಚ್ಚುವರಿ ಸಿವಿಲ್​ ನ್ಯಾಯಾಧೀಶ ಪ್ರವಿಣಕುಮಾರ, ಸಹಾಯಕ ಸರ್ಕಾರಿ ಅಭಿಯೋಜಕರಾದ ಇಸ್ಮಾಯಿಲ್​ ಪಟೇಲ್​, ಜ್ಯೋತಿ ವಿ. ಬಂದಿ, ನ್ಯಾಯವಾದಿಗಳ ಸಂಘದ ತಾಲೂಕು ಅಧ್ಯಕ್ಷ ಕಮಲಾಕರ ರಾಠೋಡ್​, ಗ್ರೇಡ್​-2 ತಹಸೀಲ್ದಾರ್​ ಮಲ್ಲಿಕಾರ್ಜುನ ಪಾಟೀಲ್​, ಪಿಎಸ್​ಐ ಸಂಜಯ ರೆಡ್ಡಿ, ಸಾರಿಗೆ ಘಟಕದ ವ್ಯವಸ್ಥಾಪಕ ಯೋಗೇಶ ಸರಸಂಬಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net