ವಿಶ್ವಕ್ಕೆ ಪ್ರೀತಿ ಕಾಳಜಿ ಹಂಚಿದ ಬುದ್ಧ

ಕಲಬುರಗಿಯಲ್ಲಿ ದೃಶ್ಯ ಬೆಳಕು ಸಾಂಸತಿಕ ಸಂಸ್ಥೆ ಭಾನುವಾರ ಆಯೋಜಿಸಿದ್ದ ಚಿತ್ರಕಲಾ ಶಿಬಿರಕ್ಕೆ ಲಲಿತಕಲಾ ಅಕಾಡೆಮಿ ಸದಸ್ಯ ಬಸವರಾಜ ಜಾನೆ ಚಿತ್ರ ಬಿಡಿಸುವ ಮೂಲಕ ಚಾಲನೆ ನೀಡಿದರು. ಡಾ.ಸೂರ್ಯಕಾಂತ ಸುಜ್ಯಾತ್​, ಡಾ.ಪರಶುರಾಮ, ಎಂ.ಬಿ.ಪಾಟೀಲ್​, ಕೆ.ಎಂ.ಕುಮಾರಸ್ವಾಮಿ ಇತರರಿದ್ದರು.
ಕಲಬುರಗಿಯಲ್ಲಿ ದೃಶ್ಯ ಬೆಳಕು ಸಾಂಸತಿಕ ಸಂಸ್ಥೆ ಭಾನುವಾರ ಆಯೋಜಿಸಿದ್ದ ಚಿತ್ರಕಲಾ ಶಿಬಿರಕ್ಕೆ ಲಲಿತಕಲಾ ಅಕಾಡೆಮಿ ಸದಸ್ಯ ಬಸವರಾಜ ಜಾನೆ ಚಿತ್ರ ಬಿಡಿಸುವ ಮೂಲಕ ಚಾಲನೆ ನೀಡಿದರು. ಡಾ.ಸೂರ್ಯಕಾಂತ ಸುಜ್ಯಾತ್​, ಡಾ.ಪರಶುರಾಮ, ಎಂ.ಬಿ.ಪಾಟೀಲ್​, ಕೆ.ಎಂ.ಕುಮಾರಸ್ವಾಮಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಧ್ಯಾಪಕ ಡಾ.ಸೂರ್ಯಕಾಂತ ಸುಜ್ಯಾತ್​ ಬಣ್ಣನೆ
  • ಕಲಬುರಗಿಯಲ್ಲಿ ಚಿತ್ರಕಲಾ ಶಿಬಿರ
 ಕಲಬುರಗಿ: ಜಗತ್ತಿನಲ್ಲಿ ಬುದ್ಧ, ಬಸವ, ಡಾ.ಅಂಬೇಡ್ಕರ್​ ಕುರಿತು ಅಧ್ಯಯನ ನಡೆಯುತ್ತಿದೆ. ಮನುಷ್ಯ ಪ್ರೀತಿ ಮತ್ತು ಜೀವ ಕಾಳಜಿಯಿಂದ ಅವರ ಸಂದೇಶಗಳನ್ನು ಚಿತ್ರಗಳ ಮೂಲಕ ಬಿಡಿಸಿ ಸಮಾಜಕ್ಕೆ ತಲುಪಿಸುವುದು ಸೃಜನಶೀಲ ಕಲಾವಿದರಿಂದ ಸಾಧ್ಯ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಡಾ.ಸೂರ್ಯಕಾಂತ ಸುಜ್ಯಾತ್​ ಹೇಳಿದರು. 
ದೃಶ್ಯಬೆಳಕು ಸಾಂಸತಿಕ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಡಿ ರಾಮಮಂದಿರ ರಸ್ತೆಯ ಬಿಸಿಲು ಆರ್ಟ್​ ಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ ಬುದ್ಧ, ಬಸವ ಮತ್ತು ಅಂಬೇಡ್ಕರ್​ ಸಂದೇಶಾಧರಿತ ಚಿತ್ರಕಲಾ ಶಿಬಿರಕ್ಕೆ ಚಾಲನೆ ನೀಡಿದ ಅವರು, 2500 ವರ್ಷದ ಹಿಂದೆ ಆಸೆಯೇ ದು@ಖಕ್ಕೆ ಮೂಲ ಎಂಬ ಬುದ್ಧನ ತತ್ವಗಳನ್ನು ಬಸವಣ್ಣ ವಚನ ರೂಪದಲ್ಲಿ ನೀಡಿದರೆ, ಡಾ.ಅಂಬೇಡ್ಕರ್​ ಸಂವಿಧಾನದ ಮೂಲಕ ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ ಒದಗಿಸಿ ಶೋಷಿತರು ಮತ್ತು ಮಹಿಳೆಯರಿಗೆ ಗೌರವ ತಂದುಕೊಟ್ಟರು ಎಂದು ಸ್ಮರಿಸಿದರು.
ಸಂಸ್ಥೆ ಅಧ್ಯಕ್ಷ ಡಾ.ಪರಶುರಾಮ ಪಿ. ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, 14 ವರ್ಷಗಳಿಂದ ಯುವ ಕಲಾವಿದರನ್ನು ಬೆಳೆಸಲು ದೃಶ್ಯ ಬೆಳಕು ಸಾಂಸತಿಕ ಸಂಸ್ಥೆ ಕಲಾ ಶಿಬಿರ ನಡೆಸುತ್ತಿದೆ. ಪ್ರೇಕ್ಷಕರನ್ನು ಕಲಾವಿದರತ್ತ ಸೆಳೆಯಲು ಶಿಬಿರ ಸಾಯಾಗಿದೆ ಎಂದು ತಿಳಿಸಿದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಬಸವರಾಜ ಜಾನೆ ಅವರು ಬುದ್ಧ, ಬಸವ ಮತ್ತು ಡಾ.ಬಿ.ಆರ್​.ಅಂಬೇಡ್ಕರ್​ ಚಿತ್ರ ಬಿಡಿಸುವ ಮೂಲಕ ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದರು. ಶಿಬಿರ ನಿರ್ದೇಶಕ ವಿ.ಬಿ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.
ಕಲಬುರಗಿ ದೂರದರ್ಶನ ಕೇಂದ್ರದ ವಿಶ್ರಾಂತ ನಿರ್ದೇಶಕ ಎಂ.ಬಿ. ಪಾಟೀಲ್​, ಉಪನ್ಯಾಸಕ ಡಾ.ಕೆ.ಎಂ. ಕುಮಾರಸ್ವಾಮಿ, ಅಂಬಾರಾಯ ಚಿನಮಳ್ಳಿ, ರಾಮಗಿರಿ ಪೊಲೀಸ್​ ಪಾಟೀಲ್​, ಸಿದ್ದು ಮರಗೋಳ, ಗುರುಲಿಂಗ ಅರಳಿ, ಅಣ್ಣಾರಾಯ ಹಂಗರಗಿ, ಚಿದಾನಂದ ಸುತಾರ, ರವಿಚಂದ್ರ ಬಿರಾದಾರ, ಉದಯಕುಮಾರ ಬಗಲಿ, ಶೈಲಜಾ ಬಿರಾದಾರ, ದಾನಯ್ಯ ಚೌಕಿಮಠ, ಕುಪೇಂದ್ರ ಇತರರಿದ್ದರು. ಮಲ್ಲಿಕಾರ್ಜುನ ಕೊರಳ್ಳಿ ವಂದಿಸಿದರು. ಸೂರ್ಯಕಾಂತ ನಂದೂರ ನಿರೂಪಣೆ ಮಾಡಿದರು.
"

ಡಾ.ಅಂಬೇಡ್ಕರ್​ ಅವರ ಬುದ್ಧ ಮತ್ತು ಧಮ್ಮ ಕೃತಿಯಲ್ಲಿ ರೋಹಿಣಿ ನದಿ ನೀರು ಹಂಚಿಕೆ ವಿವಾದ, ಅಂಗುಲಿಮಾಲನ ಮನಪರಿವರ್ತನೆ, ಬುದ್ಧ ತಪಸ್ಸಿಗೆ ಹೋಗಲು ಕಾರಣದ ಬಗ್ಗೆ ವಿವರಗಳಿವೆ. ಸ್ವತಃ ಡಾ.ಅಂಬೇಡ್ಕರ್​ ಚಿತ್ರಕಲಾವಿದರಾಗಿ ಕಣ್ಣು ತೆರೆದ ಬುದ್ಧನ ಚಿತ್ರ ಬಿಡಿಸಿದ್ದಾರೆ. ಆ ಚಿತ್ರ ಜಗತ್ತಿಗೆ ಬೆಳಕು ನೀಡುವ ಸಂಕೇತ.

— > ಡಾ.ಸೂರ್ಯಕಾಂತ ಸುಜ್ಯಾತ್​ ಸಂದರ್ಶಕ ಪ್ರಾಧ್ಯಾಪಕ, ಗುಲ್ಬರ್ಗ ವಿವಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net