ಬುದ್ಧ ಬಸವ ಅಂಬೇಡ್ಕರ್​ ಜ್ಞಾನ ಸೂರ್ಯರು

ಶಹಾಪುರ ತಾಲೂಕಿನ ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದಲ್ಲಿ ಭಾನುವಾರ ಬುದ್ದ, ಬಸವ, ಅಂಬೇಡ್ಕರ್​ ಜಯಂತಿ ನಿಮಿತ್ತ ಹಮ್ಮಿಕೊಂಡ ವಿಭಾಗ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮವನ್ನು ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಉದ್ಘಾಟಿಸಿದರು. ಅಮರೇಶ ಯತಗಲ್​,  ಸಾಹಿತಿ ಸಿದ್ರಾಮ ಹೊನ್ಕಲ್​, ಶರಣು ಗದ್ದುಗೆ, ರವೀಂದ್ರ ಹೊಸಮನಿ,ಅಂಬ್ಲಯ್ಯ ಸೈದಾಪುರ, ಅಯ್ಯಣ್ಣ ಕನ್ಯಕೊಳ್ಳುರ, ಆರ್​.ಚೆನ್ನಬಸ್ಸು ವನದುರ್ಗ, ಗಿರಿಯಪ್ಪಗೌಡ ಬಾಣತಿಹಾಳ,ಚೆನ್ನಪ್ಪ ಆನೇಗುಂದಿ, ಪ್ರಕಾಶ ದೊರೆ, ಸಿದ್ದಪ್ಪ ಹೊಟ್ಟಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಹಂಪಿ ವಿವಿ ನಿರ್ದೇಶಕ ಅಮರೇಶ ಹೇಳಿಕೆ
  • ಭೀ.ಗುಡಿಯಲ್ಲಿ ವಿಭಾಗಮಟ್ಟದ ಕವಿಗೋಷ್ಠಿ
ಶಹಾಪುರ: ಗೌತಮ ಬುದ್ಧ ಸಮಾಜದಲ್ಲಿ ಶಾಂತಿ, ನೆಮ್ಮದಿ ಬಿತ್ತುವ ಕನಸ್ಸು ಕಂಡಿದ್ದರು. ಬಸವಣ್ಣನವರು ಕಲ್ಯಾಣ ರಾಜ್ಯ ನಿರ್ಮಾಣದ ಗುರಿ ಹೊಂದಿದ್ದರು. ಅದೇ ರೀತಿ ಡಾ.ಬಿ.ಆರ್​.ಅಂಬೇಡ್ಕರ್​ ಅವರು ಪ್ರಜಾ ರಾಜ್ಯ ಕಟ್ಟುವ ಕನಸ್ಸು ಕಂಡಿದ್ದರು ಹೀಗಾಗಿ ಈ ಮೂವರು ಜ್ಞಾನ ಸೂರ್ಯ ಆಗಿದ್ದರು ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ನಿರ್ದೇಶಕ ಅಮರೇಶ ಯತಗಲ್​ ಹೇಳಿದರು.
ತಾಲೂಕಿನ ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದಲ್ಲಿ ಭಾನುವಾರ ಬುದ್ದ, ಬಸವ, ಅಂಬೇಡ್ಕರ ಜಯಂತ್ಯುತ್ಸವ ನಿಮಿತ್ತ ವಿಭಾಗ ಮಟ್ಟದ ಕವಿಗೋಷ್ಠಿ ಹಾಗೂ ಕೋಲ್ಮಿಂಚಿನ ಬೆಳಕು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು, ಈ ಮೂವರು ಕಂಡಿದ್ದ ಕನಸು ಸಮಾಜದ ಅಭಿವೃದ್ಧಿಯಾಗಿದ್ದರ ಫಲವಾಗಿ ಈಗ ನನಸಾಗಿವೆ ಎಂದರು.
ಮೇರು ಸಾಧಕರನ್ನು ಜಾತಿಗೆ ಸಿಮೀತಗೊಳಿಸಬಾರದು. ಜಾತಿ ಮುಖ್ಯವಲ್ಲ ಅವರ ತತ್ವ, ಸಿದ್ಧಾಂತ, ಬದುಕು ಮುಖ್ಯ. ಅಂಬೇಡ್ಕರ್​ ಅವರು ನಮ್ಮ ಹೋರಾಟ ದೀಪ. ಮನುಕುಲದ ಅರಿವು ವಿಸ್ತರಿಸುವ ಬೆಳಕಿನ ಜ್ಯೋತಿ ಈ ಮೂವರು ಆಗಿದ್ದಾರೆ ಎಂದರು.
ನಗರದ ಬುದ್ಧ ವಿಹಾರದ ನಾಗರತ್ನ ಭಂತೆ, ಸಾಹಿತಿ ಸಿದ್ರಾಮ ಹೊನ್ಕಲ್​, ಶರಣು ಗದ್ದುಗೆ, ರವೀಂದ್ರ ಹೊಸಮನಿ, ಅಂಬ್ಲಯ್ಯ ಸೈದಾಪುರ, ಅಯ್ಯಣ್ಣ ಕನ್ಯಕೊಳ್ಳುರ, ಆರ್​.ಚೆನ್ನಬಸ್ಸು ವನದುರ್ಗ, ಗಿರಿಯಪ್ಪಗೌಡ ಬಾಣತಿಹಾಳ, ಚೆನ್ನಪ್ಪ ಆನೇಗುಂದಿ, ಪ್ರಕಾಶ ದೊರೆ, ನೀಲಕಂಠ ಬಡಿಗೇರ, ಮಲ್ಲಿಕಾರ್ಜುನ ಪೂಜಾರಿ, ಶ್ರೀಶೈಲ್​ ಹೊಸಮನಿ, ಸಿದ್ದಪ್ಪ ಹೊಟ್ಟಿ, ಯಲ್ಲಪ್ಪ ನರಿ, ರಾಜು ಅಣಬಿ, ಭೀಮರಾಯ ತಳವಾರ, ಬಾಬುರಾವ ಭೂತಾಳೆ ಭಾಗವಹಿಸಿದ್ದರು.
ಈ ವೇಳೆ ಹಿರಿಯ ಸಾಹಿತಿ ಶರಣಪ್ಪ ಕರಡಿ, ದಿ.ಬುದ್ದೂಷ ದೇವೆಂದ್ರ ಹೆಗಡೆ, ಪಾರ್ವತಿ ಬುದನೂರ ಅವರಿಗೆ ಬುದ್ದ, ಬಸವ, ಅಂಬೇಡ್ಕರ್​ ಪ್ರಶಸ್ತಿ ನೀಡಿ ಗೌರವಿಸಲಾಯಿತು.
"

ಮದ್ಯಪಾನ ಸೇವನೆಯಿಂದ ಯುವಕರು ಬಲಿಯಾಗುತ್ತಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್​ ಚಿಂತನೆಗಳು ಯುವಕರಿಗೆ ದಾರಿ ದೀಪವಾಗಲಿ. ಇಂತಹ ಸಾಹಿತ್ಯದ ಕಾರ್ಯಕ್ರಮಗಳಿಗೆ ತಮ್ಮ ಮಕ್ಕಳನ್ನು ಕರೆತರಬೇಕು.

— > ಶರಣಪ್ಪ ಸಲಾದಪುರ ಅಧ್ಯಕ್ಷರು, ಮದ್ಯಪಾನ ಸಂಯಮ ಮಂಡಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net