ಅನ್ಯಾಯ ಮೆಟ್ಟಿ ಸಾಮಾಜಿಕ ಬದಲಾವಣೆ ತನ್ನಿ

ಕಲಬುರಗಿ ಕನ್ನಡ ಭವನದಲ್ಲಿ ಎಐಡಿವೈಓ ಗುರುವಾರ ಆಯೋಜಿಸಿದ್ದ ಉದ್ಯೋಗಕ್ಕಾಗಿ ಯುವಜನರ ಸಂಕಲ್ಪ ಸಮಾವೇಶದಲ್ಲಿ ಸಂಟನೆ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಮಾತನಾಡಿದರು. ಘಾಳೇಶ್​.ಎಂ, ರಮೇಶ ದೇವಕರ್​, ಪ್ರಶಾಂತ ಸಂಗೋಳಗಿ, ಸಚಿನ್​ ಪವಾರ್​, ಪ್ರಶಾಂತ ಹಾದಿಮನಿ, ಜಗನ್ನಾಥ ಎಸ್​.ಹೆಚ್​ ಇದ್ದರು.
ಕಲಬುರಗಿ ಕನ್ನಡ ಭವನದಲ್ಲಿ ಎಐಡಿವೈಓ ಗುರುವಾರ ಆಯೋಜಿಸಿದ್ದ ಉದ್ಯೋಗಕ್ಕಾಗಿ ಯುವಜನರ ಸಂಕಲ್ಪ ಸಮಾವೇಶದಲ್ಲಿ ಸಂಟನೆ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಮಾತನಾಡಿದರು. ಘಾಳೇಶ್​.ಎಂ, ರಮೇಶ ದೇವಕರ್​, ಪ್ರಶಾಂತ ಸಂಗೋಳಗಿ, ಸಚಿನ್​ ಪವಾರ್​, ಪ್ರಶಾಂತ ಹಾದಿಮನಿ, ಜಗನ್ನಾಥ ಎಸ್​.ಹೆಚ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಐಡಿವೈಓ ಕಾರ್ಯದರ್ಶಿ ಬಾಗೇವಾಡಿ ಹೇಳಿಕೆ
  • ಉದ್ಯೋಗಕ್ಕಾಗಿ ಯುವಜನರ ಸಂಕಲ್ಪ ಸಮಾವೇಶ
ಕಲಬುರಗಿ: ಅನ್ಯಾಯ, ಅಸತ್ಯದ ವಿರುದ್ಧ ದನಿ ಎತ್ತಿ ಸಾಮಾಜಿಕ ಬದಲಾವಣೆ ತರಲು ಯುವಕರು ಶ್ರಮಿಸಬೇಕು ಎಂದು ಎಐಡಿವೈಓ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಆಲ್​ ಇಂಡಿಯಾ ಡೆಮೊಕ್ರೆಟಿಕ್​ ಯೂತ್​ ಆರ್ಗನೈಸೇಶನ್​ (ಎಐಡಿವೈಓ) ಹಾಗೂ ಉದ್ಯೋಗಾಕಾಂಗಳ ಹೋರಾಟ ಸಮಿತಿ ಜಂಟಿಯಾಗಿ ಗುರುವಾರ ಹಮ್ಮಿಕೊಂಡಿದ್ದ ಯುವಜನ ಸಂಕಲ್ಪ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಸರ್ಕಾರ 50,000 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ಭರ್ತಿ ಮಾಡಬೇಕು. ಕಳೆದ ಆರು ತಿಂಗಳಿಂದ ನಿರಂತರವಾಗಿ ಖಾಲಿ ಹುದ್ದೆ ಭರ್ತಿಗೆ ಹೋರಾಟ ಮಾಡಲಾಗುತ್ತಿದೆ. ಡಿಸೆಂಬರ್​ನಲ್ಲಿ ಧಾರವಾಡದಲ್ಲಿಯೂ ಹೋರಾಟ ನಡೆದಿತ್ತು. ಹೋರಾಟ ಸದೆಬಡಿಯಲು ಸರ್ಕಾರ ಪೊಲೀಸ್​ ಮೂಲಕ ನಮ್ಮನ್ನು ಬಂಧಿಸಿತ್ತು. ಆದರೂ ಹೋರಾಟ ನಿರಂತರ ನಡೆಯುತ್ತಿದೆ ಎಂದು ಹೇಳಿದರು.
ಹುದ್ದೆ ಭರ್ತಿಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ತಕ್ಷಣ ಅಧಿಸೂಚನೆ ಹೊರಡಿಸಬೇಕು, ಅತಿ ಕಡಿಮೆ ಪರೀಾ ಶುಲ್ಕ ವಿಧಿಸಬೇಕು, ಪರೀೆ ಬರೆಯುವ ಉದ್ಯೋಗ ಆಕಾಂಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಶೃಂಗೇರಿ ಕೆರಿಯರ್​ ಅಕಾಡೆಮಿ ಉಪನ್ಯಾಸಕ ಘಾಳೇಶ್​.ಎಂ ಮಾತನಾಡಿ, ಬಡ ವಿದ್ಯಾರ್ಥಿಗಳು ಸಾಕಷ್ಟು ಕಷ್ಟಪಟ್ಟು ಕೋಚಿಂಗ್​ ಸೆಂಟರ್​ನಲ್ಲಿ ಓದುತ್ತಿದ್ದು ಸರ್ಕಾರ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಉದ್ಯೋಗಕ್ಕಾಗಿ ಅನುಕೂಲ ಮಾಡಿಕೊಡಬೇಕು ಎಂದರು.
ಜಿಲ್ಲಾ ಸಮಿತಿ ಸದಸ್ಯ ರಮೇಶ ದೇವಕರ್​ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕರಾದ ಪ್ರಶಾಂತ ಸಂಗೋಳಗಿ, ಸಚಿನ್​ ಪವಾರ್​, ಪ್ರಶಾಂತ ಹಾದಿಮನಿ ಇದ್ದರು. ಎಐಡಿವೈಓ ಸಂಟನೆಯ ಜಿಲ್ಲಾಧ್ಯ ಜಗನ್ನಾಥ ಎಸ್​.ಹೆಚ್​ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಉಪಾಧ್ಯ ಸಿದ್ದು ಚೌದ್ರಿ, ಜಿಲ್ಲಾ ಕಾರ್ಯದರ್ಶಿ ಈಶ್ವರ್​ ಕೆ, ಸದಸ್ಯರಾದ ಗೌತಮ್​ ಪರತೂರಕರ್​, ರು ಪವಾರ್​, ದೇವರಾಜ.ಎಂ, ಸತೀಶ ಪಟ್ಟಣ, ಕಿರಣ್​ ಮಾನೆ ಸೇರಿ ನೂರಾರು ಉದ್ಯೋಗ ಆಕಾಂಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಉದ್ಯೋಗ ಆಕಾಂಗಳ ಹೋರಾಟ ಸಮಿತಿ ರಚಿಸಲಾಯಿತು. ರಮೇಶ ದೇವಕರ್​ (ಸಂಚಾಲಕ) ಸಚಿನ್​ ಪವಾರ್​ (ಸಹ ಸಂಚಾಲಕ), ಪ್ರಶಾಂತ್​ ಹಾದಿಮನಿ, ಸುರೇಶ ಮಠ, ಸಚಿನ್​ ಸಾಗರ್​, ಪ್ರಭಾಕರ್​ ಚಿಂಚೋಳಿ, ತೇಜಸ್​.ಆರ್​. ಇಬ್ರಾಹಿಂಪುರ್​, ಪ್ರದಿಪಕುಮಾರ, ಅನ್ನು ಸಾಹುಕಾರ, ಸಮರ್ಥ ಪುಲಾರಿ (ಸದಸ್ಯರು) ಯವರನ್ನು ನೇಮಕ ಮಾಡಲಾಯಿತು.
"

ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗ ಬೆಳೆಯಲು ಈವರೆಗೆ ಆಳಿದ ಬಿಜೆಪಿ, ಕಾಂಗ್ರೆಸ್​ ಸರ್ಕಾರದ ನೀತಿಗಳೆ ಕಾರಣ. ವರ್ಷಕ್ಕೆ ಎರಡು ಕೋಟಿ ಹುದ್ದೆ ಭರ್ತಿ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ಏನೂ ಮಾಡಲಿಲ್ಲ. ರಾಜ್ಯ ಸರ್ಕಾರ ಹುದ್ದೆ ಭರ್ತಿಗೆ ನಿರಾಸಕ್ತಿ ತೋರುತ್ತಿರುವುದರಿಂದ ಯುವಜನರು ಮತ್ತಷ್ಟೂ ಆಕ್ರೋಶಗೊಂಡಿದ್ದಾರೆ.

ಸಿದ್ದಲಿಂಗ ಬಾಗೇವಾಡಿ,

ರಾಜ್ಯ ಕಾರ್ಯದರ್ಶಿ, ಎಐಡಿವೈಓ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net