ಬ್ರಿಲಿಯನ್ಸ್ ಡೈಮಂಡ್ ಜುವೆಲ್ಲರಿ ಶೋ ಆರಂಭ -Jewelry Show

ಜೋಯಾಲುಕ್ಕಾಸ್ ಜುವೆಲ್ಲರಿ
ಜೋಯಾಲುಕ್ಕಾಸ್ ಜುವೆಲ್ಲರಿ
Published on
ಬೆಂಗಳೂರು: ಜಗತ್ತಿನ ಅಚ್ಚುಮೆಚ್ಚಿನ ಜುವೆಲ್ಲರಿ ಜೋಯಾಲುಕ್ಕಾಸ್, ಶುಕ್ರವಾರದಿಂದ ಎಂ.ಜಿ.ರಸ್ತೆಯ ಮಳಿಗೆಯಲ್ಲಿ ‘ಬ್ರಿಲಿಯನ್ಸ್ ವಜ್ರಾಭರಣ ಜುವೆಲ್ಲರಿ ಶೋ’ ಆಯೋಜಿಸಿದ್ದು, ಫೆ.1ರವರೆಗೆ ಇದು ಮುಂದುವರಿಯಲಿದೆ.
ಇದರ ನಿಮಿತ್ತ 21 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ವಜ್ರಾಭರಣ ಖರೀದಿಸಿದರೆ ಗ್ರಾಹಕರಿಗೆ ಉಚಿತವಾಗಿ ಚಿನ್ನದ ನಾಣ್ಯ ಸಿಗಲಿದೆ.
ಜೋಯಾಲುಕ್ಕಾಸ್ ಸಮೂಹದ ಅಧ್ಯಕ್ಷ ಮತ್ತು ಎಂಡಿ ಡಾ. ಜೋಯ್ ಆಲುಕ್ಕಾಸ್ ಮಾತನಾಡಿ, ಆಭರಣ ಪ್ರಿಯರು ಮತ್ತು ಗ್ರಾಹಕರು ಬೆರಗುಗೊಳಿಸುವ ವಜ್ರಗಳ ಜಗತ್ತಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಆಹ್ವಾನಿಸಲಾಗಿದೆ. ಪ್ರತಿ ಆಭರಣವೂ ಐಷಾರಾಮಿ, ಭಾವನೆ, ಕಾಲಾತೀತ ಸೌಂದರ್ಯ ಹೊಂದಿದೆ. ಬ್ರಿಲಿಯನ್ಸ್ ಡೈಮಂಡ್ ಜುವೆಲ್ಲರಿ ಶೋ, ನಮ್ಮ ಶ್ರೇಷ್ಠತೆ ಬದ್ಧತೆ, ಸೊಬಗು ಮತ್ತು ಪ್ರತ್ಯೇಕತೆಯೊಂದಿಗೆ ಪ್ರತಿಧ್ವನಿಸುವ ಆಭರಣ ರೂಪಿಸುವ ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಎಂದಿಗೂ ರಾಜಧಾನಿ ಬೆಂಗಳೂರು ನಮಗೆ ವಿಶೇಷವಾಗಿದೆ. ನಮ್ಮ ಗ್ರಾಹಕರಿಗೆ ಈ ವಿಶೇಷ ಸಂಗ್ರಹವನ್ನು ಪ್ರಸ್ತುತಪಡಿಸಲು ಅವಕಾಶ ಕಲ್ಪಿಸಿದ್ದೇವೆ ಎಂದರು.
ವಧುವಿಗಾಗಿ ವ್ಯಾಪಕ ಶ್ರೇಣಿಯ ವಜ್ರಾಭರಣಗಳಿವೆ. ಈ ಪ್ರದರ್ಶನವು ಕಾಲಾತೀತ ಕರಕುಶಲತೆ ಮತ್ತು ಆಧುನಿಕ ಸಂವೇದನೆ ಒಟ್ಟುಗೂಡಿಸುತ್ತದೆ. ಪ್ರತಿಯೊಂದು ಸೃಷ್ಟಿಯು ಅಸಾಧಾರಣ ವಿವರ ಮತ್ತು ವಿನ್ಯಾಸ ಶ್ರೇಷ್ಠತೆ ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net