ಜನಗಣತಿ ಕಾರ‌್ಯಾಚರಣೆಗಳನ್ನು 2027ರ ಮಾರ್ಚ್ 31ರವರೆಗೆ ನಡೆಸಲು ರಾಜ್ಯ, ಜಿಲ್ಲೆ, ತಾಲೂಕು ಮತ್ತು ಬ್ಲಾಕ್ ಹಂತದ ಜನಗಣತಿ ಅಧಿಕಾರಿ, ಸಿಬ್ಬಂದಿಯನ್ನು ಈಗಾಗಲೇ ನೇಮಿಸಿ ತರಬೇತಿ ನೀಡಲಾಗಿದೆ. ಜನಗಣತಿ ಕಾಯ್ದೆ 1948 ಮತ್ತು ಜನಗಣತಿ ನಿಯಮ 1990ರ ಅನ್ವಯ ಶಾಸನಬದ್ಧ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿರುತ್ತದೆ. ಆದ್ದರಿಂದ ವರ್ಗಾವಣೆ ಮಾಡದಂತೆ ಕೇಂದ್ರ ಗೃಹ ಕಾರ್ಯದರ್ಶಿ ಪತ್ರ ಬರೆದು ಕೋರಿದ್ದಾರೆ.