ಆಲ್ಕೋಹಾಲ್ ಪ್ರಮಾಣ ಆಧಾರಿತ ತೆರಿಗೆ ಪದ್ಧತಿಯಿಂದ ಬ್ರಾಂಡಿ, ವಿಸ್ಕಿ ದರ ಇಳಿಕೆ- Brandy, whiskey

ಪ್ರೀಮಿಯಂ ಮದ್ಯದ ದರ ಶೇ.20 ಇಳಿಕೆ
ಪ್ರೀಮಿಯಂ ಮದ್ಯದ ದರ ಶೇ.20 ಇಳಿಕೆ
Published on
ಬೆಂಗಳೂರು: ಆಲ್ಕೋಹಾಲ್ ಪ್ರಮಾಣ ಆಧಾರಿತ(ಎಐಬಿ) ತೆರಿಗೆ ಪದ್ಧತಿಯಿಂದ ಪ್ರೀಮಿಯಂ ಮದ್ಯದ ದರ ಶೇ.20 ಇಳಿಕೆಯಾಗಿದೆ. ಹೊಸ ತೆರಿಗೆ ವ್ಯವಸ್ಥೆಯಿಂದ ಅಬಕಾರಿ ಸುಧಾರಣೆ ಮತ್ತು ಮದ್ಯದ ಮೇಲಿನ ತೆರಿಗೆ ಕಡಿಮೆಯಾಗಿದೆ ಇಂಟರ್‌ನ್ಯಾಷನಲ್ ಸ್ಪಿರಿಟ್ಸ್ ಅಂಡ್ ವೈನ್ಸ್ ಅಸೋಸಿಯೇಷನ್ ಆಫ್​​ ಇಂಡಿಯಾ (ಐಎಸ್‌ಡಬ್ಲ್ಯೂಎಐ) ಸ್ವಾಗತಿಸಿದೆ.
ರಾಜ್ಯದ ಅಬಕಾರಿ ಚೌಕಟ್ಟನ್ನು ಆಧುನೀಕರಿಸುವ ಮತ್ತು ಸುಲಭಗೊಳಿಸುವ ನಿಟ್ಟಿನಲ್ಲಿ ಇಟ್ಟ ಅತ್ಯಂತ ಪ್ರಗತಿಪರ ಹೆಜ್ಜೆಯಾಗಿದೆ. ದೀರ್ಘಾವಧಿಯ ಆದಾಯ ವೃದ್ಧಿ ಹಾಗೂ ಪಾರದರ್ಶಕ ನಿಯಂತ್ರಣ ವಾತಾವರಣ ನಿರ್ಮಿಸಲು ಸಹಕಾರಿಯಾಗಲಿದೆ. ಉತ್ತಮ ಗುಣಮಟ್ಟದ ಪ್ರೀಮಿಯಂ ಉತ್ಪನ್ನಗಳ ಬಳಕೆಯು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಹಾಗೂ ಸರ್ಕಾರದ ಕೋಶೀಯ ಆದಾಯದ ದೃಷ್ಟಿಯಿಂದ ಧನಾತ್ಮಕವಾಗಿದೆ ಎಂದು ಐಎಸ್‌ಡಬ್ಲ್ಯೂಎಐ ಹೇಳಿದೆ.
ಪ್ರಸ್ತುತ ಜಾರಿಗೆ ತರಲಾಗಿರುವ ತೆರಿಗೆ ತರ್ಕಬದ್ಧಗೊಳಿಸುವಿಕೆ ಮತ್ತು ಮದ್ಯದ ದರ ಸ್ಲ್ಯಾಬ್‌ಗಳನ್ನು 16ರಿಂದ 8ಕ್ಕೆ ಇಳಿಸಿರುವುದು ಸೂಕ್ತ ನಿರ್ಧಾರವಾಗಿದೆ. ಇದರಿಂದಾಗಿ ಪ್ರೀಮಿಯಂ ಮದ್ಯದ ಎಂಆರ್‌ಪಿ ದರದಲ್ಲಿ ಶೇ.10ರಿಂದ ಶೇ.20 ಕಡಿತ ಉಂಟಾಗಲಿದೆ. ನೆರೆಹೊರೆಯ ರಾಜ್ಯಗಳ ದರಕ್ಕೆ ಹತ್ತಿರವಾಗಲಿದೆ ಎಂದು ಐಎಸ್‌ಡಬ್ಲ್ಯೂಎಐ ವ್ಯಾಖ್ಯಾನಿಸಿದೆ.
ಮುಂದಿನ ದಿನಗಳಲ್ಲಿ ನೆರೆರಾಜ್ಯಗಳೊಂದಿಗಿನ ಮದ್ಯದ ಬೆಲೆ ವ್ಯತ್ಯಾಸವು ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಈ ತೆರಿಗೆ ಪರಿಷ್ಕರಣೆಯಿಂದಾಗಿ ಪ್ರೀಮಿಯಂ ಮತ್ತು ಮಿಡ್ ಪ್ರೀಮಿಯಂ ವಿಭಾಗದ ಗ್ರಾಹಕರಿಗೆ ನೇರ ದರ ಕಡಿತದ ಲಾಭ ಸಿಗಲಿದೆ. ಬೆಲೆ ನಿಗದಿಯಲ್ಲಿ ಸರ್ಕಾರ ಮುಕ್ತ ಸ್ವಾತಂತ್ರ್ಯ ನೀಡಿರುವುದನ್ನು ಐಎಸ್‌ಡಬ್ಲ್ಯೂಎಐ ಮುಕ್ತಕಂಠದಿಂದ ಶ್ಲಾಘಿಸಿದೆ.
ಪ್ರೀಮಿಯಂ ಮದ್ಯದ ದರ ಇಳಿಕೆ ವಿವರ:
* ಮೆಕ್‌ಡೊವೆಲ್ಸ್ ನಂ.1 ಬ್ರಾಂಡಿ (180 ಎಂಎಲ್): 185 ರೂ.ನಿಂದ 175ಕ್ಕೆ ಇಳಿಕೆ
* ಮೆಕ್‌ಡೊವೆಲ್ಸ್ ನಂ.1 ವಿಸ್ಕಿ (180 ಎಂಎಲ್): 235 ರೂ.ನಿಂದ 215ಕ್ಕೆ ಇಳಿಕೆ
* ಓಕ್ಸ್ಮಿತ್‌ಗೋಲ್ಡ್ (180 ಎಂಎಲ್): 435 ರೂ.ನಿಂದ 345ಕ್ಕೆ ಇಳಿಕೆ
* ಸಿಗ್ನೇಚರ್ ವಿಸ್ಕಿ (180 ಎಂಎಲ್): 444 ರೂ.ನಿಂದ 350ಕ್ಕೆ ಇಳಿಕೆ
* ಟೀಚರ್ಸ್ 50 (180 ಎಂಎಲ್): 835 ರೂ.ನಿಂದ 710ಕ್ಕೆ ಇಳಿಕೆ
* ಓಕ್ಸ್ಮಿತ್ ಗೋಲ್ಡ್ (750 ಎಂಎಲ್): 1,810 ರೂ.ನಿಂದ 1,420ಕ್ಕೆ ಇಳಿಕೆ
* ಟೀಚರ್ಸ್ 50 (750 ಎಂಎಲ್): 3,345 ರೂ.ನಿಂದ 2,820ಕ್ಕೆ ಇಳಿಕೆ
* ಜಾನಿ ವಾಕರ್ ಬ್ಲ್ಯಾಕ್ ಲೇಬಲ್ (750 ಎಂಎಲ್): 5,190 ರಿಂದ ರೂ.ನಿಂದ 4,005ಕ್ಕೆ ಇಳಿಕೆ
* ಜಾನಿ ವಾಕರ್ ಬ್ಲೂ ಲೇಬಲ್ (750 ಎಂಎಲ್): 17,390 ರೂ.ನಿಂದ 15,500ಕ್ಕೆಇಳಿಕೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net