

ಪ್ರಮುಖ ಮುಖ್ಯಾಂಶಗಳು
ಸರ್ವೇಯರ್ ಗಡಿ ಗುರುತು ನಿಗದಿಪಡಿಸಿದಂತೆ ಯಾವ ಸ್ಥಳ ಎಲ್ಲಿಗೆ ಬರುತ್ತದೆಯೋ ಅಲ್ಲಿಗೆ ಸೇರುತ್ತದೆ. ಅದನ್ನು ನಾನು ನಿರ್ಧಾರ ಮಾಡಲು ಬರಲ್ಲ. ಸದ್ಯದ ಪ್ರಕಾರ ಅವು ಅರಕೇರಾ ಸೀಮಾಂತರಕ್ಕೆ ಬರುತ್ತಿವೆ. ಇಂದಿನ ವಿದ್ಯಮಾನದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.
ನಮ್ಮ ಅಜ್ಜ, ಅಪ್ಪ ಮತ್ತು ಈಗ ನಾವು ಇದೇ ಪಸ್ಪುಲ್ ತಾಂಡಾ ನಿವಾಸಿಗಳು. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನಮ್ಮಲ್ಲಿವೆ. ಈಗ ನೋಡಿದರೆ 4 ಮನೆ, ಒಂದು ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರ ಅರಕೇರಾ ಸೀಮಾಂತರಕ್ಕೆ ಬರುತ್ತದೆ ಎಂದು ಹೇಳಿ ನಮ್ಮನ್ನು ಇಲ್ಲಿಂದ ಖಾಲಿ ಮಾಡಿಸುವ ತಂತ್ರ ನಡೆದಿದೆ. ತಹಸೀಲ್ದಾರರ ಜತೆ ಮಾತನಾಡಿದರೂ ಕೇಳುತ್ತಿಲ್ಲ. ಇದಕ್ಕೆ ನಾವ್ಯಾರೂ ಒಪ್ಪುವ ಮಾತೇ ಇಲ್ಲ. ಕಾರಣ ಕೂಡಲೇ ಸಂಬಂಧಿತ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.