

ಕಲಬುರಗಿ: ಪುಸ್ತಕ ಓದುವುದರಿಂದ ಮನುಷ್ಯನ ಜೀವನ ಪರಿವರ್ತನೆಯಾಗುತ್ತದೆ. ಸರಳ ಜೀವನ, ಉನ್ನತ ಯೋಚನೆಗಳಿಗೆ ಪುಸ್ತಕಗಳು ಪ್ರೇರಣೆಯಾಗುತ್ತವೆ ಎಂದು ತುಮಕೂರಿನ ಸಿದ್ಧಗಂಗಾ ಮಠದ ಕಿರಿಯ ಪೀಠಾಧಿಪತಿ ಶ್ರೀ ಶಿವಸಿದ್ಧೇಶ್ವರ ಸ್ವಾಮಿಗಳು ಹೇಳಿದರು. ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆ ಬುಕ್ಮಾಲ್ಗೆ ಶುಕ್ರವಾರ ಭೇಟಿ ನೀಡಿ ಗೌರವ ಸ್ವೀಕರಿಸಿ ಮಾತನಾಡಿ, ಬೇರೆಯವರಿಗೆ ಯಾವುದೇ ಉಡುಗೊರೆ ನೀಡದೆ ಪುಸ್ತಕಗಳನ್ನು ನೀಡಿ, ಪುಸ್ತಕಗಳಿಂದ ಅವರಲ್ಲಿಯೂ ಾನ ಬೆಳೆಯುತ್ತದೆ. ನಿಮಗೆ ಒಂದು ಒಳ್ಳೆಯ ಕೆಲಸ ಮಾಡಿದ ಅನುಭವವಾಗುತ್ತದೆ ಎಂದರು. ಡಾ.ಬಸವರಾಜ ಕೊನೆಕ್ ಮಾತನಾಡಿ, ಪುಸ್ತಕಗಳು ಶ್ರೀಮಂತರು ಮತ್ತು ವಿದ್ಯಾವಂತರಿಗೆ ಮಾತ್ರ ದೊರೆಯುವಂತಾಗದೆ, ಎಲ್ಲರಿಗೂ ಲಭ್ಯವಾಗಬೇಕು ಎನ್ನುವ ಉದ್ದೇಶದಿಂದ ಪುಸ್ತಕ ಮಾಲ್ ಸ್ಥಾಪಿಸಲಾಗಿದೆ. ಜನಪ್ರಿಯ, ಸಾಹಿತ್ಯ, ವಿಾನ ಮಾಲಿಕೆ ಅಂತಹ ಪುಸ್ತಕ ಪ್ರಕಟಿಸಿ ಓದುಗರನ್ನು ಸೃಷ್ಟಿಸುವ ಕೆಲಸ ಕಲ್ಯಾಣ ಕರ್ನಾಟಕದಲ್ಲಿ ಮಾಡಲಾಗುತ್ತಿದೆ ಎಂದರು. ಸಿದ್ದಲಿಂಗ ಕೊನೆಕ್, ಶರಣು ಕೊನೆಕ್, ಪ್ರೀತಿ ಕೊನೆಕ್, ದೇವೀಂದ್ರಪ್ಪ ಆವಂಟಿ ಇತರರಿದ್ದರು.