ಜೀವ ಉಳಿವಿಗೆ ರಕ್ತದಾನ ಅವಶ್ಯಕ

ಹುಮನಾಬಾದ್​ನ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ರಕ್ತದಾನ ಶಿಬಿರವನ್ನು ಭಾಲ್ಕಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ ಉದ್ಘಾಟಿಸಿದರು. ಬಿಕೆ ಮಂದಾಕಿನಿ, ಡಾ.ಶಿವಮೂರ್ತಿ, ಬಿಕೆ ಜ್ಯೋತಿ, ರಾಜು ಬತಲಿ, ಶಿವಾಂತ ಸ್ವಾಮಿ ಇತರರಿದ್ದರು.
ಹುಮನಾಬಾದ್​ನ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ರಕ್ತದಾನ ಶಿಬಿರವನ್ನು ಭಾಲ್ಕಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ ಉದ್ಘಾಟಿಸಿದರು. ಬಿಕೆ ಮಂದಾಕಿನಿ, ಡಾ.ಶಿವಮೂರ್ತಿ, ಬಿಕೆ ಜ್ಯೋತಿ, ರಾಜು ಬತಲಿ, ಶಿವಾಂತ ಸ್ವಾಮಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ನಾಗನಾಥ ಹುಲಸೂರೆ ಅಭಿಮತ
  • ಹುಮನಾಬಾದ್​ನಲ್ಲಿ ಉಚಿತ ಶಿಬಿರ
ಹುಮನಾಬಾದ್​: ರಕ್ತದಾನ ಮಹತ್ವದ ಮಾನವೀಯ ಸೇವೆಯಾಗಿದ್ದು, ಒಬ್ಬರು ನೀಡುವ ರಕ್ತದಿಂದ ಹಲವರ ಜೀವ ಉಳಿಸಲು ಸಾಧ್ಯ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ನೆರವಾಗಬೇಕು ಎಂದು ಭಾಲ್ಕಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ ಕರೆ ನೀಡಿದರು.
ಪಟ್ಟಣದ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ಬ್ರಹ್ಮಕುಮಾರಿ ದಾದಿ ಪ್ರಕಾಶ ಮಾಣಿ ಪುಣ್ಯಸ್ಮರಣೆ ನಿಮಿತ್ತ ಆಯೋಜಿಸಿದ್ದ ಉಚಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನದಿಂದ ದಾನಿಯ ಆರೋಗ್ಯಕ್ಕೂ ಯಾವುದೇ ತೊಂದರೆಯಾಗುವುದಿಲ್ಲ. ಅಗತ್ಯ ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಬಳಲುವ ರೋಗಿಗಳಿಗೆ ರಕ್ತ ದೊರೆಯುವಂತಾಗಲು ಇಂತಹ ಶಿಬಿರಗಳು ಸಹಕಾರಿಯಾಗುತ್ತವೆ ಎಂದರು.
ಸ್ಥಳಿಯ ಹಿರಿಯ ದಂತ ವೈದ್ಯ ಡಾ.ಶಿವಮೂರ್ತಿ ಮಾತನಾಡಿ, ರಕ್ತದಾನವು ಮಾನವೀಯತೆಯ ಪ್ರತಿಕವಾಗಿದೆ. ಯುವಕರು ಸೇರಿ ಅರ್ಹರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ವಿಶ್ವವಿದ್ಯಾಲಯದ ಬಿಕೆ ಮಂದಾಕಿನಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸೇವಾ ಮನೋಭಾವದಿಂದ ನಡೆಯುವ ರಕ್ತದಾನ ಶಿಬಿರಗಳು ಸಮಾಜದಲ್ಲಿ ಸಹಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುತ್ತವೆ ಎಂದರು.
ಪ್ರಮುಖರಾದ ಬಿಕೆ ಜ್ಯೋತಿ, ರಾಜು ಬತಲಿ, ಶಿವಾಂತ ಸ್ವಾಮಿ ಇತರರಿದ್ದರು. ಶಿಬಿರದಲ್ಲಿ ಸುಮಾರು 50 ಮಂದಿ ರಕ್ತದಾನ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net