ಇನ್ನೊಂದು ಸ್ಥಾನಕ್ಕೆ ಬೆಂಗಳೂರು ನಗರದಲ್ಲಿ ಪಕ್ಷದ ಮುಂಚೂಣಿ ನಾಯಕರಾಗಿದ್ದ ಸುಬ್ಬಣ್ಣ, ಕೊಳ್ಳೆಗಾಲದ ಎನ್. ಮಹೇಶ್, ಮೈಸೂರಿನ ರಘು ಕೌಟಿಲ್ಯ, ಲಿಂಗರಾಜು ಪಾಟೀಲ್, ಡಾ.ಎಂ. ನಾಗರಾಜು, ಶರಣ ತಳ್ಳಿಕೇರಿ, ಪ್ರಮೋದ್ ಮಧ್ವರಾಜ್, ಭೋಜರಾಜು ಕರಗಿ ಆಕಾಂಕ್ಷಿತರು. ಇದರಲ್ಲಿ ಪ್ರಮುಖವಾಗಿ ಕುರುಬ ಜಾತಿಗೆ ಅವಕಾಶ ಕೊಡಬೇಕೆಂಬ ಕೂಗು ಹೆಚ್ಚಾಗಿ ಕೇಳಿ ಬಂದಿದ್ದು, ಜಾತಿ, ಪಕ್ಷ ನಿಷ್ಠೆ, ಸಂಘಟನೆ ಲೆಕ್ಕಚಾರಗಳು ಹೈಕಮಾಂಡ್‌ನಲ್ಲಿ ನಡೆದಿದೆ.