ಬಿಜಗುಪ್ಪಿ&ಹೊಸೂರ ರಸ್ತೆ ಕಾಮಗಾರಿಗೆ ಚಾಲನೆ

ತುರನೂರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಶೋಕ ಪಟ್ಟಣ ಭೂಮಿಪೂಜೆ ನೆರವೇರಿಸಿದರು. ಜಿ.ಬಿ.ರಂಗನಗೌಡ್ರ, ಹಜರತ್​ ಸಾಬ್​ ಇತರರಿದ್ದರು.
ತುರನೂರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಶೋಕ ಪಟ್ಟಣ ಭೂಮಿಪೂಜೆ ನೆರವೇರಿಸಿದರು. ಜಿ.ಬಿ.ರಂಗನಗೌಡ್ರ, ಹಜರತ್​ ಸಾಬ್​ ಇತರರಿದ್ದರು.
Published on
ರಾಮದುರ್ಗ: ದುರಸ್ತಿ ಹಾಗೂ ಅಭಿವೃದ್ಧಿಗೆ ಕ್ರಿಯಾಯೋಜನೆ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಿ ಅನುದಾನಕ್ಕೆ ಆಗ್ರಹಿಸುತ್ತೇನೆ ಎಂದು ಶಾಸಕ ಅಶೋಕ ಪಟ್ಟಣ ಭರವಸೆ ನೀಡಿದರು.
ತುರನೂರ ಗ್ರಾಮದಲ್ಲಿ ಜ್ಞಾನ ಪ್ರಬೋಧಿನಿ ಶಾಲೆಯಿಂದ ಸಿದ್ಧಲಿಂಗೇಶ್ವರ ನಗರದವರೆಗೆ 30 ಲ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ತಾಲೂಕಿನ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಗೆ ಶ್ರಮಿಸುತ್ತೇನೆ. ಅಭಿವೃದ್ಧಿಗೆ ತಾಲೂಕಿನ ಜನರ ಸಹಕಾರ ಅಗತ್ಯ. ಮುಂಬರುವ ದಿನಗಳಲ್ಲಿ ೇತ್ರದಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಶ್ರಮಿಸುತ್ತೇನೆ ಎಂದರು.
70 ಲ ರೂ. ವೆಚ್ಚದಲ್ಲಿ ಬಿಜಗುಪ್ಪಿಯಿಂದ ಹೊಸೂರವರೆಗೆ, 30 ಲ ರೂ. ವೆಚ್ಚದಲ್ಲಿ ಬಿಜಗುಪ್ಪಿಯಿಂದ ಹೊಸಕೋಟಿವರೆಗೆ ರಸ್ತೆ ಅಭಿವೃದ್ಧಿ, 80 ಲ ರೂ. ವೆಚ್ಚದಲ್ಲಿ ಕುಳ್ಳೂರ ಗ್ರಾಮದಿಂದ ಹೊಸಕೋಟಿ ಗುಡ್ಡದ ರಸ್ತೆ ಸುಧಾರಣೆ, 40 ಲ ರೂ. ವೆಚ್ಚದಲ್ಲಿ ತಾಲೂಕಿನ ಉಮತಾರದಿಂದ ಎಂ. ಖಾನಾಪುರವರೆಗೆ, 30 ಲ ರೂ. ವೆಚ್ಚದಲ್ಲಿ ಓಬಳಾಪುರ ಆರ್​ಎಲ್​ಟಿ ಯಿಂದ ದಾಡಿಬಾವಿ ತಾಂಡಾವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಜಿ.ಬಿ.ರಂಗನಗೌಡ್ರ, ಹಜರತ್​ ಸಾಬ್​ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮದ ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net