ಕಲಬುರಗಿ ಸಿಯುಕೆನಲ್ಲಿ ಚೆನ್ನೈ ಮೂಲದ ಭೂಮಿ ಫೌಂಡೇಶನ್ನಲ್ಲಿ ಸ್ಥಾನ ಪಡೆದಿರುವ ಸಮಾಜ ವಿಜ್ಞಾನ, ಮನೋವಿಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಪತ್ರ ವಿತರಣೆ ನಂತರ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಜತೆಗೆ ಫೌಂಡೇಶನ್ನ ಕಾರ್ಯಕ್ರಮ ವ್ಯವಸ್ಥಾಪಕಿ ನಂದನ, ಪ್ರೊ.ಚನ್ನವಿರ ಆರ್.ಎಂ, ಪ್ರೊ.ಪವಿತ್ರಾ ಆಲೂರ್, ಪ್ರೊ.ವಿಜೇಂದ್ರ ಪಾಂಡೆ ಇತರರಿದ್ದರು.
ಕಲಬುರಗಿ: ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಿಂದ ಹೊರಡುವ ಮೊದಲು ಉದ್ಯೋಗ ಪಡೆಯುವಂತೆ ಮಾಡುವುದು ನಮ್ಮ ಗುರಿ ಎಂದು ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಚೆನ್ನೈ ಮೂಲದ ಭೂಮಿ ಫೌಂಡೇಶನ್ನಲ್ಲಿ ಸ್ಥಾನ ಪಡೆದಿರುವ ಸಮಾಜ ವಿಜ್ಞಾನ (ಎಂಎಸ್ಡಬ್ಲೂ$್ಯ) ಮತ್ತು ಮನೋವಿಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಪತ್ರವನ್ನು ಸೋಮವಾರ ಪ್ರದಾನ ಮಾಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಷ್ಟಪಟ್ಟು ಕೆಲಸ ಮಾಡಿ ವಿಶ್ವವಿದ್ಯಾಲಯಕ್ಕೆ ಹೆಸರು ಮತ್ತು ಖ್ಯಾತಿ ತರಬೇಕು. ಇದರಿಂದ ಈ ಸಂಸ್ಥೆಗಳು ಮತ್ತೆ ಬಂದು ನಮ್ಮ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳಬಹುದು. ಉತ್ತಮ ಮಾರ್ಗದರ್ಶನಕ್ಕಾಗಿ ನಾನು ವಿಭಾಗದ ಶಿಕ್ಷಕರು ಮತ್ತು ನಿಯೋಜನೆ ಕೋಶ ಎರಡಕ್ಕೂ ಕೃತತೆ ಸಲ್ಲಿಸುತ್ತೇನೆ. ಈ ಸಾಧನೆಯು ವಿಶ್ವವಿದ್ಯಾಲಯದ ಶೈಕ್ಷಣಿಕ ಶ್ರೇಷ್ಠತೆ, ವೃತ್ತಿಪರ ಸಾಮರ್ಥ್ಯ ಮತ್ತು ಸಾಮಾಜಿಕ ಬದ್ಧತೆ ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಭೂಮಿ ಫೌಂಡೇಶನ್ ಚೆನ್ನೈ ಮೂಲದ ಶಿಕ್ಷಣ ೇತ್ರಕ್ಕಾಗಿ ಕೆಲಸ ಮಾಡುತ್ತಿರುವ ಸಾಮಾಜಿಕ ಸಂಟನೆಯಾಗಿದೆ. ಆಯ್ಕೆಯಾದ ಏಳು ಅಭ್ಯರ್ಥಿಗಳಲ್ಲಿ ನಾಲ್ವರು ಸಮಾಜ ಕಾರ್ಯ ವಿಭಾಗದಿಂದ ಮತ್ತು ಮೂವರು ಮನೋವಿಜ್ಞಾನ ವಿಭಾಗದವರಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳು ಎರಡು ವರ್ಷಗಳ ಕಾಲ ಪೂರ್ಣಾವಧಿ ಉದ್ಯೋಗಿಗಳಾಗಿರುತ್ತಾರೆ. ಅವರಿಗೆ ತಿಂಗಳಿಗೆ ರೂ. 30,000 ಫೆಲೋಶಿಪ್ ಸಿಗುತ್ತದೆ. ಎರಡು ವರ್ಷಗಳ ನಂತರ ಅವರು ಬಯಸಿದರೆ ಅಲ್ಲಿಯೇ ಮುಂದುವರಿಯಬಹುದು, ಇಲ್ಲದಿದ್ದರೆ ಇತರ ಉದ್ಯೋಗ ಹುಡುಕಬಹುದು ಎಂದು ಹೇಳಿದರು.
ಫೌಂಡೇಶನ್ನ ಕಾರ್ಯಕ್ರಮ ವ್ಯವಸ್ಥಾಪಕಿ ನಂದನ, ಪ್ರೊ.ಚನ್ನವಿರ ಆರ್.ಎಂ. ಇದ್ದರು. ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಪ್ರೊ.ಪವಿತ್ರಾ ಆಲೂರ್, ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ವಿಜೇಂದ್ರ ಪಾಂಡೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು.