ಖಾನಾಪುರ ಎಸ್ಎಚ್ ಕೃಷಿ ಪತ್ತಿನ ಸಹಕಾರ ಸಂದ ಕಾರ್ಯದರ್ಶಿ ಬಸವರಾಜ ದೋರನಹಳ್ಳಿ ವಿಶೇಷ ಉಪನ್ಯಾಸ ನೀಡಿ, ಮಹರ್ಷಿ ಭಗೀರಥರು ತಮ್ಮ ಕಠಿಣ ತಪಸ್ಸಿನ ಮೂಲಕ ಗಂಗೆಯನ್ನು ಧರೆಗೆ ಇಳಿಸಿದರು. ಕುಗ್ಗದ ಛಲ, ಕಠಿಣ ಕಾರ್ಯ, ಸಹನೆ, ದೃಢನಿಶ್ಚಯದಂತಹ ಅವರ ಜೀವನಾದರ್ಶಗಳು ಮಾನವ ಜನಾಂಗಕ್ಕೆ ಪ್ರೇರಣಾದಾಯಕವಾಗಿವೆ ಎಂದರು.