ಬೆಸ್ಟ್​ ಎಜ್ಯುಕೇಶನ್​ ಸೊಸೈಟಿ ಪ್ರಶಸ್ತಿ

ಕಲಬುರಗಿ ಶರಣಬಸವ ವಿವಿಯ ದೊಡ್ಡಪ್ಪ ಅಪ್ಪ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯಕ್ಷೆ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಗೆ ಐಎಸ್​ಟಿಇ ವತಿಯಿಂದ ಬೆಸ್ಟ್​ ಎಜುಕೇಶನ್​ ಸೊಸೈಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಸವರಾಜ ದೇಶಮುಖ, ಡಾ.ಪ್ರತಾಪ್​ಸಿನ್ಹ ಕಾಕಾಸಾಹೇಬ ದೇಸಾಯಿ, ಡಾ.ಸುರೇಶ ಡಿ.ಎಸ್​, ಪ್ರೊ.ಅನಿಲಕುಮಾರ ಬಿಡವೆ, ಡಾ. ಲಕ್ಷ್ಮಿ ಪಾಟೀಲ್​ ಮಾಕಾ ಇತರರಿದ್ದರು.
ಕಲಬುರಗಿ ಶರಣಬಸವ ವಿವಿಯ ದೊಡ್ಡಪ್ಪ ಅಪ್ಪ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯಕ್ಷೆ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಗೆ ಐಎಸ್​ಟಿಇ ವತಿಯಿಂದ ಬೆಸ್ಟ್​ ಎಜುಕೇಶನ್​ ಸೊಸೈಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಸವರಾಜ ದೇಶಮುಖ, ಡಾ.ಪ್ರತಾಪ್​ಸಿನ್ಹ ಕಾಕಾಸಾಹೇಬ ದೇಸಾಯಿ, ಡಾ.ಸುರೇಶ ಡಿ.ಎಸ್​, ಪ್ರೊ.ಅನಿಲಕುಮಾರ ಬಿಡವೆ, ಡಾ. ಲಕ್ಷ್ಮಿ ಪಾಟೀಲ್​ ಮಾಕಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ
  • ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿಗೆ ಪ್ರದಾನ
ಕಲಬುರಗಿ: ನಗರದ ಶರಣಬಸವೇಶ್ವರ ವಿದ್ಯಾವರ್ಧಕ ಸಂಕ್ಕೆ ಪ್ರತಿಷ್ಠಿತ ಐಎಸ್​ಟಿಇ ಬೆಸ್ಟ್​ ಎಜ್ಯುಕೇಶನ್​ ಸೊಸೈಟಿ ಪ್ರಶಸ್ತಿ ಲಭಿಸಿದ್ದು, ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ದೊಡ್ಡಪ್ಪ ಅಪ್ಪ ಸಭಾಂಗಣದಲ್ಲಿ ಶನಿವಾರ ನಡೆದ 27ನೇ ಐಎಸ್​ಟಿಇ ರಾಜ್ಯ ಮಟ್ಟದ ಪ್ರಾಧ್ಯಾಪಕರ ಸಮಾವೇಶದಲ್ಲಿ ಸಂದ ಅಧ್ಯಕ್ಷೆ ಮಾತೋಶ್ರೀ ಡಾ.ದಾಾಯಿಣಿ ಅಪ್ಪ ಅವರಿಗೆ ಇಂಡಿಯನ್​ ಸೊಸೈಟಿ ಫಾರ್​ ಟೆಕ್ನಿಕಲ್​ ಎಜ್ಯುಕೇಶನ್​ನ ರಾಷ್ಟ್ರೀಯ ಅಧ್ಯಕ್ಷ ಡಾ.ಪ್ರತಾಪ್​ಸಿನ್ಹ ಕಾಕಾಸಾಹೇಬ ದೇಸಾಯಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಡಾ.ಅವ್ವಾಜಿ, ಈ ಪ್ರಶಸ್ತಿಯನ್ನು ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಲಿಂ.ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರಿಗೆ ಅರ್ಪಿಸುವುದಾಗಿ ಹೇಳಿ, ಅವರು ಶಿಕ್ಷಣ ಸಂಸ್ಥೆಗಳ ಸರಪಳಿ ಸ್ಥಾಪಿಸುವ ಮೂಲಕ ಮತ್ತು ಉತ್ತರ ಕರ್ನಾಟಕದ ಮೊದಲ ಖಾಸಗಿ ವಿವಿ ಶರಣಬಸವ ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ಈ ಪ್ರದೇಶದ ಜನರ ಶೈಕ್ಷಣಿಕ ಸಬಲೀಕರಣಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟರು. ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಸ್ಥಾಪಿಸುವ ಜವಾಬ್ದಾರಿಯನ್ನು ಅಪ್ಪಾಜಿಯವರು ವಹಿಸಿದ್ದರು. ನಂತರ ಇದು ಗುಲ್ಬರ್ಗ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿತು. ಇದು ಮೊದಲ ಬಾರಿಗೆ ಉನ್ನತ ಶಿಕ್ಷಣದ ಮಾರ್ಗಗಳನ್ನು ಈ ಪ್ರದೇಶದ ಜನರ ಮನೆ ಬಾಗಿಲಿಗೆ ತಂದಿತು ಎಂದು ಹೇಳಿದರು.

ಕಠಿಣ ಪರಿಶ್ರಮದ ಪ್ರತಿಫಲ

ಈ ಪ್ರಶಸ್ತಿಯು ಪೂಜ್ಯ ಡಾ.ಅಪ್ಪಾಜಿಯವರ ಜೀವಮಾನದ ಸಾಧನೆ ಮತ್ತು ಅವರ ಕನಸು ನನಸಾಗಿಸಲು ಸಹಾಯ ಮಾಡಿದ ಶಿಕ್ಷಣ ಸಂಸ್ಥೆಗಳ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಸಮರ್ಪಣೆ, ನಿಮ್ಮೆಲ್ಲರ ಕಠಿಣ ಪರಿಶ್ರಮ ಪ್ರತಿಬಿಂಬಿಸುತ್ತದೆ. ಡಾ. ಅಪ್ಪಾಜಿಯವರ ಪ್ರಯತ್ನದ ಮೂಲಕ ಈ ಪ್ರದೇಶದ ಜನರ ಶೈಕ್ಷಣಿಕ ಸಬಲೀಕರಣವು ಈ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಕಾರಣವಾಯಿತು. ಶೈಕ್ಷಣಿಕವಾಗಿ ಸಬಲೀಕರಣಗೊಂಡ ಯುವಕರು ದೇಶದ ವಿವಿಧ ಭಾಗ ಮತ್ತು ವಿದೇಶಗಳಲ್ಲಿ ಲಾಭದಾಯಕ ಉದ್ಯೋಗ ಪಡೆಯಲು ನೆರವಾಗಿದೆ. ಈ ಪ್ರಶಸ್ತಿ ನನ್ನ ಜವಾಬ್ದಾರಿ ಹೆಚ್ಚಿಸಿದೆ. ಶಿಕ್ಷಣ ಸಂಸ್ಥೆಗಳ ಮತ್ತಷ್ಟೂ ಸುಧಾರಣೆ ಹಾಗೂ ಈ ಪ್ರದೇಶದ ಜನರಿಗೆ ಹೆಚ್ಚಿನ ಶೈಕ್ಷಣಿಕ ಮಾರ್ಗ ಸೃಷ್ಟಿಸಲು ಶ್ರಮಿಸುವಂತೆ ಮಾಡಿದೆ ಎಂದರು.

ಕೌಶಲ ಸುಧಾರಣೆ ಅಗತ್ಯ

ಐಎಸ್​ಟಿಇ ಕರ್ನಾಟಕ ವಿಭಾಗದ ಅಧ್ಯಕ್ಷ ಡಾ.ಸುರೇಶ್​ ಡಿ.ಎಸ್​. ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶವನ್ನು ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ಪರಿವರ್ತಿಸಲು ಡಾ.ಅಪ್ಪಾಜಿ ಮಾಡಿದ ಅವಿಶ್ರಾಂತ ಪ್ರಯತ್ನಗಳಿಗಾಗಿ ಅವರಿಗೆ ಗೌರವ ಸಲ್ಲಿಸಿದರು. ಡಾ. ಅವ್ವಾಜಿಯವರು ಡಾ.ಅಪ್ಪಾಜಿಯವರ ಪರಂಪರೆ ಮುಂದುವರಿಸುತ್ತಾರೆ ಎಂದರು. ವಿದ್ಯಾರ್ಥಿಗಳ ಉದ್ಯಮಶೀಲತಾ ಕೌಶಲ ಸುಧಾರಿಸುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿರಬೇಕು. ಡಾ.ಅಪ್ಪಾಜಿ ಅವರ ಉದ್ಯಮಶೀಲತಾ ಕೌಶಲವು ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಸಬಲೀಕರಣಕ್ಕೆ ಹೇಗೆ ನೆರವಾಗಿದೆ. ಸ್ವಾವಲಂಬಿಯಾಗಿ ನಿಲ್ಲುವಂತೆ ಮಾಡಿದೆ ಎಂಬುದಕ್ಕೆ ಉತ್ತಮ ಉದಾಹರಣೆ ಎಂದು ಹೇಳಿದರು.
ಸಮಾಜದ ಪ್ರಾಯೋಗಿಕ ಬೇಡಿಕೆ ಪೂರೈಸಲು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಂಶೋಧನಾ ಕಾರ್ಯದ ದೃಷ್ಟಿಕೋನದಲ್ಲಿ ಸೈದ್ಧಾಂತಿಕ ವಿಧಾನದ ಬದಲಾವಣೆಯು ಇಂದಿನ ಅಗತ್ಯ. ಕೆಲ ವರ್ಷಗಳ ನಂತರ ವಿಕಸಿತ ಭಾರತದ ಕನಸು ಸಾಧಿಸಲು ಶಿಕ್ಷಣ ೇತ್ರದಲ್ಲಿ ಈ ಪ್ರಮುಖ ಪರಿವರ್ತನೆ ಅಗತ್ಯ ಎಂದರು.

ಡೇಟಾ ಸೆಂಟರ್​ ಬಲಪಡಿಸಿ

ಶಿಕ್ಷಣ ಸಂಸ್ಥೆಗಳಲ್ಲಿನ ಸಂಶೋಧಕರು ಸಮಸ್ಯೆ ಗುರುತಿಸಬೇಕು. ಈ ಸಮಸ್ಯೆಗಳಿಗೆ ನೈಜ ಸಮಯದಲ್ಲಿ ಪರಿಹಾರ ಕಂಡುಹಿಡಿಯಲು ನಿರ್ದೇಶಿಸಬೇಕು. ನಿಮ್ಮ ಸಂಶೋಧನಾ ಯೋಜನೆ ಜನರು ಮತ್ತು ಸಮಾಜದ ಸಮಸ್ಯೆಗಳ ಕಡೆಗೆ ನಿರ್ದೇಶಿಸಲ್ಪಟ್ಟರೆ ಅದು ಯಶಸ್ವಿಯಾಗುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿನ ಎಲ್ಲಾ ವಿವರಗಳ ದಾಖಲಾತಿ ಉಲ್ಲೇಖಿಸಿದ ಡಾ.ಸುರೇಶ್​, ಶರಣಬಸವ ವಿಶ್ವವಿದ್ಯಾಲಯವು ತನ್ನದೇ ಆದ ಡೇಟಾ ಸೆಂಟರ್​ ರಚಿಸುವಂತೆ ಮತ್ತು ವಿಶ್ವವಿದ್ಯಾಲಯ, ಅದರ ಸಂಪನ್ಮೂಲಗಳು, ಅದರ ಸಾಧನೆ, ಸಾಮರ್ಥ್ಯ ಮತ್ತು ಇತರ ಎಲ್ಲಾ ವಿವರಗಳ ಬಗ್ಗೆ ಅಗತ್ಯ ಮಾಹಿತಿ ಸಂಗ್ರಹಿಸಿ ಮತ್ತು ಅದನ್ನು ಎಲ್ಲರಿಗೂ ಸುಲಭವಾಗಿ ಲಭಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಐಎಸ್​ಟಿಇ ರಾಷ್ಟ್ರೀಯ ಅಧ್ಯಕ್ಷ ಡಾ.ಪ್ರತಾಪ್​ಸಿನ್ಹ ಕಾಕಾಸಾಹೇಬ ದೇಸಾಯಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ ಇತರರು ಮಾತನಾಡಿದರು. ವಿಶ್ವವಿದ್ಯಾಲಯದ ಡೀನ್​ ಡಾ.ಲಕ್ಷಿ$್ಮ ಪಾಟೀಲ ಮಾಕಾ ಸ್ವಾಗತಿಸಿದರು. ಪುಣೆಯ ಎಂಐಟಿಯ ಪ್ರೊ.ವೀರೇಂದ್ರ ವೀರಭದ್ರ ಶೇಟೆ ಮತ್ತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಡಾ.ಓರುಗಂಟಿ ಆಂಜನೇಯುಲು ವಿಶೇಷ ಉಪನ್ಯಾಸ ನೀಡಿದರು.
"

ತರಗತಿಗಳಲ್ಲಿ ಉತ್ಪತ್ತಿಯಾಗುವ ಆಲೋಚನೆಗಳು ಸಮಾಜಕ್ಕೆ ಪ್ರಯೋಜನವಾಗುವಂತೆ ತರಗತಿಯಿಂದ ಹೊರಬಂದು ಪೂರ್ಣ ರೂಪ ಪಡೆಯಬೇಕು. ಪ್ರಾಧ್ಯಾಪಕರ ಪರಿವರ್ತನಾಶೀಲ ಆಲೋಚನೆಗಳು ತರಗತಿಗಳಲ್ಲಿ ಹೂತುಹೋಗಬಾರದು.

.ಡಾ.ಸುರೇಶ್​ ಡಿ.ಎಸ್​,

ಅಧ್ಯಕ್ಷ, ಐಎಸ್​ಟಿಇ, ಕರ್ನಾಟಕ ವಿಭಾಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net