ಪ್ರತಿಭಾ ಅವರು ಬಟ್ಟೆ ತೆಗೆದುಕೊಂಡು ಕೆಳಕ್ಕೆ ಬಂದಾಗ ಮಗು ಬಕೆಟ್ನಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿರುವುದು ಅರಿವಿಗೆ ಬಂದಿದೆ. ಇದರಿಂದ ತೀರ ದುಃಖ ಮತ್ತು ಪಾಪಪ್ರಜ್ಞೆ ಕಾಡಿರುವ ಕಾರಣ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಮೊದಲು ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ರಕ್ತ ಬಾರದ ಕೆಲವು ಮಾತ್ರೆಗಳನ್ನು ನುಂಗಿದ್ದಾರೆ. ಆನಂತರ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.