ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು&ಮುಂಬೈ ನೂತನ ರೈಲು ಸ್ವಾಗತ ಸಮಾರಂಭವನ್ನು ಸಂಸದ ಜಗದೀಶ ಶೆಟ್ಟರ ಉದ್ಘಾಟಿಸಿದರು. ಹನುಮಂತ ಕೊಂಗಾಲಿ, ಡಾ.ರವಿ ಪಾಟೀಲ, ಪ್ರೇಮಚಂದ ಹರಿಜನ್, ಚಿದಾನಂದ ದೇಮಶೆಟ್ಟಿ, ಪ್ರೀತಿ ಕಾಮಕರ ಇತರರಿದ್ದರು.
ಬೆಳಗಾವಿ&ಧಾರವಾಡ ನೂತನ ರೈಲ್ವೆ ಮಾರ್ಗಕ್ಕೆ ಬೇಕಾದ ರೈತರ ಭೂಮಿಗೆ ನೀಡಬೇಕಿದ್ದ 400 ಕೋಟಿ ರೂ. ಪರಿಹಾರವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ಸರ್ಕಾರದ ಈ ಕ್ರಮದಿಂದ ಅಭಿವೃದ್ಧಿಗೆ ತೊಂದರೆಯಾಗುತ್ತಿದೆ ಎಂದು ಸಂಸದ ಜಗದೀಶ ಶೆಟ್ಟರ ಆರೋಪಿಸಿದರು.
ನಗರದಲ್ಲಿ ನೂತನವಾಗಿ ಆರಂಭಗೊಂಡ ಬೆಂಗಳೂರು&ಮುಂಬೈ ದ್ವಿಸಾಪ್ತಾಹಿಕ ರೈಲನ್ನು ಭಾನುವಾರ ಸ್ವಾಗತಿಸಿಕೊಂಡು ಮಾತನಾಡಿ, ಈಗಾಗಲೇ ಬೆಳಗಾವಿ ಜಿಲ್ಲೆಯ 1,200 ಎಕರೆ ಭೂಸ್ವಾಧಿನ ಪ್ರಕ್ರಿಯೆ ಅಂತಿಮವಾಗಿದೆ. ಧಾರವಾಡ ಜಿಲ್ಲೆಯ 300 ಎಕರೆಯಲ್ಲಿ 240 ಎಕರೆ ಪ್ರಕ್ರಿಯೆ ಅಂತಿಮವಾಗಿದೆ. ಆದರೆ, ರಾಜ್ಯ ಸರ್ಕಾರ ರೈತರಿಗೆ ಹಣ ನೀಡದ್ದಕ್ಕೆ ರೈಲ್ವೆ ಇಲಾಖೆಗೆ ಭೂಮಿ ಹಸ್ತಾಂತರ ಮಾಡಲು ಆಗಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಬೇಕೆಂದು ಆಗ್ರಹಿಸಿದರು.
ನೂತನ ರೈಲ್ವೆಯಿಂದ ಬೆಳಗಾವಿ ಜನರಿಗೆ ಮುಂಬೈ ಮತ್ತು ಬೆಂಗಳೂರಿಗೆ ಮತ್ತೊಂದು ರೈಲು ಸಿಕ್ಕಂತಾಗಿದೆ. ಹೈದರಾಬಾದ್, ಸಿಕಂದರಾಬಾದ್ ಮತ್ತು ಚೆಲ್ಲಪಲ್ಲಿಗೆ ಹೊಸ ರೈಲು ದೊರೆತಿವೆ. ಈಗಾಗಲೇ ಬೆಳಗಾವಿಗೆ ಅಗತ್ಯವಿರುವ ವಿಮಾನ ಸೌಲಭ್ಯ ಸಹ ಅಭಿವೃದ್ಧಿ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಬೆಳಗಾವಿಯನ್ನು ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದ ಅಭಿವೃದ್ಧೀಶಿಲ ನಗರವನ್ನಾಗಿ ಮಾಡಲು ಪಣತೊಟ್ಟಿದ್ದೇನೆ ಎಂದರು.
ಮೊದಲು ಬೆಳಗಾವಿ&ಚೆಲ್ಲಪಲ್ಲಿ ರೈಲ್ವೆಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಮೇಯರ್ ಪ್ರೀತಿ ಕಾಮಕರ, ಉಪಮೇಯರ್ ಹನುಮಂತ ಕೊಂಗಾಲಿ, ಡಾ.ರವಿ ಪಾಟೀಲ, ರಾಜಕುಮಾರ, ಪ್ರೇಮಚಂದ ಹರಿಜನ್, ಸೋಮಶೇಖರ, ಸೆಂಥಿಲ್ಕುಮಾರ, ಚಿದಾನಂದ ದೇಮಶೆಟ್ಟಿ, ಪಾಲಿಕೆ ಸದಸ್ಯ