ಪ್ರಾಣಿಶಾಸ ಸಂದ ಉಪಾಧ್ಯಕ್ಷ ಹಾಗೂ ಪ್ರಾಧ್ಯಾಪಕ ಡಾ.ಶಶಿಕಾಂತ ಮಜಗಿ ಪ್ರಾಸ್ತಾವಿಕ ಮಾತನಾಡಿ, ಆಕ್ಟಿಂಗ್ ಲೋಕಲೀ ಫಾರ್ ಗ್ಲೋಬಲ್ ಇಂಪ್ಯಾಕ್ಟ್ ಜೀವವೈವಿದ್ಯತೆ ದಿನಾಚರಣೆ ೂಷವಾಕ್ಯವಾಗಿದೆ. ಜೀವ ವಿಜ್ಞಾನ ಜಗತ್ತು ವೈವಿಧ್ಯತೆಯಿಂದ ಕೂಡಿದೆ. ಜೀವಿಗಳ ವಂಶವಾಹಿ ಮತ್ತು ಪರಿಸರದಲ್ಲಿ ಪ್ರಾಣಿ, ಪ, ಸಸ್ಯ ಮತ್ತು ಸೂಕ್ಷ$್ಮಜಿವಿಗಳು ಸೊಗಸಾದ ಜಗತ್ತು ಸೃಷ್ಟಿಸಿವೆ. ಎಲ್ಲಾ ಜೀವರಾಶಿಗಳಲ್ಲಿ ವೈವಿಧ್ಯತೆ ಕಾಣದಿದ್ದರೆ ಭೂಮಿ ಸುಂದರ ಮತ್ತು ವಿಸ್ಮಯಗಳ ಆಗರವಾಗಿರುತ್ತಿರಲಿಲ್ಲ. ಜೈವಿಕ ವಿಜ್ಞಾನ ೇತ್ರದಲ್ಲಿನ ಸಂಶೋಧನೆಗಳಿಂದ ಸುಮಾರು 1.6 ರಿಂದ 1.8 ಮಿಲಿಯನ್ ಜೀವಿಗಳನ್ನು ಮಾತ್ರ ಗುರುತಿಸಲು ಸಾಧ್ಯವಾಗಿದೆ. ಇನ್ನು 45 ರಿಂದ 50 ಮಿಲಿಯನ್ ಸಸ್ಯಗಳು, ಪ್ರಾಣಿಗಳು ಮತ್ತು ಸೂಕ್ಷ$್ಮಜಿವಿಗಳು ಇವೆ ಎಂದು ಇತ್ತೀಚಿನ ಶೋಧನೆಗಳಿಂದ ಕಂಡು ಬಂದಿದೆ ಎಂದು ಅಂದಾಜಿಸಲಾಗಿದೆ. ಅವುಗಳ ವಿಶೇಷತೆ, ವೈವಿಧ್ಯತೆ ಗ್ರಹಿಸುವ ಮೂಲಕ ನಾವೀನ್ಯ ಸಂಶೋಧನೆಗೆ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.