ಗುಲ್ಬರ್ಗ ವಿವಿ ಡಾ.ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ವಿವಿ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಹಾಗೂ ನಿವೃತ್ತ ನೌಕರರನ್ನು ಸತ್ಕರಿಸಲಾಯಿತು. ಸಂಸದ ರಾಧಾಕೃಷ್ಣ ದೊಡ್ಡಮನಿ, ಪ್ರೊ.ಶಶಿಕಾಂತ ಉಡಿಕೇರಿ, ಪ್ರೊ.ರಮೇಶ ಲಂಡನಕರ್, ಜಯಾಂಬಿಕಾ, ಪ್ರೊ.ಅಶ್ವಿನಿ, ಪ್ರೊ.ಹೂವಿನಭಾವಿ ಬಾಬಣ್ಣ, ಉದಯಕುಮಾರ್ ಇತರರಿದ್ದರು.
ಕಲಬುರಗಿ: ಕೃತಕ ಬುದ್ಧಿಮತ್ತೆ, ಡಿಜಿಟಲ್ ಹಾಗೂ ಜೈವಿಕ ತಂತ್ರಜ್ಞಾನದ ಈ ಯುಗದಲ್ಲಿ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಉದ್ಯೋಗಕ್ಕಷ್ಟೇ ಅಲ್ಲದೆ ನಾಳೆಯ ಸವಾಲು ಮತ್ತು ಅವಕಾಶ ಎದುರಿಸಲು ಸಿದ್ಧಗೊಳಿಸಬೇಕು ಎಂದು ಸಂಸದ ರಾಧಾಕೃಷ್ಣ ದೊಡ್ಡಮನಿ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ವಿವಿ 47ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿದ ಅವರು, ಇಂದು ನಮ್ಮ ಮುಂದಿರುವ ಪ್ರಶ್ನೆ ವಿವಿ ಎಷ್ಟು ದೂರ ಬಂದಿದೆ ಎಂದಲ್ಲ, ಬದಲಾಗಿ ಆಧುನಿಕ ಜಗತ್ತಿಗೆ ತಕ್ಕಂತೆ ಮುಂದೆ ಎಷ್ಟು ದೂರ ಸಾಗಬಲ್ಲದು ಎಂಬುದು ಮುಖ್ಯ ಎಂದರು.
1970ರಲ್ಲಿ ಧಾರವಾಡದ ಕರ್ನಾಟಕ ವಿವಿ ಸ್ನಾತಕೋತ್ತರ ಕೇಂದ್ರವಾಗಿ ಆರಂಭಗೊಂಡ ಈ ಸಂಸ್ಥೆ 1980ರಲ್ಲಿ ಪೂರ್ಣಪ್ರಮಾಣದ ವಿಶ್ವವಿದ್ಯಾಲಯವಾಗಿ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ವಿಕಾಸಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. 794 ಎಕರೆ ವಿಸ್ತಾರದ ಕ್ಯಾಂಪಸ್ ಹೊಂದಿರುವ ಸಂಸ್ಥೆಯು ಎನ್ಎಸಿಸಿಯಿಂದ +ಗ್ರೇಡ್, ಎನ್ಐಆರ್ಎಫ್ ಶ್ರೇಯಾಂಕ 200+, ಐಸಿಎಆರ್ಇ ನಿಂದ 4&ಸ್ಟಾರ್ ರೇಟಿಂಗ್ ಹಾಗೂ ಕ್ಯೂಎಸ್ ರ್ಯಾಂಕಿಂಗ್ನಲ್ಲಿ 601&650 ಶ್ರೇಣಿ ಸಾಧಿಸಿರುವುದನ್ನು ಶ್ಲಾಸಿದರು.
ಕುಲಪತಿ ಪ್ರೊ.ಶಶಿಕಾಂತ ಎಸ್.ಉಡಿಕೇರಿ ಮಾತನಾಡಿ, ಆರ್ಥಿಕ ಶಿಸ್ತು ಕಾಪಾಡಿಕೊಂಡು ವಿವಿಯನ್ನು ಅಭಿವೃದ್ಧಿಯತ್ತ ಕೊಂಡಯ್ಯಲಾಗುತ್ತಿದೆ. ರಾಜ್ಯ ಸರ್ಕಾರದ ವಿವಿಧ ಹುದ್ದೆಗಳ ನೇಮಕದಲ್ಲಿ ನಮ್ಮ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಬೇಕು. ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಸ್ಪರ್ಧಾತ್ಮಕ ಪರೀೆ, ಫೆಲೋಶಿಪ್ ಮತ್ತು ಜಾಗತಿಕ ಮಟ್ಟದ ಸಮ್ಮೇಳನಗಳಲ್ಲಿ ಯಶಸ್ಸು ಸಾಧಿಸಬೇಕು. ನಮ್ಮ ಪ್ರಾಧ್ಯಾಪಕರಿಗೆ ರಾಜ್ಯ&ರಾಷ್ಟ್ರ ಮಟ್ಟದ ಉನ್ನತ ಹುದ್ದೆಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಎಂದು ಆಶಿಸಿದರು.
ಸಿಂಡಿಕೇಟ್ ಸದಸ್ಯ ಉದಯಕುಮಾರ ಪಾಟೀಲ, ವಿದ್ಯಾವಿಷಯಕ ಪರಿಷತ್ ಸದಸ್ಯ ಪ್ರೊ.ಹೂವಿನಾಭಾವಿ ಬಾಬಣ್ಣ, ಕುಲಸಚಿವ ಪ್ರೊ.ರಮೇಶ ಲಂಡನಕರ್, ಮೌಲ್ಯಮಾಪನ ಕುಲಸಚಿವೆ ಪ್ರೊ.ಅಶ್ವಿನಿ, ವಿತ್ತಾಧಿಕಾರಿ ಜಯಾಂಬಿಕ ಇತರರಿದ್ದರು. ವಿವಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಬೋಧಕ&ಬೋಧಕೇತರ ಸಿಬ್ಬಂದಿ ಹಾಗೂ ನಿವೃತ್ತ ನೌಕರರನ್ನು ಸತ್ಕರಿಸಲಾಯಿತು.
"
ವಿಶ್ವವಿದ್ಯಾಲಯದ ವಿಕಾಸಕ್ಕೆ ಶ್ರಮಿಸಿದ ಹಾಲಿ ಮತ್ತು ನಿವೃತ್ತ ಬೋಧಕ-ಬೋಧಕೇತರ ಸಿಬ್ಬಂದಿ ಕೊಡುಗೆ ಅನನ್ಯ. ಸಂಸ್ಥೆಯಲ್ಲಿ ಶೈಕ್ಷಣಿಕ ವಾತಾವರಣ ಸುಧಾರಿಸಲು ನೂತನ ಕೋರ್ಸ್ ಹಾಗೂ ಸರ್ಟಿಫಿಕೇಟ್ ಕಾರ್ಯಕ್ರಮ ಪ್ರಾರಂಭಿಸಲಾಗುತ್ತಿದೆ.