ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಿ

 ಚಿಂಚೋಳಿ ತಾಪಂ ಸಭಾಂಗಣದಲ್ಲಿ ಜಿಪಂ ಸಿಇಒ ಭಂವರ್​ಸಿಂಗ್​ ಮೀನಾ ಅವರ ಅಧ್ಯಕ್ಷತೆಯಲ್ಲಿ ಕುಡಿಯುವ ನೀರಿನ ಕುರಿತು ವಿಶೇಷ ಸಭೆ ನಡೆಯಿತು. ಸಂತೋಷಕುಮಾರ ಚವ್ಹಾಣ್​, ಉಮೇಶ ರಾಠೋಡ್​ ಇದ್ದರು.
ಚಿಂಚೋಳಿ ತಾಪಂ ಸಭಾಂಗಣದಲ್ಲಿ ಜಿಪಂ ಸಿಇಒ ಭಂವರ್​ಸಿಂಗ್​ ಮೀನಾ ಅವರ ಅಧ್ಯಕ್ಷತೆಯಲ್ಲಿ ಕುಡಿಯುವ ನೀರಿನ ಕುರಿತು ವಿಶೇಷ ಸಭೆ ನಡೆಯಿತು. ಸಂತೋಷಕುಮಾರ ಚವ್ಹಾಣ್​, ಉಮೇಶ ರಾಠೋಡ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸಿಇಒ ಭಂವರ್​ಸಿಂಗ್​ ಮೀನಾ ತಾಕೀತು
  • ಚಿಂಚೋಳಿಯಲ್ಲಿ ವಿಶೇಷ ಸಭೆ
ಚಿಂಚೋಳಿ :ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ಜಾಗೃತಿ ವಹಿಸಬೇಕು. ನೀರು ಶೇಖರಣೆ ಟ್ಯಾಂಕ್​ ಸ್ವಚ್ಛವಾಗಿರಬೇಕು. ಚರಂಡಿಗಳನ್ನು ನಿರಂತರವಾಗಿ ಶುಚಿಗೊಳಿಸಿ, ಬ್ಲೀಚಿಂಗ್​ ಫೌಡರ್​ ಸಿಂಪಡಣೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್​ಸಿಂಗ್​ ಮೀನಾ ತಾಕೀತು ಮಾಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಕುರಿತು ವಿಶೇಷ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಿಂಚೋಳಿ ತಾಲೂಕಿನಿಂದ ಕುಡಿವ ನೀರಿನ ಸಮಸ್ಯೆ, ಚರಂಡಿಗಳ ಅಸ್ವಚ್ಛತೆ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸ್ಥಳಿಯ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿದರೆ ಸಮಸ್ಯಗೆ ಪರಿಹಾರ ಸಿಗಲಿದೆ. ನಿಮ್ಮ ರ್ನಿಲಕ್ಷ ಹೀಗೆ ಮುಂದುವರಿದರೆ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಲಬಾವಿ ತಾಂಡಾದಲ್ಲಿ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವುದಕ್ಕಾಗಿ ಕೆಕೆಆರ್​ಡಿಬಿಯಿಂದ 19.28 ಲ ರೂ. ಅನುದಾನ ಬಿಡುಗಡೆಯಾಗಿದ್ದು, ಕೂಡಲೇ ಬೋರವೇಲ್​ ಕೊರೆಸಿ ಸಮಸ್ಯೆ ನಿವಾರಿಸಬೇಕು. ಮೋತಿಮೋಕ, ಸಂಗಾಪುರ, ಐನಾಪುರದ ನಾಮುನಾಯಕ ತಾಂಡಾ, ಗಡಿನಿಂಗದಳ್ಳಿಯ ಮೋನುನಾಯಕ ತಾಂಡಾ, ನಾಗಇದಲಾಯಿ ಗ್ರಾಪಂನ ಕುಸರಂಪಳ್ಳಿ ಗ್ರಾಮದಲ್ಲಿನ ಕುಡಿವ ನೀರಿನ ಸಮಸ್ಯೆ ಪರಿಹಾರ ಕಲ್ಪಿಸಲು 15 ಮತ್ತು 16ನೇ ಹಣಕಾಸು ಯೋಜನೆ ಹಣ ಬಳಸಿಕೊಳ್ಳಿ ಎಂದು ಸೂಚನೆ ನೀಡಿದರು.
ಗ್ರಾಮೀಣ ಜನರ ಗುಳೆ ತಪ್ಪಿಸುವುದಕ್ಕಾಗಿ ನರೇಗಾ ಜಾರಿಗೊಳಿಸಲಾಗಿದ್ದು, ಕ್ಷೇತ್ರದಲ್ಲಿ ಜನರಿಗೆ ಸಮರ್ಪಕ ಕೆಲಸ ಕೊಡದೆ ರ್ನಿಲಕ್ಷಿಸಲಾಗುತ್ತಿವೆ ಎಂಬ ದೂರುಗಳಿವೆ. ನರೇಗಾ ಕೆಲಸ ನಡೆಸದ ಸುಲೇಪೇಟ, ಜಟ್ಟೂರ, ಚಂದನಕೇರಾ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ನೋಟಿಸ್​ ಜಾರಿಮಾಡಿ. ನರೇಗಾ ನೋಡಲ್​ ಅಧಿಕಾರಿಗಳು ತಣವೇ ಕಾಮಗಾರಿ ನೀಡಿ ಪ್ರತಿದಿನ ಸ್ಥಳ ವೀಣೆ ಮಾಡಬೇಕು ಎಂದು ಹೇಳಿದರು.
ತಾಪಂ ಇಒ ಸಂತೋಷಕುಮಾರ ಚವ್ಹಾಣ್​, ಕುಡಿಯುವ ನೀರು ಸರಬರಾಜು ಅಧಿಕಾರಿ ಉಮೇಶ ರಾಠೋಡ್​, ಪಿಡಿಒಗಳಾದ ಗೋವಿಂದ ರೆಡ್ಡಿ, ಪವನ ಮೇತ್ರಿ, ರಮೇಶ ತುಮಕುಂಟಾ, ಮಲ್ಲಿಕಾರ್ಜುನ ಗಿರಿ ಇತರರಿದ್ದರು.
"

ಬಿಸಿಲಿನ ತಾಪ ಹೆಚ್ಚಾಗಿದ್ದು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ನಿತ್ಯವೂ ನಿಮ್ಮ ವ್ಯಾಪ್ತಿಯ ಪ್ರತಿ ಮನೆಗಳಿಗೂ ಭೇಟಿ ನೀಡಿ ಜನರ ಸಮಸ್ಯೆ ಆಲಿಸಬೇಕು. ನೀರಿನ ಸಮಸ್ಯೆ ಉಲ್ಬಣವಾಗದಂತೆ ಎಚ್ಚರಿಕೆ ವಹಿಸಬೇಕು.

— > ಭಂವರ್​ಸಿಂಗ್​ ಮೀರಾ, ಜಿಪಂ ಸಿಇಒ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net