ಹೆಸರು ಕೈಬಿಟ್ಟು ಹೋಗದಂತೆ ಎಚ್ಚರವಹಿಸಿ

ಶಹಾಬಾದ್​ನಲ್ಲಿ ಬುಧವಾರ ಆಯೋಜಿಸಿದ್ದ ಎಸ್​ಐಆರ್​ ಜಾಗೃತಿ ಸಭೆಯಲ್ಲಿ ಸಮಾಜ ಸೇವಕ ಡಾ.ಫಾರೂಕ್​ ಮಣ್ಣೂರ್​ ಮಾತನಾಡಿದರು. ಹಫೀಜ್​ ಅಲ್ತಾಫ ಮೌಲಾನಾ, ಮಹ್ಮದ್​ ಏಕ್ಬಾಲ್​ ಸಾಬ್​, ನಿಸಾರ್​ ವಜೀರ್​ ಇತರರಿದ್ದರು.
ಶಹಾಬಾದ್​ನಲ್ಲಿ ಬುಧವಾರ ಆಯೋಜಿಸಿದ್ದ ಎಸ್​ಐಆರ್​ ಜಾಗೃತಿ ಸಭೆಯಲ್ಲಿ ಸಮಾಜ ಸೇವಕ ಡಾ.ಫಾರೂಕ್​ ಮಣ್ಣೂರ್​ ಮಾತನಾಡಿದರು. ಹಫೀಜ್​ ಅಲ್ತಾಫ ಮೌಲಾನಾ, ಮಹ್ಮದ್​ ಏಕ್ಬಾಲ್​ ಸಾಬ್​, ನಿಸಾರ್​ ವಜೀರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮಾಜ ಸೇವಕ ಡಾ.ಫಾರುಕ್​ ಮಣ್ಣೂರ್​ ಸಲಹೆ
  • ಶಹಾಬಾದ್​ನಲ್ಲಿ ಎಸ್​ಐಆರ್​ ಜಾಗೃತಿ ಸಭೆ
ಕಲಬುರಗಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್​) ಪ್ರಕ್ರಿಯೆಯನ್ನು ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿಯಿಂದ ಪೂರ್ಣಗೊಳಿಸಬೇಕು. ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಡದಂತೆ ಎಚ್ಚರ ವಹಿಸಬೇಕು ಎಂದು ಸಮಾಜ ಸೇವಕ ಡಾ.ಫಾರುಕ್​ ಮಣ್ಣೂರ ಹೇಳಿದರು.
ಶಹಾಬಾದ್​ ಪಟ್ಟಣದ ಜಾಮಿಯಾ ಮಜೀದ್​ನಲ್ಲಿ ಬುಧವಾರ ಆಯೋಜಿಸಿದ್ದ ಎಸ್​ಐಆರ್​ ಜಾಗೃತಿ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆ, ಅರ್ಜಿ ಭರ್ತಿ ವಿಧಾನ, ಅಗತ್ಯ ದಾಖಲೆ ಹಾಗೂ ಸಾರ್ವಜನಿಕರು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮ ಕುರಿತು ವಿವರಿಸಿ, ಅರ್ಜಿಯನ್ನು ಪ್ರತಿಯೊಬ್ಬ ಮತದಾರರು ಸ್ವತ@ ಪರಿಶೀಲಿಸಿ ನಿಖರ ಮಾಹಿತಿಯೊಂದಿಗೆ ಭರ್ತಿ ಮಾಡಬೇಕು ಎಂದು ತಿಳಿಸಿದರು.
ತಮ್ಮ ಹೆಸರಿನ ಜತೆಗೆ ಕುಟುಂಬದ ಸದಸ್ಯರು ಹಾಗೂ ನೆರೆಹೊರೆಯವರ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಂಡು, ಯಾರ ಹೆಸರೂ ಅನಗತ್ಯವಾಗಿ ಕೈಬಿಡದಂತೆ ಜಾಗೃತಿ ವಹಿಸಬೇಕು ಎಂದು ಹೇಳಿದರು.
ಅರ್ಜಿ ಭರ್ತಿ ಮಾಡುವ ಜವಾಬ್ದಾರಿಯನ್ನು ಇತರರ ಮೇಲೆ ಹಾಕದೆ ಸ್ವತ@ ಪರಿಶೀಲಿಸಿ ಸಲ್ಲಿಸಬೇಕು. ಹೆಸರು, ಜನ್ಮ ದಿನಾಂಕ, ವಿಳಾಸ, ಕುಟುಂಬದ ವಿವರ ಸೇರಿ ಯಾವುದೇ ಮಾಹಿತಿಯಲ್ಲಿ ತಪ್ಪು ಉಂಟಾದರೆ ಮುಂದೆ ಮತದಾರರ ಪಟ್ಟಿಯಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಈ ಹಿಂದೆ ಕೆಲವೆಡೆ ಜಾಗೃತಿಯ ಕೊರತೆ ಹಾಗೂ ದಾಖಲೆಗಳಲ್ಲಿನ ವ್ಯತ್ಯಾಸಗಳಿಂದ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟಿರುವ ಉದಾಹರಣೆಗಳಿವೆ ಎಂದು ಎಚ್ಚರಿಸಿದರು.
ಪ್ರಾತ್ಯಕೆ ಮೂಲಕ ಎಸ್​ಐಆರ್​ ಅರ್ಜಿ ಭರ್ತಿ ಮಾಡುವ ವಿಧಾನ ವಿವರಿಸಿದ ಅವರು, ಅಗತ್ಯ ದಾಖಲೆ ಭರ್ತಿಮಾಡಿ, ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದರು. ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾಗಿದ್ದು, ಅದನ್ನು ಕಾಪಾಡಿಕೊಳ್ಳಲು ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.
ಹಫೀಜ್​ ಅಲ್ತಾಫ ಮೌಲಾನಾ, ಬೈತೂಲ್​ ಮಾಲ್​ ಜಿಲ್ಲಾಧ್ಯ ಮಹ್ಮದ ಏಕ್ಬಾಲ್​ ಸಾಬ್​, ನಿವೃತ ತಹಶೀಲ್ದಾರ್​ ನಿಸಾರ್​ ವಜೀರ್​, ಜನಾಬ್​ ಹಿದಾಯತ್​, ಅಫಜಲ್​ ಮಹೆಮೂದ್​, ಫೈರೋಜ್​ಖಾನ್​ ವಾಡಿ, ರಫೀಕ್​ ಬಾಗವಾನ, ಶಮಶೋದ್ದಿನ್​ ಮೌಲಾನಾ , ಅಬ್ದುಲ ಖದಿರ ಸಾಬ್​, ಅಬ್ದುಲ್​ ಅಫಸರ್​ ಸೇಠ್​, ಮುನಾಫ್​ ಸಾಹೇಬ್​, ಅಬ್ದುಲ್​ ರಬ್​ ಇಂಗಳಗಿ, ಜಹೀರ್​ ಅಹ್ಮದ ಇತರರಿದ್ದರು.
"

ಎಸ್​ಐಆರ್​ ಕುರಿತು ಸಮಾಜದಲ್ಲಿ ಅನಗತ್ಯ ಭಯ, ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಈ ವದಂತಿಗಳಿಗೆ ಕಿವಿಗೊಡದೆ ಅಧಿಕೃತ ಮಾಹಿತಿ ಪಡೆದು ಕಾರ್ಯನಿರ್ವಹಿಸಬೇಕು. ಈ ಪ್ರಕ್ರಿಯೆ ನಡೆಯುವ ವೇಳೆ ಬಿಎಲ್​ಒಗಳಿಗೆ ಅಗತ್ಯ ದಾಖಲೆ, ಸಮರ್ಪಕ ಮಾಹಿತಿ ಒದಗಿಸಿ ಪರಿಶೀಲನೆಗೆ ಸಹಕರಿಸಬೇಕು. ಮತದಾರರ ಹಕ್ಕು ಸುರತವಾಗಿರುವಂತೆ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು.

— ಡಾ.ಫಾರುಕ್​ ಮಣ್ಣೂರ, ಮುಖ್ಯಸ್ಥರು, ಮಣ್ಣೂರ್​ ಆಸ್ಪತ್ರೆ, ಕಲಬುರಗಿ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net